ಜನರ ಪ್ರೀತಿ, ಪೂಜೆ, ಹರಕೆಯಿಂದ ಫಲ ಸಿಕ್ಕಿದೆ : ಡಿ.ಕೆ ಶಿವಕುಮಾರ್

4:26 PM, Friday, November 15th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

DKShiv-Kumar

ನವದೆಹಲಿ : ಕಾನೂನು ಮತ್ತು ಸಮಯ ಉತ್ತರ ಕೊಡುತ್ತೆ ಅಂತಾ ಮೊದಲೇ ಹೇಳಿದ್ದೆ. ನ್ಯಾಯಬದ್ಧ ವ್ಯವಹಾರಗಳನ್ನು ಮಾಡಿದ್ದೇವೆ, ಹೀಗಾಗಿ ನ್ಯಾಯವಾಗಿ ಹೋರಾಡಿದ್ದೇವೆ. ರಾಜ್ಯದ ಜನರ ಪ್ರೀತಿ, ಪೂಜೆ, ಹರಕೆಗೆ ಈಗ ಫಲ ಸಿಕ್ಕಿದೆ ಎಂದು ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ದೆಹಲಿ ಹೈಕೋರ್ಟ್ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಇಡಿ ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನ್ಯಾಯಾಲಯದ ಬಗ್ಗೆ ನಂಬಿಕೆ ಇದೆ. ಇಡಿ ಅವರು ಪ್ರಯತ್ನ ಮಾಡ್ತಿದ್ದಾರೆ. ಅವರು ತಪ್ಪು ಎಂದು ನಾವು ಹೇಳುವುದಿಲ್ಲ. ರಾಜ್ಯದ ಜನರು ಪ್ರೀತಿಯಿಂದ ಪೂಜೆ, ಹರಿಕೆ, ಹೋರಾಟ ಮಾಡಿದ್ದಾರೆ. ಜನರ ಪೂಜೆಗೆ ಈಗ ಫಲ ಸಿಕ್ಕಿದೆ. ನ್ಯಾಯಬದ್ಧ ವ್ಯವಹಾರಗಳನ್ನು ಮಾಡಿದ್ದೇವೆ. ಹೀಗಾಗೀ ಪ್ರತಿ ಹಂತದಲ್ಲೂ ನ್ಯಾಯಬದ್ಧವಾಗಿದ್ದೇವೆ. ಆದ್ದರಿಂದ ನಮಗೆ ನ್ಯಾಯಾಲಯಗಳಿಂದ ನ್ಯಾಯ ಸಿಕ್ಕಿದೆ ಎಂದು ಹೇಳಿದರು.

ಮಾಜಿ ಗೃಹ ಸಚಿವ ಅನ್ನೊ ಉಲ್ಲೇಖಕ್ಕೆ ಪ್ರತಿಕ್ರಿಯಿಸಿ, ಮಾಧ್ಯಮಗಳಿಗೆ ಅನುಕೂಲ ಆಗುವಂತೆ ಇಡಿ ಸುಳ್ಳು ಹೇಳಿದೆ. ನಮ್ಮ ಕುಟುಂಬದ 5-6 ಖಾತೆ ಇರಬೇಕು ಅಷ್ಟೇ. ಆದರೆ ನೂರಾರು ಖಾತೆ ಇದೆ ಅನ್ನೊಂದು ಸುಳ್ಳು ಮಾತು. ನಮಗೆ ತೊಂದರೆ ಕೊಡಬೇಕು ಎಂದು ಸುಖಾ ಸುಮ್ಮನೆ ಆರೋಪ ಮಾಡಿದ್ದಾರೆ. ಇದರ ಬಗ್ಗೆ ನಾನು ಕಾಮೆಂಟ್ ಮಾಡಲ್ಲ. ಇಡಿ ಅರ್ಜಿಗೆ ಉತ್ತರ ಕೊಡಲು ಸಿದ್ಧವಾಗಿದ್ದೇವೆ. ಆದರೆ ಸುಪ್ರೀಂ ಕೋರ್ಟ್ ಇದಕ್ಕೆ ನ್ಯಾಯ ನೀಡಿದೆ ಎಂದು ತಿಳಿಸಿದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English