ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಜೀವಂತ ಸುಟ್ಟ ದುಷ್ಕರ್ಮಿಗಳು

3:02 PM, Friday, November 29th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Priyanka

ಹೈದರಾಬಾದ್ : ಪಶುವೈದ್ಯೆಯೊಬ್ಬರ ಮೆಲೆ ಅತ್ಯಾಚಾರ ನಡೆಸಿ ಬಳಿಕ ಅವರನ್ನು ಜೀವಂತ ಸುಟ್ಟುಹಾಕಿರುವ ಬೀಭತ್ಸ ಘಟನೆ ಹೈದರಾಬಾದ್ ಹೊರವಲಯದಲ್ಲಿ ನಡೆದಿದೆ. ದುಷ್ಕರ್ಮಿಗಳಿಂದ ಅತ್ಯಾಚಾರಕ್ಕೊಳಗಾಗಿ ಬಳಿಕ ಕೊಲೆಯಾದ ಮಹಿಳೆ 27 ವರ್ಷದ ಪ್ರಿಯಾಂಕ ರೆಡ್ಡಿ ಎಂದು ಗುರುತಿಸಲಾಗಿದೆ.

ಬುಧವಾರ ರಾತ್ರಿ ಪ್ರಿಯಾಂಕ ಅವರು ತನ್ನ ಕ್ಲಿನಿಕ್ ನಿಂದ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ಹೈದರಾಬಾದ್ ನಗರದ ಹೊರವಲಯದಲ್ಲಿರುವ ತೊಂಡುಪಲ್ಲಿ ಟೋಲ್ ಪ್ಲಾಝಾದ ಬಳಿ ತಲುಪಿತ್ತದ್ದಂತೆಯೇ ಅವರ ಸ್ಕೂಟರ್ ನ ಟಯರ್ ಪಂಕ್ಚರ್ ಆಗಿರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣವೇ ಪ್ರಿಯಾಂಕ ಅವರು ತನ್ನ ತಂಗಿಗೆ ಕರೆ ಮಾಡಿ ವಿಷಯನ್ನು ತಿಳಿಸಿದ್ದಾರೆ.

ಸ್ಕೂಟರ್ ಅನ್ನು ಟೋಲ್ ಕೇಂದ್ರದ ಬಳಿಯೇ ಬಿಟ್ಟು ಕ್ಯಾಬ್ ಹಿಡಿದು ಮನೆಗೆ ಬರುವಂತೆ ತಂಗಿ ಪ್ರಿಯಾಂಕ ಅವರಿಗೆ ಸಲಹೆ ನೀಡಿದ್ದಾರೆ. ಆದರೆ ಇಷ್ಟು ಹೊತ್ತಿಗೆ ಪ್ರಿಯಾಂಕ ಅವರ ಬಳಿಗೆ ಬಂದ ಇಬ್ಬರು ವ್ಯಕ್ತಿಗಳು ತಾವು ಸ್ಕೂಟರ್ ಗೆ ಪಂಕ್ಚರ್ ಹಾಕಿಸಿ ತರುವುದಾಗಿ ಹೇಳಿದ್ದಾರೆ. ಇದಕ್ಕೆ ಒಪ್ಪಿದ ಪ್ರಿಯಾಂಕ ಅವರು ಅವರಿಗೆ ಸ್ಕೂಟರ್ ನೀಡಿ ತಾವು ಅಲ್ಲೇ ಕಾಯುತ್ತಾ ನಿಂತಿದ್ದಾರೆ ಮತ್ತು ಈ ಸಂದರ್ಭದಲ್ಲಿ ತಮ್ಮ ತಂಗಿಗೆ ಮತ್ತೆ ಕರೆ ಮಾಡಿ ನಡೆದ ವಿಷಯವನ್ನು ತಿಳಿಸಿ ತನಗೆ ಇಲ್ಲಿ ನಿಲ್ಲಲು ಮುಜುಗರವಾಗುತ್ತಿದೆ ಎಂದೂ ಸಹ ಹೇಳಿದ್ದಾರೆ ಎಂಬುದನ್ನು ಅವರ ತಂಗಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಮತ್ತೆ ಸ್ವಲ್ಪ ಸಮಯದ ಬಳಿಕ ತಂಗಿ ಪ್ರಿಯಾಂಕ ಅವರಿಗೆ ಕರೆಮಾಡಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಳಿಕ ಹಲವಾರು ಸಲ ಪ್ರಯತ್ನಿಸಿಯೂ ಕರೆ ಸಿಗದೇ ಇದ್ದಾಗ ಹೆದರಿದ ಪ್ರಿಯಾಂಕ ಅವರ ಕುಟುಂಬದವರು ಶಂಶಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ನಡುವೆ ಸ್ಥಳದಲ್ಲಿ ಹೊಂಚುಹಾಕಿ ಕುಳಿತಿದ್ದ ದುಷ್ಕರ್ಮಿಗಳು ಏಕಾಂಗಿಯಾಗಿ ನಿಂತಿದ್ದ ಪ್ರಿಯಾಂಕ ರೆಡ್ಡಿ ಅವರನ್ನು ಟೋಲ್ ಗೇಟ್ ನಿಂದ ಸುಮಾರು 50 ಮೀಟರ್ ದೂರದಲ್ಲಿದ್ದ ಪೊದೆಯೊಂದಕ್ಕೆ ಎಳೆದೊಯ್ಯದ್ದಿದ್ದಾರೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ಸಾಲಾಗಿ ಟ್ರಕ್ ಗಳು ನಿಂತಿದ್ದರಿಂದ ದುರುಳರ ಈ ಕೃತ್ಯ ಯಾರ ಗಮನಕ್ಕೂ ಬಂದಿಲ್ಲ ಎನ್ನಲಾಗುತ್ತಿದೆ.

