ಕೇವಲ ರಾಮಮಂದಿರ ಮಾತ್ರವಲ್ಲ, ವೈದಿಕ ಜ್ಞಾನ ಪರಂಪರೆಯ ಪ್ರತೀಕವಾಗಲಿ : ಬಾಬಾ ರಾಮದೇವ್‌

10:12 AM, Saturday, November 16th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Baba-Ramdev

ಉಡುಪಿ : ಅಯೋಧ್ಯೆ ಎಂದರೆ ಕೇವಲ ರಾಮಮಂದಿರ ಮಾತ್ರವಲ್ಲ, ವೈದಿಕ ಜ್ಞಾನ ಪರಂಪರೆಯ ಪ್ರತೀಕವಾಗಲಿ ಎಂದು ಯೋಗಗುರು ಬಾಬಾ ರಾಮದೇವ್‌ ತಿಳಿಸಿದರು. ಉಡುಪಿಗೆ ಆಗಮಿಸಿ ಶ್ರೀಕೃಷ್ಣ ಮಠದಲ್ಲಿ ದೇವರ ದರ್ಶನ ಪಡೆದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಾಟಿಕನ್‌, ಮೆಕ್ಕಾದ ರೀತಿಯಲ್ಲಿ ರಾಮಮಂದಿರ ರೂಪುಗೊಳ್ಳಬೇಕು. ಹಿಂದೂಗಳ ಮಹಾ ತೀರ್ಥಕ್ಷೇತ್ರವಾಗಲಿ ಎಂಬುದು ನನ್ನ ಬಯಕೆ. ಅಯೋಧ್ಯೆ ಜ್ಞಾನ ತೀರ್ಥವಾಗಲಿ, ವಿದ್ಯಾಪರಂಪರೆಯ ಪ್ರತೀಕವಾಗಲಿ ಎಂದರು. ದೇಶದ ಅನೇಕ ಮಹಾಪುರುಷರ ಆಂದೋ ಲನದ ಫ‌ಲವಾಗಿ ಅಯೋಧ್ಯೆಯಲ್ಲಿ ಈ ವಾತಾವರಣ ನಿರ್ಮಾಣವಾಗಿದೆ. ಈ ಎಲ್ಲಾ ಮಹಾನುಭಾವರ ಒಳಗೊಳ್ಳುವಿಕೆಯಿಂದ ಟ್ರಸ್ಟ್‌ ನಿರ್ಮಾಣವಾಗಲಿ ಎಂದು ಅವರು ಹಾರೈಸಿದರು.

ರಾಮನವಮಿ ದಿನವೇ ರಾಮ ಮಂದಿರಕ್ಕೆ ಶಿಲಾನ್ಯಾಸವಾಗಲಿ. ಪ್ರಧಾನಿಯವರೇ ಶಿಲಾನ್ಯಾಸ ಮಾಡಲಿ. ಸರಕಾರವೇ ನೇರವಾಗಿ ರಾಮಮಂದಿರ ನಿರ್ಮಾಣ ಮಾಡಲು ಸಾಧ್ಯವಿಲ್ಲ, ಆದರೆ ಪ್ರಧಾನಿ ಶಿಲಾನ್ಯಾಸ ಮಾಡಲು ಅಡ್ಡಿಯಿಲ್ಲ. ಪ್ರಧಾನಿ ಮೋದಿ ಹಿಂದೂ ಪರಂಪರೆಯ ಪ್ರತಿನಿಧಿಯಾಗಿ ಈ ಕೆಲಸ ಮಾಡಲಿ ಎಂದರು. ಮಸೀದಿಯೂ ನಿರ್ಮಾಣವಾಗಲಿ ಮಂದಿರದ 67 ಎಕರೆ ಭೂಮಿ ಹೊರತುಪಡಿಸಿ ಮಸೀದಿ ನಿರ್ಮಾಣವಾಗಲಿ. ಅಯೋಧ್ಯೆಯಲ್ಲಿ ಮಸೀದಿಯೂ ದಿವ್ಯವಾಗಿ ನಿರ್ಮಾಣ ಅಗಲಿ. ನಮ್ಮ ದೇಶದಲ್ಲಿ ಹಿಂದೂ ಮುಸ್ಲಿಮರ ಡಿಎನ್‌ಎ ಒಂದೇ ಆಗಿದೆ ಎಂದು ರಾಮದೇವ್‌ ಅವರು ಹೇಳಿದರು.

