ಎಲ್ಲೆಲ್ಲೂಧರ್ಮ, ನ್ಯಾಯ, ಶಾಂತಿ-ನೆಮ್ಮದಿ ನೆಲೆಸಬೇಕು : ಡಿ. ವೀರೇಂದ್ರ ಹೆಗ್ಗಡೆ

12:49 PM, Saturday, November 23rd, 2019
Share
1 Star2 Stars3 Stars4 Stars5 Stars
(No Ratings Yet)
Loading...

Dharmasthal ಧರ್ಮಸ್ಥಳ :  ಅನ್ನದಾನ, ಔಷಧಿದಾನ, ವಿದ್ಯಾದಾನ ಮತ್ತುಅಭಯದಾನ ಎಂಬ ಚತುರ್ವಿಧ ದಾನಗಳು ನಿತ್ಯೋತ್ಸವವಾಗಿದ್ದು, ನೊಂದು ಬಂದವರಿಗೆ ಸಾಂತ್ವನ ಹೇಳಿ ಧೈರ್ಯ ಮತ್ತುಆತ್ಮವಿಶ್ವಾಸ ಮೂಡಿಸುವ ಅಭಯದಾನ ಅತ್ಯಂತ ಶ್ರೇಷ್ಠ ಹಾಗೂ ವಿಶಿಷ್ಠ ದಾನವಾಗಿದೆ. ಶ್ರೀ ಮಂಜುನಾಥ ಸ್ವಾಮಿ ಧರ್ಮಾಧಿಕಾರಿಗಳಾದ ಹೆಗ್ಗಡೆಯವರಿಗೆ ನೀಡಿದ ವಿಶೇಷ ಅನುಗ್ರಹ ಇದಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬಂದ ಹತ್ತು ಸಾವಿರಕ್ಕೂ ಮಿಕ್ಕಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.

ಧರ್ಮಸ್ಥಳದ ತೀರ್ಮಾನವೇಅಂತಿಮವಾಗಿದೆ. ವ್ಯವಹಾರದಲ್ಲಿ ನಷ್ಟ, ಶಾಪ ದೋಷ, ವಾಕ್‌ದೋಷ, ಕೌಟುಂಬಿಕ ಕಲಹ, ವ್ಯಾಪಾರದಲ್ಲಿ ಸೋಲು, ಮನಸ್ತಾಪ, ದೈವ – ಪ್ರೇತಗಳ ಬಾಧೆ, ಇತ್ಯಾದಿಗಳಿಂದ ನೊಂದವರು ಧರ್ಮಸ್ಥಳಕ್ಕೆ ಬಂದು ಹೆಗ್ಗಡೆಯವರಲ್ಲಿ ನಿವೇದನೆ ಮಾಡಿಕೊಂಡಾಗ, ಶ್ರೀ ಸ್ವಾಮಿಗೆ ಶರಣಾಗಿ, ಹೆದರಬೇಡಿ, ಧೈರ್ಯವಾಗಿರಿಎಂದುಅವರಿಗೆ ಸಾಂತ್ವನ ಹೇಳಿ ಹೆಗ್ಗಡೆಯವರುಅಭಯ ನೀಡುತ್ತಾರೆ. ಜನರಿಗೆ ಬದುಕು ಕಟ್ಟಿಕೊಳ್ಳಲು ಪ್ರೇರಣೆ, ಮಾರ್ಗದರ್ಶನ ನೀಡುತ್ತಾರೆ. ಇದು ಹೆಗ್ಗಡೆ ಪೀಠಕ್ಕೆ ಶ್ರೀ ಮಂಜುನಾಥ ಸ್ವಾಮಿ ನೀಡಿದ ವಿಶೇಷ ಅನುಗ್ರಹವಾಗಿದೆಎಂದುಅವರು ತಿಳಿಸಿದರು.

Dharmasthal ಅವರವರ ವೃತ್ತಿ, ಪ್ರವೃತ್ತಿಯನ್ನು ಪ್ರೀತಿಸಿ, ಗೌರವಿಸಿದಾಗ ಬದುಕು ಪ್ರಿಯವಾಗುತ್ತದೆ.ಸುಂದರವಾಗುತ್ತದೆ ಹಾಗೂ ಹಗುರವಾಗುತ್ತದೆ.ಕಷ್ಟಗಳು ಬಂದಾಗಒತ್ತಡ ಹೆಚ್ಚಾದಾಗ ಬದುಕು ಭಾರವಾಗುತ್ತದೆ.ಧರ್ಮದ ಮೂಲ ಉದ್ದೇಶವೇ ಬದುಕನ್ನು ಸುಖ-ಶಾಂತಿಯಿಂದ, ಪ್ರೀತಿ-ವಿಶ್ವಾಸದಿಂದಅನುಭವಿಸಲು ಪ್ರೇರಣೆ ನೀಡುವುದೇಆಗಿದೆ. ಆದುದರಿಂದಲೇಖ್ಯಾತಗಾಯಕರವೀಂದ್ರಜೈನ್ ಧರ್ಮಸ್ಥಳದಲ್ಲಿ ನಡೆದ ಮೊದಲ ಬಾಹುಬಲಿ ಮಹಾ ಮಸ್ತಕಾಭಿಷೇಕ ಸಂದರ್ಭದಲ್ಲಿ ಸಾರೀದುನಿಯಾ ಧರ್ಮಸ್ಥಳ್ ಹೋ ಎಂದುಆಶಯ ವ್ಯಕ್ತಪಡಿಸಿದ ಹಾಡನ್ನು ಹಾಡಿದರು.

