ಮನೆಗೆ ತೆರಳಿ ಪೂಜೆ ಮಾಡಿದ ಅರ್ಚಕನಿಗೆ ಬ್ಲಾಕ್‌ ಮೇಲ್‌ ಮಾಡಿ 20 ಲಕ್ಷ ರೂಪಾಯಿ ವಸೂಲಿ ಮಾಡಿದ ಐನಾತಿಗಳು

4:17 PM, Thursday, November 14th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Purohithಮೈಸೂರು ; ಅರ್ಚಕ ವೃತ್ತಿ ನಡೆಸಿಕೊಂಡಿರುವ ವ್ಯಕ್ತಿಯೊಬ್ಬರಿಗೆ ಮೂವರು ಐನಾತಿಗಳು ಸೇರಿ ಬ್ಲಾಕ್‌ ಮೇಲ್‌ ಮಾಡಿ ಬರೋಬ್ಬರಿ 20 ಲಕ್ಷ ರೂಪಾಯಿ ವಸೂಲಿ ಮಾಡಿದ ಘಟನೆ ವರದಿ ಆಗಿದೆ. ಪೋಲೀಸರು ಆರೋಪಿಗಳ ಹೆಡೆಮುರಿ ಕಟ್ಟಿ 13.77 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಿದ್ದಾರೆ.

ನಡೆದಿದ್ದೇನು ಗೊತ್ತಾ ? ಕೊಳ್ಳೇಗಾಲದಲ್ಲಿ ಆಂಜನೇಯ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾಗಿರುವ ರಾಘವನ್‌ ಭಕ್ತರ ಕೋರಿಕೆಯ ಮೇರೆಗೆ ವಿವಿಧ ಊರುಗಳಿಗೆ ತೆರಳಿ ಪೂಜಾ , ಹವನ ,ಹೋಮ ಕಾರ್ಯ ನಡೆಸಿಕೊಡುತಿದ್ದರು. ಅದರಂತೆ ಆರು ತಿಂಗಳ ಹಿಂದೆ ಬೆಂಗಳೂರಿನ ಹೆಸರಘ್ಟಟ್ಟದ ನಿವಾಸಿ ಸರೋಜಮ್ಮ ಎಂಬುವವರ ಮನೆಗೂ ತೆರಳಿ ಪೂಜೆ ಮಾಡಿಕೊಟ್ಟು ಬಂದಿದ್ದರು. 15 ದಿನಗಳ ನಂತರ ಅರೋಪಿಗಳಾದ ಸರೋಜಮ್ಮ , ಆಕೆಯ ಸಂಭಂದಿಕರಾದ ನಾಗರತ್ನಮ್ಮ ಮತ್ತು ಬಸವರಾಜು ಅರ್ಚಕರನ್ನು ಸಂಪರ್ಕಿಸಿ ನಿಮ್ಮ ಮೇಲೆ ಅತ್ಯಚಾರದ ಆರೋಪ ಹೊರಿಸಿ ಪೋಲೀಸರಿಗೆ ದೂರು ನೀಡಿ ಟಿವಿ ಚಾನೆಲ್‌ ಗಳಲ್ಲಿ ಪ್ರಚಾರ ಮಾಡುವುದಾಗಿಯೂ ಬೆದರಿಸಿದರು. ಸುಮ್ಮನಿರಬೇಕಾದರೆ 20 ಲಕ್ಷ ರೂಪಾಯಿಗಳನ್ನು ನೀಡುವಂತೆಯೂ ಬೇಡಿಕೆಯನ್ನಿಟ್ಟರು. ಬೆದರಿಕೆಗೆ ಮಣಿದ ರಾಘವನ್‌ ಅರೋಪಿಗಳಿಗೆ ಕಂತಿನಲ್ಲಿ 20 ಲಕ್ಷ ರೂಪಾಯಿಗಳನ್ನು ನೀಡಿದರು.
ಇದರಿಂದ ಮತ್ತಷ್ಟು ಉತ್ತೇಜಿತರಾದ ಆರೋಪಿಗಳು ಮೂರು ತಿಂಗಳ ಹಿಂದೆ ರಾಘವನ್‌ ಅವರಿಗೆ ಕರೆ ಮಾಡಿ 50 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟರು. ಇವರ ಕರೆಯನ್ನು ರೆಕಾರ್ಡ್‌ ಮಾಡಿಕೊಂಡಿದ್ದ ರಾಘವನ್‌ ಅದನ್ನು ಪೋಲೀಸರಿಗೆ ಒಪ್ಪಿಸಿದರು. ಅದರಂತೆ ಪೋಲೀಸರ ಸೂಚನೆ ಮೇರೆಗೆ ಆರೋಪಿಗಳಿಗೆ ಹಣ ನೀಡುವುದಾಗಿ ಮದ್ದೂರಿಗೆ ಮಂಗಳವಾರ ಕರೆಸಿಕೊಳ್ಳಲಾಯಿತು. ಹಣ ಪಡೆಯಲು ಮೂವರೂ ಅರೋಪಿಗಳು ಬಂದಾಗ ಪೋಲೀಸರು ಬಂಧಿಸಿದ್ದಾರೆ.

ಆರೋಪಿಗಳು ಈ ಹಿಂದೆ ವಸೂಲಿ ಮಡಿದ್ದ ಹಣದಲ್ಲಿ 13.77 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.ಮದ್ದೂರು ಪೋಲೀಸ್‌ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English