ಹತ್ತು ವರ್ಷಗಳ ಬಳಿಕ ದೇಶದಲ್ಲಿ ಇದೇ ಮೊದಲ ಬಾರಿಗೆ ಉಡುಪಿಯಲ್ಲಿ ಐದು ದಿನಗಳ ಯೋಗ ಶಿಬಿರವನ್ನು ನಡೆಸುತ್ತಿದ್ದೇನೆ. ನಾನು ನೇರವಾಗಿ ಹತ್ತು ಕೋಟಿ ಜನರಿಗೆ ಯೋಗವನ್ನು ತಲುಪಿಸಿದ್ದು, ನಮ್ಮ ಕಾರ್ಯಕರ್ತರು 20 ಕೋಟಿ ಜನರಿಗೆ ಯೋಗದ ಪರಿಚಯ ಮಾಡಿದ್ದಾರೆ. ಯೋಗದ ಮೂಲಕ ಸ್ವಚ್ಛ ಭಾರತ- ಸ್ವಚ್ಛ ವಿಶ್ವ ಗುರಿ ಇರಿಸಿಕೊಳ್ಳಲಾಗಿದೆ. ಯೋಗದಿಂದ ಇಡೀ ಜಗತ್ತನ್ನು ರೋಗಮುಕ್ತ, ಒತ್ತಡ ಮುಕ್ತ, ಹಿಂಸಾಮುಕ್ತ ಮಾಡುವುದು ಸಾಧ್ಯ. ವೈರಭಾವ ನಿರ್ಮೂಲನ ಮಾಡುವ ಯೋಗ ಭಯೋ ತ್ಪಾದನೆಗೂ ಪರಿಹಾರವಾಗಿದೆ ಎಂದರು.

ಐದು ದಿನಗಳ ಶಿಬಿರದಿಂದ 3ರಿಂದ 5 ಕೆ.ಜಿ. ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಹೈಪರ್‌ಟೆನ್ಶನ್‌, ಬಿಪಿ, ಮಧುಮೇಹ, ಥೈರಾಯ್ಡ, ಡಿಪ್ರಶನ್‌ಗೆ ಇದು ರಾಮಬಾಣ. ಅಸಾಂಕ್ರಾಮಿಕ ರೋಗಗಳಿಗೆ ಅತಿ ಸೂಕ್ತವಾದ ಚಿಕಿತ್ಸೆಯಾಗಿದೆ. ವಿದ್ಯಾರ್ಥಿಗಳಿಗೆ ಫಿಟ್‌ನೆಸ್‌, ಮಿದುಳಿನ ಚುರುಕುತನ, ದುಶ್ಚಟ ನಿವಾರಣೆಗೂ ಪರಿಣಾಮಕಾರಿ. ಯೋಗಾಸನವೆಂದರೆ ಕೇವಲ ದೈಹಿಕ ವ್ಯಾಯಾಮವಲ್ಲ. ಇದು ಜೀವನ ಪದ್ಧತಿ, ನಾಗರಿಕತೆಯಾಗಿದೆ ಎಂದು ರಾಮದೇವ್‌ ಹೇಳಿದರು.

ಪತಂಜಲಿ ಸಮಿತಿ ಪದಾಧಿಕಾರಿ ಗಳಾದ ಭವರ್‌ಲಾಲ್‌ ಆರ್ಯ, ಕರಂಬಳ್ಳಿ ಶಿವರಾಮ ಶೆಟ್ಟಿ, ಬಾಲಾಜಿ ರಾಘವೇಂದ್ರ ಆಚಾರ್ಯ, ಸುಜಾತಾ ಮಾರ್ಲ, ಶ್ರೀಕೃಷ್ಣಮಠದ ಆಡಳಿತಾಧಿಕಾರಿ ಪ್ರಹ್ಲಾದ ರಾವ್‌ ಉಪಸ್ಥಿತರಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English