ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭ

10:10 AM, Thursday, November 14th, 2019
Share
1 Star2 Stars3 Stars4 Stars5 Stars
(No Ratings Yet)
Loading...

MCC

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು, ಬಿಜೆಪಿ ಇದುವರೆಗೆ ಐದು ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದೆ.

ಸುರತ್ಕಲ್ ಪಶ್ಚಿಮ 1ನೇ ವಾರ್ಡ್‌ ಹಾಗೂ ಸೆಂಟ್ರಲ್ ಮಾರ್ಕೆಟ್ ವಾರ್ಡ್ 41ರಲ್ಲಿ ಗೆದ್ದಿರುವ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ.

ಸುರತ್ಕಲ್ ಪಶ್ಚಿಮ 1ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಶೋಭಾ ರಾಜೇಶ್ ವಿಜಯಿಯಾಗಿದ್ದಾರೆ. ಶೋಭಾ ರಾಜೇಶ್ 985 ಮತಗಳನ್ನು ಗಳಿಸಿದರೆ, ಅವರ ನಿಕಟ ಪ್ರತಿಸ್ಪರ್ಧಿ ರೇವತಿ ಪುತ್ರನ್ 760 ಮತ, ಶಾಂತಾ ರಾವ್ 548 ಮತಗಳನ್ನು ಪಡೆದಿದ್ದಾರೆ. 21 ನೋಟಾ ಚಲಾವಣೆಯಾಗಿದೆ.

ಸೆಂಟ್ರಲ್ ಮಾರ್ಕೆಟ್ ವಾರ್ಡ್ 41ರಲ್ಲಿ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಗೆಲುವು ಸಾಧಿಸಿದ್ದಾರೆ. ಪೂರ್ಣಿಮಾ 2037 ಮತಗಳನ್ನು ಗಳಿಸಿದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಮಮತಾ ಶೆಣೈ 426 ಮತಗಳನ್ನಷ್ಟೇ ಗಳಿಸಲು ಶಕ್ತರಾಗಿದ್ದಾರೆ. ಪಕ್ಷೇತರ ಅಭ್ಯರ್ಥಿ ರೇಖಾ ಸುರೇಂದ್ರ 210 ಮತಗಳನ್ನು ಪಡೆದಿದ್ದಾರೆ. 18 ನೋಟಾ ಚಲಾವಣೆಯಾಗಿವೆ.

ವಾರ್ಡ್ 51 ಅಳಪೆ ಉತ್ತರ: 2083 ಮತಗಳನ್ನು ಗಳಿಸಿರುವ ಬಿಜೆಪಿಯ ರೂಪಾಶ್ರೀ ಪೂಜಾರಿಗೆ ಗೆಲುವು. ಕಾಂಗ್ರೆಸ್‌ನ ಶೋಭಾ 2007 ಮತಗಳನ್ನು ಗಳಿಸಿದ್ದಾರೆ.

ವಾರ್ಡ್ 21 ಪದವು ಪಶ್ಚಿಮ: ಬಿಜೆಪಿಯ ವಣಿತಾ ಪ್ರಸಾದ್ 1051 ಮತಗಳನ್ನು ಜಯ ಸಾಧಿಸಿದ್ದಾರೆ.

ವಾರ್ಡ್ 56 ಮಂಗಳಾದೇವಿ: ಬಿಜೆಪಿಯ ಪ್ರೇಮಾನಂದ ಶೆಟ್ಟಿ 2,187 ಮತಗಳನ್ನು ಗೆಲುವು ಸಾಧಿಸಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English