ಮಡಿಕೇರಿ: ಬಾಬ್ರಿ ಮಸೀದಿ ವಿವಾದಕ್ಕೆ ಸಂಭಂಧಿಸಿದಂತೆ ಕಳೆದ ನವೆಂಬರ್ 10 ರಂದು ಸುಪ್ರೀಂ ಕೋರ್ಟು ಐತಿಹಾಸಿಕ ತೀರ್ಪನ್ನು ನೀಡಿದ್ದು ದೇಶಾದ್ಯಂತ ಈ ತೀರ್ಪು ವಿವಿಧ ಧಾರ್ಮಿಕ ಮುಖಂಡರಿಂದ ಶ್ಲಾಘನೆಗೆ ಒಳಗಾಗಿದೆ. ದೇಶದಲ್ಲಿ ಕೋಮು ಸೌಹಅರ್ದತೆಯನ್ನು ಬೆಸೆಯುವ ತೀರ್ಪು ಎಂದು ಮೆಚ್ಚುಗೆಗೆ ಪಾತ್ರವಾಗಿರುವುದು ದೇಶಾದ್ಯಂತ ಎಲ್ಲೂ ಒಂದೂ ಅಹಿತಕರ ಘಟನೆ ನಡೆಯದಿರುವುದೇ ಸಾಕ್ಷಿಯಾಗಿದೆ.
ಸುಂಟಿಕೊಪ್ಪದಲ್ಲಿ ಸಂಘಟನೆಯೊಂದು ಸಮಾಜದ ಶಾಂತಿ ಕದಡುವ ಉದ್ದೇಶದಿಂದ ತೀರ್ಪನ್ನು ವಿರೋದಿಸುವಂತೆ ಕರೆ ನೀಡಿದೆ. ಕರಪತ್ರದ ಮೂಲಕ ಮಾಡಿರುವ ಮನವಿಯಲ್ಲಿ ಬಾಬ್ರಿ ಮಸೀದಿ ತೀರ್ಪಿನಲ್ಲಿ ನ್ಯಾಯವನ್ನು ನಿರಾಕರಿಸಲಾಗಿದೆ , ವಿವಾದಿತ ಸ್ಥಳದಲ್ಲಿ ಯಾವುದೇ ಮಂದಿರ ಇರಲಿಲ್ಲ , ಅದು ಕಟ್ಟು ಕಥೆ ಎಂದು ಪ್ರತಿಪಾದಿಸಿದೆ. ಈ ಭಿತ್ತಿ ಪತ್ರಗಳನ್ನು ಸೋಮವಾರ ರಾತ್ರಿ ಸುಂಟಿಕೊಪ್ಪದ ಬಸ್ ತಂಗುದಾಣ ಮತ್ತು ಪಟ್ಟಣ ಪಂಚಾಯ್ತಿ ಕಚೇರಿಯ ಗೋಡೆಗಳ ಮೇಲೆ ಅಂಟಿಸಲಾಗಿದ್ದು ವಿಷಯ ತಿಳಿದ ಕೂಡಲೇ ಸುಂಟಿಕೊಪ್ಪ ಗ್ರಾಮ ಪಂಚಾಯ್ತಿ ದೂರು ದಾಖಲಿಸಿದೆ. ಸಬ್ ಇನ್ಸ್ ಪೆಕ್ಟರ್ ತಿಮ್ಮಪ್ಪ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.
Click this button or press Ctrl+G to toggle between Kannada and English