ಉಜಿರೆ ಎಸ್.ಡಿ.ಎಂ.ಎಂಜಿನಿಯರಿಂಗ್‌ ಕಾಲೇಜಿನಲ್ಲಿ ರಾಜ್ಯಮಟ್ಟದ ವಿಜ್ಞಾನ ಮೇಳ

4:36 PM, Saturday, November 30th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Ujire

ಉಜಿರೆ : ಮನದಲ್ಲಿ ಮೂಡಿದ ಯೋಚನೆಗಳಿಗೆ, ಯೋಜನೆಗಳಿಗೆ ಮೂರ್ತರೂಪ ನೀಡಿ ಪ್ರಾಯೋಗಿಕವಾಗಿ ಪರೀಕ್ಷೆಗೊಳಪಡಿಸಿ ತಜ್ಞರಿಂದಅರ್ಹತೆ ಮತ್ತು ಬಳಕೆ ಬಗ್ಯೆಅಧಿಕೃತ ಪ್ರಮಾಣ ಪತ್ರ ಪಡೆದಾಗ ಮಾತ್ರ ತಯಾರಿಸಿದ ಮಾದರಿಗಳು ಸಮಾಜಕ್ಕೆ ಉಪಯುಕ್ತವಾಗುತ್ತವೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಪ್ರಾಧ್ಯಾಪಕ ಡಾ. ಎನ್. ಎಸ್. ದಿನೇಶ್ ಹೇಳಿದರು.

ಅವರು ಉಜಿರೆಯಲ್ಲಿ ಎಸ್.ಡಿ.ಎಂ.ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಂಶೋಧನೆ ಮಾಡಿ, ಅನುಭವಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ಆಯೋಜಿಸಿದ ರಾಜ್ಯಮಟ್ಟದ ವಿಜ್ಞಾನ ಮೇಳವನ್ನು ಶನಿವಾರ ಉದ್ಘಾಟಿಸಿ ಮಾತ ನಾಡಿದರು.

ಯುವಜನತೆದೇಶದಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು ಹೊಸ ಚಿಂತನೆಗಳೊಂದಿಗೆ ಸಮಾಜಕ್ಕೆ ಹಾಗೂ ದೇಶಕ್ಕೆಉಪಯುಕ್ತವಾದ ಸಂಶೋಧನೆಗಳನ್ನು ನಡೆಸಬೇಕು.

ಸಾಮಾನ್ಯವಾಗಿ ವಿಜ್ಞಾನ, ವೈದ್ಯಕೀಯ ಹಾಗೂ ತಂತ್ರಜ್ಞಾನಕ್ಷೇತ್ರದಲ್ಲಿ ನಮಗೆ ಬೇಕಾದ ಉಪಕರಣಗಳನ್ನು ನಾವು ವಿದೇಶಗಳಿಂದ ತರಿಸುತ್ತೇವೆ. ನಮ್ಮ ವಿಶಿಷ್ಟ ಯೋಚನೆ, ಯೋಜನೆಗಳಿಂದ ನಮಗೆ ಬೇಕಾದಎಲ್ಲಾ ಯಂತ್ರೋಪಕರಣಗಳನ್ನು ನಾವೇ ತಯಾರಿಸಿ ಸ್ವಾವಲಂಬಿಗಳಾಗಬೇಕು ಎಂದುಅವರು ಸಲಹೆ ನೀಡಿದರು.

Ujire

ಮನದಲ್ಲಿ ಮೂಡಿದಕಲ್ಪನೆಗೆ ನಾವು ಮೂರ್ತರೂಪ ನೀಡಿ, ಸಂಶೋಧನೆ ಹಾಗೂ ವಿಶ್ಲೇಷಣೆ ನಡೆಸಿ, ಪ್ರಾಯೋಗಿಕವಾಗಿಅದರ ಬಳಕೆ ಮತ್ತುಉಪಯುಕ್ತತೆಬಗ್ಯೆತಜ್ಞರಿಂದಅಧಿಕೃತ ಪ್ರಮಾಣ ಪತ್ರ ಪಡೆದು ನಂತರಅದರಉತ್ಪಾದನೆಗೆ ನಾವು ಸಜ್ಜಾಗಬೇಕು. ಈ ಹಂತದಲ್ಲಿ ನಾವು ಅನೇಕ ಸಮಸ್ಯೆಗಳನ್ನು, ಸವಾಲುಗಳನ್ನು ಎದುರಿಸಬೇಕಾಗುತ್ತದೆ.ನಮ್ಮಕಲ್ಪನೆಗೂ, ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ.ಎಲ್ಲಾ ಕ್ಷೇತ್ರಗಳಲ್ಲಿ ನಮಗೆ ಬೇಕಾದ ಉಪಕರಣಗಳನ್ನು, ಉತ್ಪನ್ನಗಳನ್ನು ನಾವೇ ತಯಾರಿಸಿ ಸ್ವಾವಲಂಬನೆ ಸಾಧಿಸಬೇಕು.ಇದಕ್ಕಾಗಿ ವಿದೇಶಗಳ ಪರಾವಲಂಬನೆ ಸಲ್ಲದುಎಂದುಅವರು ಸಲಹೆ ನೀಡಿದರು.

ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿವಿಧ ವಿಭಾಗಗಳು ಸಮನ್ವಯತೆಯಿಂದ ಸಂಘಟಿತರಾಗಿಕಾರ್ಯನಿರ್ವಹಿಸಬೇಕು. ವಿವಿಧ ವಿಭಾಗಗಳ ಮಧ್ಯೆ ಬೇಧ, ಭಿನ್ನಾಭಿಪ್ರಾಯ ಸಲ್ಲದುಎಂದುಅವರು ಕಿವಿಮಾತು ಹೇಳಿದರು.

ಎಸ್.ಡಿ.ಎಂ.ಎಂಜಿನಿಯರಿಂಗ್‌ಕಾಲೇಜಿನ ಪ್ರಾಂಶುಪಾಲ ಡಾ.ಅಶೋಕ್‌ಕುಮಾರ್, ಟಿ. ಸ್ವಾಗತಿಸಿದರು. ವಿಜ್ಞಾನ ಮೇಳದ ಸಂಯೋಜಕಡಾ. ಶಂಸುದ್ದೀನ್ ಉಪಸ್ಥಿತರಿದ್ದರು.

 

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English