ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 18 ಗೆಲುವು, ಕಾಂಗ್ರೆಸ್ ಗೆ 7ರಲ್ಲಿ ಗೆಲುವು

10:43 AM, Thursday, November 14th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

MCC

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆಯ ಫಲಿತಾಂಶ ಪ್ರಕಟವಾಗಿರುವ ವಾರ್ಡ್ ಗಳಲ್ಲಿ ಬಿಜೆಪಿ 18, ಕಾಂಗ್ರೆಸ್ ಗೆ 7ರಲ್ಲಿ ಗೆಲುವು ಸಾಧಿಸಿದೆ.

ವಾರ್ಡ್ ನಂ.3 ಕಾಟಿಪಳ್ಳ ಪೂರ್ವ: 2486 ಮತಗಳನ್ನು ಗಳಿಸಿರುವ ಬಿಜೆಪಿಯ ಲೋಕೇಶ್ ಬೊಳ್ಳಾಜೆ ಗೆಲುವು ಸಾಧಿಸಿದ್ದಾರೆ. ನಿಕಟಪೂರ್ವ ಕಾರ್ಪೊರೇಟರ್ ಬಶೀರ್ ಅಹ್ಮದ್ ಗೆ‌ ಸೋಲುಂಡಿದ್ದಾರೆ.

ವಾರ್ಡ್ ನಂ.57 ಹೊಯ್ಗೆ ಬಝಾರ್: ಬಿಜೆಪಿಯ ರೇವತಿ ಶ್ಯಾಂಸುಂದರ್ 2116 ಮತಗಳನ್ನು ಪಡೆದು ಜಯಸಿದ್ದಾರೆ.

ವಾರ್ಡ್ ನಂ.6 ಇಡ್ಯಾ ಪೂರ್ವ: ಬಿಜೆಪಿಯ ಸರಿತಾ ಶಶಿಧರ್ 2233 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ವಾರ್ಡ್ ನಂ.27 ಬೋಳೂರು: ಬಿಜೆಪಿಯ ಜಗದೀಶ್ ಶೆಟ್ಟಿಗೆ ಗೆಲುವು

ವಾರ್ಡ್ ನಂ.8 ಹೊಸಬೆಟ್ಟು ವಾರ್ಡ್ ನಲ್ಲಿ ಬಿಜೆಪಿಯ ವರುಣ್ ಚೌಟ ಗೆಲುವಿನ ನಗೆ ಬೀರಿದ್ದಾರೆ.

ವಾರ್ಡ್ ನಂ.11 ಪಣಂಬೂರು ಬೇಂಗ್ರೆ: ಬಿಜೆಪಿಯ ಸುನೀತಾ 1,236 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ವಾರ್ಡ್ ನಂ.32 ಕದ್ರಿ ಉತ್ತರ: ಬಿಜೆಪಿಯ ಶಕೀಲಾ ಕಾವಾ 1813 ಮತಗಳನ್ನು ಗಳಿಸಿ ಜಯಿಸಿದ್ದಾರೆ.

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English