ಬೆಳ್ತಂಗಡಿ ಮೊದಲ ಬಾರಿಗೆ ಪೋಲಿಸ್ ಪೇದೆ ಲಿಖಿತ ಪರೀಕ್ಷೆ : 125 ಹುದ್ದೆಗೆ 3200 ಮಂದಿ ಹಾಜರು

11:20 AM, Monday, November 18th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

police-pede

ಬೆಳ್ತಂಗಡಿ : ಪೊಲೀಸ್ ಇಲಾಖೆಯಲ್ಲಿ ಪೋಲಿಸ್ ಪೇದೆಗಳ ನೇಮಕಾತಿಗಾಗಿ ಬೆಳ್ತಂಗಡಿ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಭಾನುವಾರ ಉಜಿರೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಲಿಖಿತ ಪರೀಕ್ಷೆ ನಡೆಯಿತು.

ದ.ಕ.ಜಿಲ್ಲೆಯ 125 ಪಿ.ಸಿಗಳ ಆಯ್ಕೆಗೆ ರಾಜ್ಯದ 4,100 ಮಂದಿ ಅರ್ಜಿ ಸಲ್ಲಿಸಿದ್ದರು.ಈ ಪೈಕಿ 3200 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ. ಗ್ರಾಮೀಣ ಭಾಗದ ಮಂದಿಗೂ ಸೂಕ್ತ ಅವಕಾಶ ಕಲ್ಪಿಸಬೇಕು ಎಂಬ ದೃಷ್ಟಿಯಿಂದ ಮೊಟ್ಟ ಮೊದಲ ಬಾರಿಗೆ ತಾಲೂಕಿನಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಪೋಲೀಸ್ ಪೇದೆ ಆಯ್ಕೆ ಪ್ರಕ್ರಿಯೆಯನ್ನು ಸರಕಾರ ನಡೆಸಿದೆ.

ಪಾರದರ್ಶಕವಾಗಿ ಲಿಖಿತ ಪರೀಕ್ಷೆಗೆ ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿತ್ತು. ಉಜಿರೆ ಶಿಕ್ಷಣ ಸಂಸ್ಥೆಯ ಸುಮಾರು 130 ಕ್ಕೂ ಹೆಚ್ಚು ಕೊಠಡಿಯಲ್ಲಿ ಪರೀಕ್ಷಾರ್ಥಿಗಳಿಗೆ ಕಲ್ಪಿಸಲಾಗಿತ್ತು.ರಾಜ್ಯದ ನಾನಾ ಭಾಗಗಳಿಂದ ಅಭ್ಯರ್ಥಿಗಳು ಹಾಜರಾಗಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾ„ಕಾರಿ ಲಕ್ಷ್ಮೀ ಪ್ರಸಾದ್ ನಿರ್ದೇಶನದಂತೆ, ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ನೇತೃತ್ವದಲ್ಲಿ ಪರೀಕ್ಷೆಗೆ 250 ಮೇಲ್ವಿಚಾರಕರು, 12 ಪೋಲೀಸ್ ಅಧಿಕಾರಿಗಳನ್ನು ನಿಯೋಜಿಸಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English