ಮಂಗಳೂರು : ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವವು ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ದೇವರ ಬಲಿ ಉತ್ಸವ ನಡೆದ ಬಳಿಕ ರಥೋತ್ಸವ, ನಾಗಬನದಲ್ಲಿ ತಂಬಿಲ ಸೇವೆ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಸೀಯಾಳ ಅಭಿಷೇಕಗಳು ನಡೆದವು.
ಚಂಪಾಷಷ್ಠಿಯಂದು ಹಗಲು ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಅನಂತಪದ್ಮನಾಭ, ನಾಗದೇವರು ಹಾಗೂ ಸುಬ್ರಹ್ಮಣ್ಯ ದೇವರು ಮೂವರು ಕೂಡಾ ಒಟ್ಟಾಗಿ ನೆಲೆಸಿರುವ ಅಪರೂಪದ ಕ್ಷೇತ್ರ ಇದಾಗಿದೆ. ದೇವಳ ದಕ್ಷಿಣಕ್ಕೆ ಪವಿತ್ರ ಭದ್ರಾ ಸರಸ್ವತಿ ಕೆರೆ. ಪೂರ್ವಭಾಗದಲ್ಲಿ 500ಕ್ಕೂ ಹೆಚ್ಚಿನ ನಾಗಶಿಲೆಗಳಿರುವ ನಾಗಬನವಿದೆ. ಕರಾವಳಿಯ ಪ್ರಮುಖ ಕ್ಷೇತ್ರವಾದ ಇಲ್ಲಿ ನಿತ್ಯ ಸಾವಿರಾರು ಜನ ಭಕ್ತರು ನಾಗ ದೋಷ ನಿವಾರಣೆಗಾಗಿ ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ.
Click this button or press Ctrl+G to toggle between Kannada and English