ಅಭಿನಯ ಜೀವನವಾದಾಗ ಕಲಾವಿದ ಪರಿಪೂರ್ಣನಾಗುತ್ತಾನೆ : ಜಿ. ಎ. ಬೋಳಾರ್

11:01 AM, Monday, December 2nd, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Prajwals

ಮಂಗಳೂರು : ನಟರು ತಮಗೆ ಸಿಕ್ಕಿದ ಪಾತ್ರಗಳಲ್ಲಿ ಆ ಪಾತ್ರದ ಜೀವನವನ್ನು ಅರಿತುಕೊಳ್ಳಬೇಕು. ಜೀವನರೀತಿ ಅರಿತಾಗ ಮಾತ್ರ ಪಾತ್ರಗಳಿಗೆ ನೈಜತೆ ಲಭಿಸುವುದು. ಆಗ ಅಭಿನೇತ್ರಿ, ಅಭಿನೇತ್ರ ಯಶಸ್ವಿಯಾಗುತ್ತಾನೆ ಇಂದು ಖ್ಯಾತ ರಂಗ ನಿರ್ದೇಶಕ ಜಿಎ ಬೋಳಾರ್ ಅಭಿಪ್ರಾಯಪಟ್ಟರು.

Prajwals

ಅವರು ಮಂಗಳೂರು ಪೊಲೀಸ್ ಲೇನ್ ನಲ್ಲಿರುವ ಮುನೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ತುಳುವರ್ಲ್ಡ್ ಸಂಸ್ಥೆ ಪ್ರಾಯೋಜಿಸುವ ಹದಿನೈದು ದಿನಗಳ ಪ್ರಜ್ವಲ್ಸ್ ಅಭಿನಯ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

Prajwals

ಸಿನಿಮಾ ನಟ, ಸಾಹಿತಿ, ಡಾ. ಅಶೋಕ್ ಕುಮಾರ್ ಕಾಸರಗೋಡು ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವಕಾಶಗಳು ಒಮ್ಮಿಂದೊಮ್ಮೆಲೇ ಲಭಿಸುವುದಿಲ್ಲ. ಅವಕಾಶಗಳಿಗಾಗಿ ತಾಳ್ಮೆಯಿಂದ ಕಾಯುವ, ಪ್ರಯತ್ನಿಸುವ ಮನಸ್ಸು ಇದ್ದರೆ ಮಾತ್ರ ಕಲಾರಂಗ ಮತ್ತು ಸಿನಿಮಾರಂಗದಲ್ಲಿ ಯಶಸ್ವಿಯಾಗಬಹುದು. ಆದ್ದರಿಂದ ಅಭಿನಯಿಸುವ ವನಿಗೆ ತಾಳ್ಮೆ ತುಂಬಾ ಅಗತ್ಯ ಮತ್ತು ದುರಹಂಕಾರವನ್ನು ತ್ಯಜಿಸಿದರೆ ಶ್ರೇಯಸ್ಸು ಶತಸಿದ್ಧ ಎಂದರು.

ತುಳುವರ್ಲ್ಡ್ ಅಧ್ಯಕ್ಷ ಡಾ. ರಾಜೇಶ್ ಆಳ್ವ ಅವರು ಅಧ್ಯಕ್ಷತೆ ವಹಿಸಿದರು. ಸಂಘಟಕ ಪ್ರಜ್ವಲ್ ಪೂಜಾರಿ ಸ್ವಾಗತಿಸಿ, ರೂಪೇಶ್ ಶೆಟ್ಟಿ ಧನ್ಯವಾದ ವಿತ್ತರು. ಕುಮಾರಿ ಅನ್ವಿತ ಅರವಿಂದ್ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಅಭಿನಯ, ಸ್ಕ್ರೀನ್ ಪ್ಲೇ, ನಿರ್ದೇಶನ, ಸ್ಕ್ರಿಪ್ಟ್ ರೈಟಿಂಗ್ ಮೊದಲಾದ ಚಲನಚಿತ್ರಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English