ಧರ್ಮಸ್ಥಳದಲ್ಲಿ ರಾಷ್ಟ್ರೀಯ ಪ್ರಕೃತಿಚಿಕಿತ್ಸಾ ದಿನ ಆಚರಣೆ

9:42 AM, Tuesday, November 19th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Dharmastala

ಉಜಿರೆ : ವೈದ್ಯರು ಮಾನವೀಯತೆಯೊಂದಿಗೆ ಹಾಗೂ ನಗುಮುಖದದಿಂದ ಮಾತೃ ಹೃದಯದೊಂದಿಗೆ ರೋಗಿಗಳ ಸೇವೆ ಮಾಡಬೇಕು. ರೋಗಿಗಳ ಸೇವೆಯೇದೇವರ ಸೇವೆಯಾಗಿದೆಎಂದು ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದರು.

ಅವರು ಸೋಮವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿಎರಡನೆರಾಷ್ಟ್ರೀಯ ಪ್ರಕೃತಿಚಿಕಿತ್ಸಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಆಸ್ಪತ್ರೆ, ಜೈಲು ಮತ್ತುರುದ್ರಭೂಮಿ ನೋಡಿದಾಗನಮಗೆ ಆಧುನಿಕಜೀವನದ ಸಮಸ್ಯೆಗಳ ಅರಿವಾಗುತ್ತದೆ.ಆಧುನಿಕಜೀವನ ಶೈಲಿ, ಆಹಾರ ಸೇವನಾ ಕ್ರಮ, ಸದಾಒತ್ತಡದ ಕೆಲಸಗಳು, ಅತಿಯಾದತಂತ್ರಜ್ಞಾನದ ಬಳಕೆ, ವಾಯುಮಾಲಿನ್ಯಮೊಬೈಲ್ ಫೋನ್ ಬಳಕೆ ಇತ್ಯಾದಿ ಕಾರಣಗಳಿಂದ ಇಂದು ಎಳೆಯ ಪ್ರಾಯದಲ್ಲೇ ಮನುಷ್ಯರು ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಹೃದಯಾಘಾತ ಮೊದಲಾದ ಭೀಕರ ರೋಗಗಳಿಗೆ ಬಲಿಯಾಗುತ್ತಾರೆ.ಯೋಗ ಮತ್ತು ಪ್ರಕೃತಿಚಿಕಿತ್ಸಾ ವಿಧಾನದಿಂದ ನಾವು ಸಂಪೂರ್ಣಆರೋಗ್ಯ ಭಾಗ್ಯವನ್ನು ಹೊಂದಬಹುದುಎಂದುಅವರು ಹೇಳಿದರು
.
ಕೀಳರಿಮೆ ಹಾಗೂ ಅಹಂ ತ್ಯಜಿಸಿ ಧನಾತ್ಮಕಚಿಂತನೆಯೊಂದಿಗೆ ಸದಾ ಒಳ್ಳೆಯ ಕೆಲಸಗಳನ್ನು ಮಾಡಬೇಕು.ವೈದ್ಯರು ರೋಗಿಗಳೊಂದಿಗೆ ನಗುಮೊಗದಿಂದ ಮಾನವೀತೆಯಿಂದ ಮಾತನಾಡಿ, ಶುಶ್ರೂಷೆ ನೀಡಬೇಕುಎಂದುಅವರು ಕಿವಿಮಾತು ಹೇಳಿದರು.

ಅಲೋಪತಿ, ಹೋಮಿಯೋಪತಿ, ನೇಚುರೋಪತಿಇತ್ಯಾದಿ ವೈದ್ಯಕೀಯ ಪದ್ಧತಿಗಳಿಗಿಂತಲೂ ಮಿಗಿಲಾಗಿ ವೈದ್ಯರಿಗೆ ರೋಗಿಗಳಲ್ಲಿ ಸಿಂಪತಿ ಇರಬೇಕುಎಂದುಅವರು ಹೇಳಿದರು.

