ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ

9:06 PM, Thursday, November 28th, 2019
Share
1 Star2 Stars3 Stars4 Stars5 Stars
(No Ratings Yet)
Loading...

chandra swamy  ಧರ್ಮಸ್ಥಳ : ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ಬುಧವಾರ ರಾತ್ರಿ ಧರ್ಮಸ್ಥಳ ದ ಮಹೋತ್ಸವ ಸಭಾಭವನದಲ್ಲಿ ನಡೆಯಿತು.

ಹೆಗ್ಗಡೆಯವರ ನಿವಾಸದಿಂದ  (ಬೀಡಿನಿಂದ) ಸಂಜೆ ಏಳುಗಂಟೆಗೆ ಭವ್ಯ ಮೆರವಣಿಗೆಯಲ್ಲಿ ಮಹೋತ್ಸವ ಸಭಾ ಭವನಕ್ಕೆ ಹೋದ ಬಳಿಕ ಅಲ್ಲಿ ಪಂಚನಮಸ್ಕಾರ ಮಂತ್ರ ಪಠಣ, ಸಮವಸರಣ ಪೂಜಾ ಮಂತ್ರ ಪಠಣಆದಮೇಲೆ ಶ್ರಾವಕ-ಶ್ರಾವಿಕೆಯರಿಂದಅಷ್ಟವಿಧಾರ್ಚನೆ ಪೂಜೆ ನಡೆಯಿತು. ಗಣಧರ ಪರಮೇಷ್ಠಿ ಪೂಜೆ, ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಪೂಜೆ ಮತ್ತು ಶ್ರುತ ಪೂಜೆ ನಡೆಯಿತು.

chandra swamy  ಸೌಮ್ಯ, ಸಾವಿತ್ರಿ, ಮಂಜುಳಾ ಮತ್ತುಅಭಿಜ್ಞಾ ಹಾಗೂ ಬಳಗದವರು ಪೂಜಾ ಮಂತ್ರ ಪಠಣ ಮಾಡಿದರು.
ಕ್ಷುಲ್ಲಕ 105 ಶ್ರೀ ನಿರ್ಮಲ ಸಾಗರ್‌ಜಿ ಉಪಸ್ಥಿತರಿದ್ದರು.

ಶಿಶಿರ್ ಇಂದ್ರರ ನೇತೃತ್ವದಲ್ಲಿ ನಡೆದಅಷ್ಟವಿಧಾರ್ಚನೆ ಸಂಗೀತ ಪೂಜಾ ಮಂತ್ರ ಪಠಣದಲ್ಲಿ ಮಲ್ಲಿನಾಥ್‌ಜೈನ್, ಸೌಮ್ಯಎಸ್. ರಾಜ್, ಅಭಿಜ್ಞಾ ಬಳ್ಳಾಲ್, ಮಂಜುಳಾ, ಎಂ.ಸಾವಿತ್ರಿ ಪುಷ್ಪದಂತ ಹಾಗೂ ಹಿಮ್ಮೇಳದಲ್ಲಿ ಭಗೀರಥ ಮತ್ತು ಶೋಧನ್ ಸಹಕರಿಸಿದರು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರಕುಮಾರ್, ಅನಿತಾ ಸುರೇಂದ್ರಕುಮಾರ್, ಡಿ. ಹರ್ಷೇಂದ್ರಕುಮಾರ್ ಮತ್ತುಸುಪ್ರಿಯಾ ಹರ್ಷೇಂದ್ರಕುಮಾರ್, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಉಪಸ್ಥಿತರಿದ್ದರು.

ಪಾಕ ಪರಿಣತರಾದ ಕನ್ನಡಿಕಟ್ಟೆಯ ರತ್ನರಾಜ ಮತ್ತುಇರ್ವತ್ತೂರು ಜಯಕೀರ್ತಿಜೈನ್‌ ಅವರನ್ನು ಸನ್ಮಾನಿಸಲಾಯಿತು.

ಮಹಾಮಂಗಳಾರತಿ ನಂತರ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಬೀಡಿಗೆ ತರಲಾಯಿತು.

ಶ್ರೀ ಬಾಹುಬಲಿ ಸೇವಾ ಸಮಿತಿಯ ಸದಸ್ಯರು ಸಹಕರಿಸಿದರು.

chandra swamy

chandra swamy

chandra swamy

chandra swamy

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English