ಮಂಗಳೂರು ಮನಪಾ ಚುನಾವಣೆ : 60 ವಾರ್ಡ್ ಗಳಲ್ಲಿ 20 ಗೆಲುವು ಸಾಧಿಸಿರುವ ಬಿಜೆಪಿ

10:58 AM, Thursday, November 14th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

BJP

ಮಂಗಳೂರು : 60 ವಾರ್ಡ್ ಗಳಲ್ಲಿ ಪ್ರಕಟವಾಗಿರುವ ಫಲಿತಾಂಶದಲ್ಲಿ 20ರಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಬಹುಮತದತ್ತ ದಾಪುಗಾಲಿಡುತ್ತಿದೆ. ಕಾಂಗ್ರೆಸ್ ಕೇವಲ 9 ವಾರ್ಡ್ ಗಳಲ್ಲಿ ಮಾತ್ರ ಜಯಿಸುವ ಮೂಲಕ ತೀವ್ರ ಹಿನ್ನಡೆ ಅನುಭವಿಸಿದೆ.

ವಾರ್ಡ್ ನಂ.43 ಕುದ್ರೊಳಿ: ಕಾಂಗ್ರೆಸ್ ನ ಸಂಶುದ್ದೀನ್ 743 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ. ನಿಕಟಪೂರ್ವ ಕಾರ್ಪೊರೇಟರ್ ಅಝೀಝ್ ಕುದ್ರೋಳಿ ಸೋಲುಂಡಿದ್ದಾರೆ.

ವಾರ್ಡ್ ನಂ.7 ಇಡ್ಯಾ ಪಶ್ಚಿಮ: ಬಿಜೆಪಿಯ ನಯನಾ ಆರ್. ಕೋಟ್ಯಾನ್ ರಿಗೆ ಗೆಲುವು. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಾ ಕುಳಾಯಿ ಸೋಲುಂಡಿದ್ದಾರೆ.

ವಾರ್ಡ್ 36 ಪದವು ಪೂರ್ವ: 2492 ಮತಗಳನ್ನು ಗಳಿಸಿದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಮೇಯರ್ ಭಾಸ್ಕರ್ ಕೆ. ಅವರಿಗೆ ಗೆಲುವು

ನಂ.6 ಇಡ್ಯಾ ಪೂರ್ವ ವಾರ್ಡ್: 2229 ಮತಗಳನ್ನು ಗಳಿಸಿರುವ ಬಿಜೆಪಿಯ ಸರಿತಾ ಶಶಿಧರ್ ಗೆ ಜಯ

ವಾರ್ಡ್ 2 ಸುರತ್ಕಲ್ ಪೂರ್ವ: 2496 ಮತಗಳನ್ನು ಗಳಿಸಿರುವ ಬಿಜೆಪಿಯ ಶ್ವೇತಾರಿಗೆ ಗೆಲುವು

ವಾರ್ಡ್ 42 ಡೊಂಗರಕೇರಿ: 2140 ಮತಗಳನ್ನು ಗಳಿಸಿರುವ ಬಿಜೆಪಿಯ ಜಯಶ್ರೀ ಕುಡ್ವರಿಗೆ ಗೆಲುವು

ವಾರ್ಡ್ 16 ಬಂಗ್ರ ಕೂಳೂರು: 2308 ಮತಗಳನ್ನು ಗಳಿಸಿರುವ ಬಿಜೆಪಿಯ ಕಿರಣ್ ಕುಮಾರ್ ಜಯಿಸಿದ್ದಾರೆ.

ವಾರ್ಡ್ 52 ಕಣ್ಣೂರು: ಬಿಜೆಪಿಯ ಚಂದ್ರಾವತಿಗೆ ಗೆಲುವು

ವಾರ್ಡ್ 31 ಬಿಜೈ: 1939 ಮತಗಳನ್ನು ಗಳಿಸಿರುವ ಕಾಂಗ್ರೆಸ್ ಲ್ಯಾನ್ಸಿ ಲಾಟ್ ಪಿಂಟೋ 7ನೆ ಬಾರಿ ಗೆಲುವು ಸಾಧಿಸಿದ್ದಾರೆ.

ವಾರ್ಡ್ 33 ಕದ್ರಿ ದಕ್ಷಿಣ: ಕಾಂಗ್ರೆಸ್ ಡಿ.ಕೆ.ಅಶೋಕ್ ಕುಮಾರ್ ರಿಗೆ ಗೆಲುವು

ವಾರ್ಡ್ 12 ಪಂಜಿಮೊಗರು: ಕಾಂಗ್ರೆಸ್ ಅನಿಲ್ ಕುಮಾರ್ ಗೆಲುವು ಸಾಧಿಸಿದ್ದಾರೆ.

ವಾರ್ಡ್ ನಂ.53 ಬಜಾಲ್: ಕಾಂಗ್ರೆಸ್ ನ ಅಶ್ರಫ್ ಬಜಾಲ್ 1,660 ಮತಗಳನ್ನು ಪಡೆದು ಗೆಲುವು ಪಡೆದಿದ್ದಾರೆ.

ವಾರ್ಡ್ ನಂ.22 ಕದ್ರಿ ಪದವು: ಬಿಜೆಪಿಯ ಜಯಾನಂದ ಅಂಚನ್ ರಿಗೆ ಜಯ

ವಾರ್ಡ್ ನಂ.12 ಪಂಜಿಮೊಗರು: ಕಾಂಗ್ರೆಸ್ ನ ಅನಿಲ್ ಕುಮಾರ್ ಗೆ ಗೆಲುವು

ವಾರ್ಡ್ ನಂ.18 ಕಾವೂರು: ಬಿಜೆಪಿಯ ಗಾಯತ್ರಿ ಎ. ಅವರು 3296 ಮತಗಳನ್ನು ಗಳಿಸಿ ವಿಜಯಿಯಾಗಿದ್ದಾರೆ.

ವಾರ್ಡ್ ನಂ.38 ಬೆಂದೂರ್: ಕಾಂಗ್ರೆಸ್ ನ ನವೀನ್ ಆರ್. ಡಿಸೋಜ 1598 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ.

ವಾರ್ಡ್ ನಂ.39: ಕಾಂಗ್ರೆಸ್ಸಿನ ಜೆಸಿಂತಾ ಆಲ್ಫ್ರೆಡ್ 1092 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ.

ವಾರ್ಡ್ ನಂ.44: ಬಂದರ್: ಝೀನತ್ ಸಂಶುದ್ದೀನ್ 1308 ಮತಗಳನ್ನು ಗಳಿಸಿ ಜಯಬೇರಿ ಬಾರಿಸಿದ್ದಾರೆ.

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English