ಅತ್ಯಾಚಾರಿ ಅಪರಾಧಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವ ಕಾನೂನು ಜಾರಿಗೆ ಬರಬೇಕು : ಸಂತೋಷ್ ಕುಮಾರ್ ಶೆಟ್ಟಿ

10:43 AM, Monday, December 2nd, 2019
Share
1 Star2 Stars3 Stars4 Stars5 Stars
(5 rating, 1 votes)
Loading...

santhosh-kumar

ಮಂಗಳೂರು : ಅರಬ್ ದೇಶದಲ್ಲಿ ಅತ್ಯಾಚಾರ ನಡೆದ ಕೆಲವೇ ದಿನಗಳಲ್ಲಿ ಅಪರಾಧಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವ ಕಠಿಣ ಶಿಕ್ಷೆ ನೀಡಲಾಗುತ್ತದೆ. ಅಂತಹ ಕಾನೂನು ಭಾರತದಲ್ಲೂ ಜಾರಿಗೆ ಬರಬೇಕು ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಆಗ್ರಹಿಸಿದರು.

ತೆಲಂಗಾಣದಲ್ಲಿ ನಡೆದ ಪಶುವೈದ್ಯೆಯ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಕೃತ್ಯವನ್ನು ಖಂಡಿಸಿ ಉಳ್ಳಾಲ‌ ಬ್ಲಾಕ್ ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟು ಜಂಕ್ಷನ್ ನಲ್ಲಿ ರವಿವಾರ ನಡೆದ ಹಕ್ಕೊತ್ತಾಯ ಸಭೆಯಲ್ಲಿ ಅವರು ಮಾತನಾಡಿದರು. ‌

ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮನುಕುಲಕ್ಕೆ ಆಗಿರುವ ಅವಮಾನಮಾನವಾಗಿದೆ.‌ ಇದೊಂದು ಹೀನಕೃತ್ಯವೂ ಅಗಿದೆ.‌ ಪ್ರಧಾನಿ ನರೇಂದ್ರ ಮೋದಿ ‘ಬೇಟಿ ಪಡಾವೋ, ಬೇಟಿ ಬಚಾವೋ’ ಎಂದು ಹೇಳುತ್ತಾರೆ, ಆದರೆ ಇದು ಕೇವಲ ಶ್ಲೋಗನ್ ಅಗಿ ಉಳಿಯಬಾರದು.‌ ದೇಶದ ಹೆಣ್ಮಕ್ಕಳನ್ನು ರಕ್ಷಿಸಲು ಕಠಿಣ ಕಾನೂನು‌ ಜಾರಿಗೆ ತರಬೇಕಾಗಿದೆ. ಅರಬ್ ದೇಶದಲ್ಲಿರುವಂತೆ ಸಾರ್ವಜನಿಕ ಗಲ್ಲಿಗೇರಿಸುವ ಕಾನೂನು ನಮ್ಮ ದೇಶದಲ್ಲೂ‌ ಜಾರಿಗೆ ಬಂದಾಗ ಹೆಣ್ಮಕ್ಕಳ ಮೇಲಿನ‌ ದೌರ್ಜನ್ಯಕ್ಕೆ ಕಡಿವಾಣ ಹಾಕಬಹುದು. ‌ಇಂತಹ ಪ್ರಕರಣದ ವಿರುದ್ಧ ದೇಶದ ಜನರು ಒಂದಾಗಬೇಕಿದೆ ಎಂದು ಹೇಳಿದರು. ‌

ನಮ್ಮ ದೇಶದಲ್ಲಿ ಕಳೆದ ವರ್ಷ 27 ಸಾವಿರ ಅತ್ಯಾಚಾರ ಪ್ರಕರಣ ನಡೆದಿದೆ, ಆದರೂ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಯಾಕೆ ಸಾಧ್ಯವಾಗಿಲ್ಲ. ದೇಶ, ವಿದೇಶ ತಿರುಗಾಡುವ‌ ಮುನ್ಮ ಪ್ರಧಾನಿ ದೇಶದ ಹೆಣ್ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಕಠಿಣ ಕಾನೂನು ಜಾರಿಗೆ ತರಲಿ.‌ ಬಿಜೆಪಿಯವರೇ ನೀವು ಎಷ್ಟು ಬೇಕಾದರೂ ಯಾವ ವಿಷಯದಲ್ಲಿ ಬೇಕಾದರೂ ರಾಜಕೀಯ ಮಾಡಿ. ಅದರೊಟ್ಟಿಗೆ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡುವ ಕಾನೂನು ಜಾರಿಗೆ ತನ್ನಿ ಎಂದು ಉಳ್ಳಾಲ ನಗರಸಭೆಯ ಮಾಜಿ ಸದಸ್ಯ ದಿನೇಶ್ ರೈ ಆಗ್ರಹಿಸಿದರು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಸುರೇಶ್ ಭಟ್ನಗರ, ಮುಸ್ತಫಾ ಮಲಾರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್, ಸಂಘಟನಾ ಕಾರ್ಯದರ್ಶಿಗಳಾದ ಇಕ್ಬಾಲ್ ಸಾಮಾನಿಗೆ, ಸಲೀಂ ಮೇಗ, ಉಳ್ಳಾಲ ಮಹಿಳಾ ಘಟಕದ ಅಧ್ಯಕ್ಷೆ ದೇವಕಿ ಉಳ್ಳಾಲ್, ಮುಖಂಡರಾರ ಸುಧಾಕರ್ ಬಿ. ಅಸೈಗೋಳಿ, ಸುರೇಖಾ ಚಂದ್ರಹಾಸ, ಮನ್ಸೂರ್ ಉಳ್ಳಾಲ್, ಕರೀಂ, ರವಿ‌ ಕಾಪಿಕಾಡ್, ಬಶೀರ್ ಮುಂಡೋಳಿ, ಇಫ್ತಿಕಾರ್, ಬದ್ರುದ್ದೀನ್, ಪದ್ಮನಾಭ ಗಟ್ಟಿ, ನಗರಸಭೆಯ ಸದಸ್ಯರಾದ ಭಾರತಿ, ಮಹಮ್ಮದ್ ಮುಕ್ಕಚ್ಚೇರಿ, ಮಾಜಿ ಅಧ್ಯಕ್ಷ ಹುಸೈನ್ ಕುಂಞಿಮೋನು, ಮಾಜಿ‌ ಸದಸ್ಯರಾದ ಬಾಝಿಲ್ ಡಿಸೋಜ ಇನ್ನಿತರರು ಉಪಸ್ಥಿತರಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English