ಮಂಗಳೂರು : ಚತುರ್ವೇದ ಪಂಡಿತರೂ, ವ್ಯಾಖ್ಯಾನಕಾರರೂ, ವ್ಯಾಕರಣ ವಿದ್ವಾಂಸರೂ ಆಗಿರುವ ಕದ್ರಿಯ ಡಾ| ಪ್ರಭಾಕರಅಡಿಗರು ರಚಿಸಿರುವ ಶುತಿತತ್ತ್ವ ಪ್ರದೀಪಿಕಾ (ಫಿಟ್ ಸೂತ್ರಾರ್ಥವ್ಯಾಖ್ಯಾನಮ್) ಗ್ರಂಥ ಸಾರಸ್ವತ ಲೋಕಕ್ಕೆ ಅಪೂರ್ವ ಕೊಡುಗೆಯಾಗಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ನುಡಿದರು.
ಇತ್ತೀಚೆಗೆ ನಗರದ ಮಲ್ಲಿಕಟ್ಟೆಯಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿ ’ಗ್ರಂಥ’ ಲೋಕಾರ್ಪಣೆಗೈದುಅವರು ಮಾತನಾಡಿದರು. ವೇದದ ಶಬ್ದ ಸ್ವರಗಳಿಗೆ ಸಂಬಂಧಿಸಿದ ಈ ಗ್ರಂಥವು ವೇದಾಧ್ಯಯನವನ್ನು ಸಾಂಗವಾಗಿ ಮಾಡುವವರಿಗೆಅತ್ಯಂತಉಪಯುಕ್ತವಾಗಿದೆಎಂದರು. ಶ್ರೀಯುತ ಅಡಿಗರಿಂದಇನ್ನಷ್ಟು ಮೌಲ್ಯಯುತ ಹಾಗೂ ಸಂಶೋಧನಾತ್ಮಕವಾದ ಗ್ರಂಥಗಳು ರಚಿಸಿಲ್ಪಡುವಂತಾಗಲೆಂದು ಶುಭ ಹಾರೈಸಿದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ,ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜಾಧ್ಯಕ್ಷ ಹರಿಕೃಷ್ಣ ಪುನರೂರುಡಾ| ಪ್ರಭಾಕರ ಅಡಿಗ ಈ ಸಂದರ್ಭ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English