ಮನೆಯ ಎದುರು ನೇತಾಡುತ್ತಿದ್ದ ದೊಡ್ಡ ಬಲೂನು ನೋಡಿ ಹೆದರಿದ ಮನೆಯವರು

7:47 PM, Saturday, November 16th, 2019
Share
1 Star2 Stars3 Stars4 Stars5 Stars
(No Ratings Yet)
Loading...

baloonಕಾರ್ಕಳ :  ಬೆಳ್ಮಣ್ ಮನೆಯ ತೋಟದಲ್ಲಿ ಬಿಳಿ ಬಣ್ಣದ ದೊಡ್ಡ ಬಲೂನು ನೇತಾಡುತ್ತಿತ್ತು ಇದನ್ನು ನೋಡಿ ಕಂಗಾಲದ ಮನೆಯವರು ಬಾಂಬ್ ಇರಬಹುದು ಎಂದು ಭಯಪಟ್ಟು ಏಕಾಏಕಿ ಪೊಲೀಸರಿಗೆ ಪೋನಾಯಿಸಿದರು.

ಕಾರ್ಕಳ ತಾಲೂಕಿನ ಬೋಳ ಗ್ರಾಮದ ನಿವಾಸಿ ಕಿಶೋರ್ ಮೂಲ್ಯ ಅವರ ಮನೆಯಲ್ಲಿ ಈ ತರಹದ ನಿಗೂಢ ವಸ್ತುವೊಂದು ಶನಿವಾರ ಬೆಳಗ್ಗೆ ಗೋಚರಿತ್ತು.

ಮನೆಯವರ ಗಾಬರಿ ಕರೆಗೆ ಪೊಲೀಸರು, ಗ್ರಾಮ ಕರಣಿಕ ಸೇರಿ ಹಲವರು ಬಂದಿದ್ದರು. ಪೊಲೀಸರು  ಪರಿಶೀಲಿಸಿದಾಗ “ಆರ್ ಎಸ್ ಜಿ-20 ಎ ಜಿಪಿಎಸ್ ರೇಡಿಯೋ ಅನ್ವೇಷಕ” ಎಂದು ತಿಳಿದುಬಂತು. ಇದು ಹವಾಮಾನ ಸಂಬಂಧಿ ಮಾಹಿತಿ ಸಂಗ್ರಹಕ ಉಪಕರಣವಾಗಿದ್ದು, ಮಂಗಳೂರಿನ ಶಕ್ತಿನಗರದಲ್ಲಿರುವ ಕೇಂದ್ರದಿಂದ ಹಾರಿಬಿಡಲಾಗುತ್ತದೆ. ಪ್ರತಿನಿತ್ಯವು 4.30ಕ್ಕೆ ಈ ಉಪಕರಣ ಅಗಸಕ್ಕೆ ಕಳುಹಿಸಲಾಗುತ್ತದೆ . ವಾತಾವರಣ ಏರುಪೇರು, ಹವಾಮಾನ ವೈಪರೀತ್ಯ ಸಹಿತ ಹವಾಮಾನಕ್ಕೆ ಸಂಬಂಧಿಸಿದ ನಿಖರ ಮಾಹಿತಿ – ಮುನ್ಸೂಚನೆಯನ್ನು ಪಡೆದುಕೊಳ್ಳಲಾಗುತ್ತದೆ. ಕೊರಿಯಾ ನಿರ್ಮಿತವಾಗಿರುವ ಈ ಉಪಕರಣ ಹೆಚ್ಚಾಗಿ ನಿರ್ಜನ ಪ್ರದೇಶ ಅಥವಾ ಸಮುದ್ರದಲ್ಲಿ ಪತನವಾಗುತ್ತದೆ,ಕೆಲವೊಮ್ಮೆ ಮೇಲ್ಮೈ ಗಾಳಿ ಬಲವಾಗಿ ಬೀಸಿದರೆ ದಿಕ್ಕು ತಪ್ಪಿ ಅಪರೂಪ ಎಂಬಂತೆ ಜನವಸತಿ ಪ್ರದೇಶದಲ್ಲಿ ಬೀಳುತ್ತವೆ.

ಕೊನೆಗೂ ಬಾಂಬ್ ಅಥವಾ ಇನ್ಯಾವುದೋ ಭಯಪಡಬೇಕಾದ ಸಾಧನವಲ್ಲ, ಇದೊಂದು ಹವಾಮಾನ ಮಾಹಿತಿ ಸಂಗ್ರಹ ಯಂತ್ರ ಎಂದು ತಿಳಿದು ಮನೆಯವರ ಎಲ್ಲರೂ ನಿಟ್ಟುಸಿರುಬಿಟ್ಟರು..

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English