ಆಂಧ್ರಪ್ರದೇಶ ಮೂಲದ ಏಳು ಮಂದಿ ಭಾರತೀಯರನ್ನು ಬಂಧಿಸಿದ ಕುವೈತ್‌ ಪೊಲೀಸರು

6:45 PM, Tuesday, November 26th, 2019
Share
1 Star2 Stars3 Stars4 Stars5 Stars
(No Ratings Yet)
Loading...

kuwait-policeಕುವೈತ್‌:  ಆಂಧ್ರಪ್ರದೇಶ ಮೂಲದ ಏಳು ಮಂದಿ ಭಾರತೀಯರನ್ನು ಭಾರತೀಯ ರಾಯಭಾರ ಕಚೇರಿಯ ದಾಖಲೆಗಳನ್ನು ಮತ್ತು ಪ್ರಮಾಣ ಪತ್ರಗಳನ್ನು ನಕಲು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕುವೈತ್‌ನಲ್ಲಿ  ಬಂಧಿಸಲಾಗಿದೆ.

ದಾಖಲೆಗಳನ್ನು ನಕಲು ಮಾಡುವ ಜಾಲದ ಬಗ್ಗೆ ಸುಳಿವು ಸಿಕ್ಕಿದ ಹಿನ್ನೆಲೆಯಲ್ಲಿ ಪೊಲೀಸರೇ ವ್ಯವಹಾರ ಕುದುರಿಸುವವರಂತೆ ನಟಿಸಿ ಅವರ ಸೇವೆಯನ್ನು ಬಳಸಿಕೊಳ್ಳುವಂತೆ ನಂಬಿಸಿ ಅವರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ವಾಟ್ಸ್‌ಆ್ಯಪ್‌ ಮೂಲಕವೇ ಈ ತಂಡ ಡೀಲ್‌ ಕುದುರಿಸುತ್ತಿತ್ತು. ಡ್ರೈವಿಂಗ್‌ ಲೈಸನ್ಸ್‌ ಅನ್ನು ನಕಲು ಮಾಡಿಕೊಡುವುದರಲ್ಲಿ ಈ ತಂಡ ಸಿದ್ಧಹಸ್ತವಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಅವರ ಹಿಂದೆ ಬಲು ದೊಡ್ಡ ವಂಚನೆಯ ಜಾಲ ಇರುವ ಸಾಧ್ಯತೆ ಇದೆ ಎಂದು ಕುವೈತ್‌ನ ಪೊಲೀಸರು ತಿಳಿಸಿದ್ದಾರೆ.

ಆರಂಭದಲ್ಲಿ ಒಬ್ಬನನ್ನು ಸಾಕ್ಷ್ಯ ಸಮೇತ ದಸ್ತಗಿರಿ ಮಾಡಲಾಯಿತು. ಅನಂತರ ಆತ ನೀಡಿದ ಸುಳಿವಿನಿಂದ ಇಡೀ ತಂಡವನ್ನು ಬಂಧಿಸಲಾಗಿದೆ. ಕುವೈತ್‌ನ ಅಧಿಕಾರಿಗಳು ಈ ತಂಡ ನೀಡಿದ ವಿವಿಧ ಪ್ರಮಾಣ ಪತ್ರಗಳ ಸಿಂಧುತ್ವವನ್ನು ಪರಿಶೀಲಿಸಲು ಮುಂದಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English