ಧರ್ಮಸ್ಥಳ ಲಕ್ಷದೀಪೋತ್ಸವ : ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಸ್ವಚ್ಛತಾ ಅಭಿಯಾನ

10:02 AM, Monday, November 18th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Ujire

ಉಜಿರೆ : ನಾಡಿನ ಪವಿತ್ರಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಇದೇ 22 ರಿಂದ 27ರ ವರೆಗೆ ನಡೆಯಲಿದ್ದು ಇದಕ್ಕೆ ಪೂರ್ವಭಾವಿಯಾಗಿ ಭಾನುವಾರ ಬೆಳ್ತಂಗಡಿ ತಾಲ್ಲೂಕಿನಾದ್ಯಂತ ನಡೆದ ಸ್ವಚ್ಛತಾಕಾರ್ಯದಲ್ಲಿ ಸಹಸ್ರಾರುಜನ ಸ್ವಯಂ ಪ್ರೇರಣೆಯಿಂದ ಭಾಗವಸಿದರು.

ಉಜಿರೆಯಿಂದ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದತನಕ, ಬೆಳ್ತಂಗಡಿಯಿಂದ ಉಜಿರೆ ಪೇಟೆವರೆಗೆ, ಬೆಳ್ತಂಗಡಿ ಸಂತೆಕಟ್ಟೆಯಿಂದ ಬಸ್ ನಿಲ್ದಾಣದತನಕ, ಗುರುವಾಯನಕೆರೆ ಪೇಟೆಯಿಂದ ವಾಣಿ ವಿದ್ಯಾ ಸಂಸ್ಥೆಗಳ ವರೆಗೆ, ಮಡಂತ್ಯಾರು ಪೇಟೆ, ನಾರಾವಿ ಪೇಟೆ, ಹೊಸಂಗಡಿ, ಪಿಲ್ಯ, ಅಳದಂಗಡಿಯಲ್ಲಿ ಭಾನುವಾರ ಬೆಳಿಗ್ಯೆ ಏಳು ಗಂಟೆಯಿಂದಒಂಬತ್ತುಗಂಟೆವರೆಗೆಜಾತಿ-ಮತ, ವಯಸ್ಸಿನ ಅಂತರವಿಲ್ಲದೆ ಸಾರ್ವಜನಿಕರು, ವಿದ್ಯಾರ್ಥಿಗಳು,

Ujire

ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯಕಾರ್ಯಕರ್ತರು ಹಾಗೂ ಸ್ವಚ್ಛತಾ ಸೇನಾನಿಗಳು ಸ್ವಚ್ಛತಾಅಭಿಯಾನದಲ್ಲಿ ಭಾಗವಹಿಸಿದರು. 21 ಕಡೆಗಳಲ್ಲಿ ನಡೆದ ಸ್ವಚ್ಛತಾಅಭಿಯಾನದಲ್ಲಿ 2721 ಮಂದಿ ಸ್ವಯಂ ಸೇವಕರು ಭಾಗವಹಿಸಿದರು.413 ಗೋಣಿ ಚೀಲಗಳಲ್ಲಿ ಕಸವನ್ನು ಸಂಗ್ರಹಿಸಿ ಗ್ರಾಮ ಪಂಚಾಯಿತಿ ಹಾಗೂ ನಗರ ಪಂಚಾಯಿತಿ ಸ್ವಚ್ಛತಾ ವಾಹನದ ಮೂಲಕ ವಿಲೇವಾರಿ ಮಾಡಲಾಯಿತು.

ಉಜಿರೆಯ ಶ್ರೀ ಜನಾರ್ದನ ಸ್ವಾಮಿದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ, ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯಕಾರ್ಯನಿರ್ವಾಹಕ ನಿರ್ದೇಶಕಡಾ.ಎಲ್.ಎಚ್.ಮಂಜುನಾಥ್, ಕಲ್ಮಂಜ ವೀರಕೇಸರಿಘಟಕ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಎಂ.ಶೆಟ್ಟಿ, ಉಜಿರೆಯಡಾ. ಎಂ.ಎಂ. ದಯಾಕರ್, ಭರತ್‌ಕುಮಾರ್, ಮೋಹನ ಶೆಟ್ಟಿಗಾರ್, ರಾಮಚಂದ್ರ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಪ್ರಾದೇಶಿಕ ನಿರ್ದೇಶಕ ಎ. ಶ್ರೀಹರಿ, ಬೂದಪ್ಪಗೌಡ, ನಿರ್ದೇಶಕ ಲಕ್ಷ್ಮಣ ಎಂ. ಹಾಗೂ ಯೋಜನಾಧಿಕಾರಿಗಳಾದ ಜಯಕರ ಶೆಟ್ಟಿ, ಪ್ರವೀಣಕುಮಾರ್ ಮೊದಲಾದವರುಅಭಿಯಾನದ ನೇತೃತ್ವ ವಹಿಸಿದರು.

Ujire

ಕಳೆದ ಒಂದು ವರ್ಷದಲ್ಲಿ ಸ್ವಚ್ಛತಾ ಸೇನಾನಿಗಳು 481 ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸಿದ್ದು 21,986 ಮಂದಿ ಸ್ವಯಂ ಸೇವಕರಾಗಿ ಭಾಗವಹಿಸಿದ್ದಾರೆ.

ಇದೇ 22 ರಂದು ಶುಕ್ರವಾರಉಜಿರೆ ಮೂಲಕ ಹತ್ತು ಸಾವಿರಕ್ಕೂ ಮಿಕ್ಕಿ ಭಕ್ತರು ಹಾಗೂ ಸಾರ್ವಜನಿಕರು ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡಲಿದ್ದಾರೆಎಂದು ಪಾದಯಾತ್ರೆ ಸಮಿತಿಯವರು ತಿಳಿಸಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English