ವಚನಗಳ ಸಾರ ಸಾತ್ವಿಕ ಜೀವನಕ್ಕೆ ಮಾರ್ಗದರ್ಶಿ : ಎಸ್. ಪ್ರದೀಪ ಕುಮಾರ ಕಲ್ಕೂರ

2:20 PM, Wednesday, November 27th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Akka Mahadevi

ಮಂಗಳೂರು : ಅಕ್ಕಮಹಾದೇವಿಯವರು ಬರೆದ ವಚನಗಳ ಸಾರ ನಮ್ಮ ಸಾತ್ವಿಕಜೀವನಕ್ಕೆ ಮಾರ್ಗದರ್ಶಿಯಾಗಿದೆ ಎಂದು ದ.ಕ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ ನುಡಿದರು. ಅವರು ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘ ಏರ್ಪಡಿಸಿದ್ದ 5ನೇ ವರ್ಷದ ವಚನ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವಚನ ಸಾರಗಳನ್ನು ನಾವು ಅರಿತುಕೊಳ್ಳುವುದಷ್ಟೇ ಅಲ್ಲ ಮುಂದಿನ ಪೀಳಿಗೆಗೂ ಇದರ ಮಹತ್ವವನ್ನು ತಿಳಿಸಿ ಹೇಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ.ಕ. ಇದರ ಸಹಯೋಗದೊಂದಿಗೆ ಇತ್ತೀಚೆಗೆ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಕಾರ್ಯಕ್ರಮ ಜರಗಿತು.
ಮಂಗಳೂರು ವಿಶ್ವವಿದ್ಯಾನಿಲಯದ ಮರೀನ್‌ಜಿಯಾಲಜಿ ವಿಭಾಗದಉಪನ್ಯಾಸಕಡಾ.ಕೆ.ಎಸ್. ಜಯಪ್ಪ, ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಉಡುಪಿ ಎಂ.ಜಿ.ಎಂ. ಕಾಲೇಜಿನಉಪನ್ಯಾಸಕಿಡಾ. ಕಾತ್ಯಾಯಿನಿ ಕುಂಜಿಬೆಟ್ಟುಉಪನ್ಯಾಸ ನೀಡಿದರು.

ಹಿರಿಯ ಸಮಾಜ ಸೇವಕಿ ಅಬ್ಬಕ್ಕ ಪ್ರಶಸ್ತಿ ವಿಜೇತೆ ಶ್ರೀಮತಿ ಸರಳಾಕಾಂಚನ್, ಪ್ರಜ್ಞಾ ಸಲಹಾ ಕೇಂದ್ರದಪ್ರೊ. ಹಿಲ್ಡಾ ರಾಯಪ್ಪನ್‌ಮತ್ತು ಫಾದರ್ ಮುಲ್ಲರ್‌ಕಾಲೇಜ್‌ಆಸ್ಪತ್ರೆಕಂಕನಾಡಿಹಿರಿಯ ಹೃದ್ರೋಗ ಶಸ್ತ್ರಚಿಕಿತ್ಸಾತಜ್ಞರಾದಡಾ. ಕೆ.ಟಿಆನಂದ್‌ಇವರನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷೆ ಸುಮಾ ಅರುಣ್ ಮಾನ್ವಿ ಪ್ರಾಸ್ತಾವಿಕಭಾಷಣ ಮಾಡಿದರು. ಆಶಾ ಜೈದೇವ್, ಖಜಾಂಜಿಉಮಾ ಪಾಲಾಕ್ಷಪ್ಪ ವಂದಿಸಿದರು, ಶ್ರೀಮತಿ ಮಣಿ ಶಂಕರ್, ಸಾಂಸ್ಕೃತಿಕ  ಕಾರ್ಯದರ್ಶಿ ಜಯಶ್ರೀ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ನಿರ್ಮಲಾಚಂದ್ರಶೇಖರ್, ಕ್ರೀಡಾ ಕಾರ್ಯದರ್ಶಿ ಉಮಾರಮೇಶ್, ಡಾ. ಮಾಲತಿ ಶೆಟ್ಟಿ ಮಾಣೂರು, ಡಾ. ಕಾಸರಗೋಡುಅಶೋಕ್‌ಕುಮಾರ್, ರಘುಇಡ್ಕಿದು, ಪ್ರವೀಣ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ಸುರೇಖಾ ಯಳವಾರ ನಿರೂಪಿಸಿದರು.

ಸುಮಂಗಲ ಕಲಾ ತಂಡದಿಂದ ವಚನ ಗಾಯನ ಮತ್ತು ನೃತ್ಯಕಾರ್ಯಕ್ರಮಜರಗಿತು.

ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ವಚನಗಳಿಂದ ಸಾಮಾಜಿಕ ಬದಲಾವಣೆ ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English