Dharmastala

ಉಪವಾಸ, ವ್ಯಾಯಾಮ, ಯೋಗಾಭ್ಯಾಸ, ನಿತ್ಯ ನಡಿಗೆಇತ್ಯಾದಿ ಕ್ರಿಯೆಗಳಿಂದ ಆರೋಗ್ಯ ಭಾಗ್ಯ ಪಡೆಯಬಹುದುಎಂದುಡಾ.ಮಂಜುನಾಥ್‌ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ನಾವು ಪಂಚೇಂದ್ರಿಯಗಳ ದಾಸರಾಗಬಾರದು.ಒಡೆಯರಾಗಬೇಕು.ಪಂಚೇಂದ್ರೀಯಗಳ ನಿಯಂತ್ರಣದಿಂದರೋಗರಹಿತವಾಗಿಆರೋಗ್ಯಪೂರ್ಣಜೀವನ ನಡೆಸಬಹುದು.ಧಾರ್ಮಿಕ ಆಚಾರ-ವಿಚಾರಗಳ ಅನುಷ್ಠಾದಿಂದ, ಸದಾಚಾರದೊಂದಿಗೆಆದರ್ಶಜೀವನ ನಡೆಸಬೇಕು. ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯೋಗ, ಪ್ರಾರ್ಥನೆ, ಧ್ಯಾನ ಮತ್ತು ಪ್ರಕೃತಿಚಿಕಿತ್ಸಾ ಪದ್ಧತಿಯನ್ನು ಸ್ವಯಂ ಅನುಷ್ಠಾನ ಮಾಡಿ ಆಚಾರ್ಯ ರಾದರುಎಂದು ಹೆಗ್ಗಡೆಯವರು ಹೇಳಿದರು.

ಪ್ರಕೃತಿಚಿಕಿತ್ಸಾ ವೈದ್ಯರು ಕೀಳರಿಮೆ ಹೊಂದದೆಅಭಿಮಾನದಿಂದ ಈ ಪದ್ಧತಿಯ ರಾಯಭಾರಿಗಳಾಗಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.
ಡಾ. ನವೀನ್ ಕೆ.ವಿ. ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಕೃತಿಚಿಕಿತ್ಸಾ ದಿನಾಚರಣೆಯ ಮಹತ್ವ ವಿವರಿಸಿದರು.

ಆಯುಷ್‌ಇಲಾಖೆಯಜಂಟಿ ನಿರ್ದೇಶಕಡಾ.ಶ್ರೀಧರ ಭಟ್, ಹೇಮಾವತಿ ವಿ. ಹೆಗ್ಗಡೆಯವರು, ಡಿ. ಹರ್ಷೇಂದ್ರಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್ ಉಪಸ್ಥಿತರಿದ್ದರು.

ಎಸ್.ಡಿ.ಎಂ.ಪ್ರಕೃತಿಚಿಕಿತ್ಸಾಮತ್ತುಯೋಗ ವಿಜ್ಞಾನಕಾಲೇಜಿನ ಪ್ರಾಂಶುಪಾಲ ಡಾ.ಪ್ರಶಾಂತ ಶೆಟ್ಟಿ ಸ್ವಾಗತಿಸಿದರು.

ಮೂಡಬಿದ್ರೆಯ ಆಳ್ವಾಸ್ ಪ್ರಕೃತಿಚಿಕಿತ್ಸಾಕಾಲೇಜಿನ ಪ್ರಾಂಶುಪಾಲೆಡಾ.ವನಿತಾರೈಧನ್ಯವಾದವಿತ್ತರು.
ಜೋಸ್ನಾ ಮತ್ತುಅನನ್ಯಕಾರ್ಯಕ್ರಮ ನಿರ್ವಹಿಸಿದರು.

ಎಂಟು ಕಾಲೇಜುಗಳಿಂದ ಮುನ್ನೂರು ಪ್ರತಿನಿಧಿಗಳು ಭಾಗವಹಿಸಿದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English