ಲಕ್ಷದೀಪೋತ್ಸವಕ್ಕೆ ಸಜ್ಜುಗೊಂಡ ಧರ್ಮಸ್ಥಳ : ಎಲ್ಲೆಲ್ಲಿ ಏನೇನಿದೆ ಈ ವರದಿ ನೋಡಿ

9:19 PM, Thursday, November 21st, 2019
Share
1 Star2 Stars3 Stars4 Stars5 Stars
(5 rating, 1 votes)
Loading...

lakshadeepa ಧರ್ಮಸ್ಥಳ :  ಕಾರ್ತಿಕ ಮಾಸದಲ್ಲಿ ನಡೆಯುವ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಶುಕ್ರವಾರ ಹೊಸಕಟ್ಟೆ ಉತ್ಸವದೊಂದಿಗೆ ಶುಭಾರಂಭಗೊಳ್ಳುತ್ತದೆ.

ದೇವಸ್ಥಾನ, ಬೀಡು, ವಸತಿ ಛತ್ರಗಳು ಹಾಗೂ ಎಲ್ಲಾ ಕಟ್ಟಡಗಳನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ.

ಪ್ರೌಢಶಾಲಾ ವಠಾರದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.

ಮುಖ್ಯ ಪ್ರವೇಶದ್ವಾರದ ಬಳಿ ಕೆ.ಎಸ್.ಆರ್.ಟಿ.ಸಿ. ವಿಶೇಷ ಕೌಂಟರ್, ಪೊಲೀಸ್ ಕೌಂಟರ್ ತೆರೆಯಲಾಗಿದೆ.
ಸ್ವಚ್ಛತಾ ಸೇನಾನಿಗಳು ಸ್ವಚ್ಛತೆ ಕಾಪಾಡಲು ವಿಶೇಷ ಶ್ರಮ ವಹಿಸುತ್ತಿದ್ದಾರೆ.

ಶುಕ್ರವಾರ ಸಂಜೆ ಉಜಿರೆಯಿಂದ ಧರ್ಮಸ್ಥಳಕ್ಕೆ ಹೊರಡುವ ಪಾದಯಾತ್ರೆಯ ಯಶಸ್ಸಿಗೆ ಸರ್ವರೂ ಸಹಕರಿಸಬೇಕೆಂದು ಶಾಸಕ ಹರೀಶ್ ಪೂಂಜ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಅಂಗಡಿಗಳು ಸಾಲು-ಸಾಲಾಗಿ ತೆರೆಯಲ್ಪಟ್ಟಿವೆ.

ಹೋಟೆಲ್‌ಗಳು, ತಂಪು ಪಾನೀಯಗಳು, ಕಂಬಳಿ ಹಾಗೂ ಟೋಪಿ ವ್ಯಾಪಾರಿಗಳು ಹಾಗೂ ವೈವಿಧ್ಯಮಯ ಸರಕು ಮತ್ತು ತಿಂಡಿಗಳ ಅಂಗಡಿಗಳು ತೆರೆಯಲ್ಪಟ್ಟಿವೆ.

ನೇತ್ರಾವತಿ ಸ್ನಾನ ಘಟ್ಟದಿಂದ ಧರ್ಮಸ್ಥಳದ ವರೆಗೂ ದ್ವಿಪಥ ರಸ್ತೆ ನಿರ್ಮಾಣಗೊಂಡಿದ್ದು ರಸ್ತೆಯ ಇಕ್ಕೆಲಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ.

ಭಕ್ತರ ಸೇವೆಗೆ ದೇವಳದ ಸಿಬ್ಬಂದಿ, ಸ್ವಚ್ಛತಾ ಸೇನಾನಿಗಳು, ಪೊಲೀಸರು, ಗೃಹರಕ್ಷಕ ದಳದವರು, ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರು ಕಟಿಬದ್ಧರಾಗಿದ್ದಾರೆ.

ವಸ್ತು ಪ್ರದರ್ಶನದಲ್ಲಿ ಜ್ಞಾನ-ವಿಜ್ಞಾನ-ಸುಜ್ಞಾನಕ್ಕೆ ಸಂಬಂಧಪಟ್ಟ ಮಳಿಗೆಗಳಿದ್ದು ಮಾಹಿತಿಯ ಕಣಜವಾಗಿದೆ.
ಶುಕ್ರವಾರದಿಂದ ಕೆ.ಎಸ್.ಆರ್.ಟಿ.ಸಿ. ರಾಜ್ಯದ ವಿವಿಧ ಊರುಗಳಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English