ಪ್ರಿಯಾಂಕ ರೆಡ್ಡಿ ಅವರನ್ನು ಕೊಲೆ ಮಾಡಿದ ಬಳಿಕ ದುಷ್ಕರ್ಮಿಗಳು ಮೃತದೇಹವನ್ನು ಕೆಲವು ಕಿಲೋಮೀಟರ್ ಗಳಷ್ಟು ದೂರದಲ್ಲಿದ್ದ ನಿರ್ಮಾಣ ಹಂತದಲ್ಲಿದ್ದ ಸೇತುವೆ ಅಡಿಭಾಗಕ್ಕೆ ಕೊಂಡೊಯ್ದು ಅಲ್ಲಿ ಅದಕ್ಕೆ ಬೆಂಕಿ ಹಚ್ಚಿದ್ದಾರೆ. ಮೃತದೇಹಕ್ಕೆ ಬೆಂಕಿ ಹಚ್ಚಿದ ಸ್ಥಳದಿಂದ 100 ಮೀಟರ್ ಗಳಷ್ಟು ಅಂತರದಲ್ಲಿ ಮಹಿಳೆಯ ಒಳ ಉಡುಪುಗಳು ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಾಗಾಗಿ ದುಷ್ಕರ್ಮಿಗಳು ಪ್ರಿಯಾಂಕ ಅವರನ್ನು ಕೊಲೆ ಮಾಡುವುದಕ್ಕೂ ಮೊದಲು ಅತ್ಯಾಚಾರ ಮಾಡಿರಬಹುದೆಂಬ ಬಲವಾದ ಶಂಕೆಯನ್ನು ಪೊಲೀಸರು ಇದೀಗ ವ್ಯಕ್ತಪಡಿಸುತ್ತಿದ್ದಾರೆ.

ಪ್ರಿಯಾಂಕ ಅವರ ಮೇಲೆ ಎಷ್ಟು ಜನ ದಾಳಿ ಮಾಡಿರಬಹುದೆಂಬ ಮಾಹಿತಿ ಪೊಲೀಸರಿಗೆ ಇನ್ನಷ್ಟೇ ಖಚಿತವಾಗಬೇಕಾಗಿದೆ. ಮಾತ್ರವಲ್ಲದೇ ಪ್ರಿಯಾಂಕ ಅವರ ಸ್ಕೂಟರನ್ನು ಸರಿಮಾಡಿಸಲು ತೆಗೆದುಕೊಂಡು ಹೋದ ಆ ಇಬ್ಬರು ವ್ಯಕ್ತಿಗಳಿಗೂ ಈ ಘಟನೆಗೂ ಸಂಬಂಧವಿದೆಯೇ ಎಂಬುದನ್ನೂ ಸಹ ಪೊಲೀಸರು ಇನ್ನಷ್ಟೇ ಖಚಿತಪಡಿಸಬೇಕಿದೆ. ಟೋಲ್ ಗೇಟ್ ಸಮೀಪ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್ ಚಾಲಕರನ್ನೂ ಸಹ ಪೊಲೀಸರು ಇದೀಗ ತನಿಖೆಗೆ ಒಳಪಡಿಸುತ್ತಿದ್ದಾರೆ.

ಇಲ್ಲಿನ ನಿರ್ಮಾಣ ಹಂತದಲ್ಲಿದ್ದ ಸೇತುವೆ ಒಂದರ ಕೆಳಗೆ ಅರಬೆಂದ ಶವ ಒಂದು ಪತ್ತೆಯಾಗಿರುವುದಾಗಿ ಗುರುವಾರ ಬೆಳಿಗ್ಗೆ ಪೊಲೀಸರಿಗೆ ಕರೆಯೊಂದು ಬರುತ್ತದೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಿಯಾಂಕ ಅವರ ಮನೆಯವರನ್ನು ಘಟನಾ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಪ್ರಿಯಾಂಕ ಮನೆಯವರು ಅಲ್ಲಿದ್ದ ಸ್ಕಾರ್ಫ್ ಮತ್ತು ಬಟ್ಟೆಯ ಚೂರಿನ ಆಧಾರದಲ್ಲಿ ಇದು ಪ್ರಿಯಾಂಕ ಅವರದ್ದೇ ಶವ ಎಂದು ಪತ್ತೆ ಹಚ್ಚಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English