ಎಲ್ಲರೂ ಪರಸ್ಪರ ಪ್ರೀತಿ-ವಿಶ್ವಾಸದಿಂದ, ಸೇವಾ ಮನೋಭಾವದಿಂದಜೊತೆಯಾಗಿ ಸಾಗಿದರೆದೇವರು ಸದಾ ಪರೋಕ್ಷವಾಗಿ ನಮ್ಮಜೊತೆಇದ್ದು ನಾವು ದೇವರನ್ನು ಸ್ಪರ್ಶಿಸಬಹುದು.ಅನುಭವಿಸಿ ಆನಂದಿಸಬಹುದು.ಇದಕ್ಕಾಗಿಎಲ್ಲರಲ್ಲಿ ಶುದ್ಧಚಾರಿತ್ರ್ಯ, ಆತ್ಮ ವಿಶ್ವಾಸ ನಂಬಿಕೆ, ಪ್ರೀತಿ-ವಿಶ್ವಾಸ, ಸೇವಾ ಮನೋಭಾವಇರಬೇಕುಎಂದು ಹೆಗ್ಗಡೆಯವರು ಸಲಹೆ ನೀಡಿದರು.

ನಿರಂತರ ಪರಿವರ್ತನಾಶೀಲವಾದಜಗತ್ತಿನಲ್ಲಿ ನಾವು ಸಂದರ್ಭಕ್ಕೆ ಹಾಗೂ ಕಾಲಕ್ಕೆ ಸರಿಯಾಗಿ ಹೊಂದಿಕೊಂಡುಆದರ್ಶ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು.ಹೊಗಳಿಕೆಗೆ ಹಿಗ್ಗಬೇಡಿ, ತೆಗಳಿಕೆಗೆ ಕುಗ್ಗಬೇಡಿ.ಎಲ್ಲವನ್ನೂಆತ್ಮವಿಶ್ವಾಸದಿಂದ ಮತ್ತು ಸಮಚಿತ್ತದಿಂದ ಸ್ವೀಕರಿಸಿ ಆದರ್ಶಜೀವನ ನಡೆಸಿ ಎಂದು ಸಲಹೆ ನೀಡಿದ ಹೆಗ್ಗಡೆಯವರು ಶ್ರೀ ಮಂಜುನಾಥ ಸ್ವಾಮಿಯಅನುಗ್ರಹದಿಂದ ಮತ್ತುಜನರ ಪ್ರೀತಿ- ವಿಶ್ವಾಸದಿಂದಇನ್ನಷ್ಟು ಹೆಚ್ಚು ಸೇವಾಕಾರ್ಯಗಳನ್ನು ಮಾಡಿ ಬೆಳ್ತಂಗಡಿ ತಾಲ್ಲೂಕನ್ನು ಮಾದರಿತಾಲ್ಲೂಕಾಗಿಅಭಿವೃದ್ಧಿಪಡಿಸಲಾಗುವುದುಎಂದು ಹೆಗ್ಗಡೆಯವರು ಭರವಸೆ ನೀಡಿದರು.

ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಕೆ.ಹರೀಶ್‌ಕುಮಾರ್, ಉಜಿರೆಯ ಶ್ರೀ ಜನಾರ್ದನ ಸ್ವಾಮಿದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಉಪಸ್ಥಿತರಿದ್ದರು.
ಪ್ರೊ.ಎಸ್. ಪ್ರಭಾಕರ್, ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್, ಡಾ. ಬಿ. ಯಶೋವರ್ಮಇದ್ದರು.,

ಕೆ.ಪ್ರತಾಪಸಿಂಹ ನಾಯಕ್ ಸ್ವಾಗತಿಸಿದರು.ಕಾರ್ಯಕ್ರಮ ನಿರ್ವಹಿಸಿದ ಶ್ರೀನಿವಾಸ್‌ರಾವ್ ಧರ್ಮಸ್ಥಳ ಕೊನೆಯಲ್ಲಿಧನ್ಯವಾದವಿತ್ತರು.

ವಸ್ತುಪ್ರದರ್ಶನಉದ್ಘಾಟನೆ :ಕನ್ನಡ ಮಾಧ್ಯಮ ಪ್ರೌಢಶಾಲಾಆವರಣದಲ್ಲಿ ಆಯೋಜಿಸಿದ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನುಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿ ಶುಭ ಹಾರೈಸಿದರು.

ಎಸ್.ಡಿ.ಎಮ್.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷಪ್ರೊ.ಎಸ್. ಪ್ರಭಾಕರ್ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು,

ವಸ್ತುಪ್ರದರ್ಶನದಲ್ಲಿ197  ಮಳಿಗೆಗಳಿದ್ದು ಪ್ರತಿ ದಿನ ಬೆಳಿಗ್ಗೆ ಗಂಟೆ 9.00  ರಿಂದರಾತ್ರಿ 9.00 ಗಂಟೆ ವರೆಗೆಉಚಿತ ಪ್ರವೇಶಾವಕಾಶವಿದೆ.

ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಹೊಸಕಟ್ಟೆಉತ್ಸವ ನಡೆಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English