ಕುದ್ರೋಳಿ ದಸರಾ ಮೆರವಣಿಗೆ ವಾಹನ ಸಂಚಾರದಲ್ಲಿ ಬದಲಾವಣೆ

3:22 PM, Wednesday, October 24th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Kudroli Templeಮಂಗಳೂರು: ಅ.24 ರಂದು ಸಂಜೆ 4 ಗಂಟೆಗೆ ಕುದ್ರೋಳಿ ದಸರಾ ಶೋಭಾಯಾತ್ರೆಯು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಹೊರಡಲಿದೆ. ಮಣ್ಣಗುಡ್ಡೆ, ಲೇಡಿಹಿಲ್, ಲಾಲ್ ಬಾಗ್, ಪಿವಿಎಸ್, ನವಭಾರತ್ ವೃತ್ತ, ಕೆ.ಎಸ್.ರಾವ್ ರಸ್ತೆ, ಕೆ.ಬಿ.ವೃತ್ತ, ಗಣಪತಿ ಹೈಸ್ಕೂಲ್ ರಸ್ತೆ, ಮೋಹಿನಿ ವಿಲಾಸ, ಓಂ ಮಹಲ್ ಜಂಕ್ಷನ್, ರಥಬೀದಿ, ಲೋವರ್ ಕಾರ್ ಸ್ಟ್ರೀಟ್, ನ್ಯೂಚಿತ್ರ, ಅಳಕೆಯ ಮೂಲಕ ಕುದ್ರೋಳಿ ದೇವಳಕ್ಕೆ ಬಂದು  ದೇವಳದ ಕೆರೆಯಲ್ಲಿ ವಿಗ್ರಹ ಜಲಸ್ತಂಭನಗೊಳ್ಳಲಿದೆ.

ಈ ಸಂದರ್ಭದಲ್ಲಿ 30,000 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಿರುವುದರಿಂದ ಮೆರವಣಿಗೆ ಸಾಗಿದಂತೆಲ್ಲಾ ಆಯಾ ರಸ್ತೆಗಳಿಗೆ ಅನ್ವಯವಾಗುವಂತೆ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲು ಆದೇಶ ಹೊರಡಿಸಲಾಗಿದೆ. ಮೆರವಣಿಗೆ ಆರಂಭವಾದ ಕೂಡಲೇ ನ್ಯೂಚಿತ್ರದಿಂದ ಕುದ್ರೋಳಿ ಕಡೆಗೆ, ಅಳಕೆ ಜಂಕ್ಷನ್ ನಿಂದ ಕುದ್ರೋಳಿ ದೇವಸ್ಥಾನದ ಕಡೆಗೆ ವಾಹನ ಸಂಚಾರ ನಿಷೇಧವಿರುತ್ತದೆ.

ಕುದ್ರೋಳಿ ದೇವಸ್ಥಾನದ ಸೌತ್ ಗೇಟ್ ಮತ್ತು ನಾರ್ತ್ ಗೇಟ್ ರಸ್ತೆಗಳೆಡರಲ್ಲಿಯೂ ವಾಹನ ಸಂಚಾರ ಹಾಗೂ ನಿಲುಗಡೆ ನಿಷೇಧಿಸಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English