ಅತ್ಯಾಚಾರಿ ಕೊಲೆಗಡುಕರಿಗೆ ಮರಣ ದಂಡನೆ ವಿಧಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಯವರಿಗೆ ಮನವಿ

4:01 PM, Wednesday, December 4th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Mangaluru

ಮಂಗಳೂರು : ಇತ್ತೀಚಿಗೆ 4 ಜನ ನರ ರಾಕ್ಷಸರಿಂದ ಅತ್ಯಾಚಾರಕ್ಕೊಳಗಾಗಿ ಅಮಾನವೀಯವಾಗಿ ಕೊಲೆಯಾದ ವೈದ್ಯೆ ಪ್ರಿಯಾಂಕ ರೆಡ್ಡಿಯವರ ಸಾವಿಗೆ ನ್ಯಾಯ ದೊರೆಯ ಬೇಕಾದರೆ ಈ ಪ್ರಕರಣವು ಆದಷ್ಟು ಬೇಗ ತ್ವರಿತ ನ್ಯಾಯಾಲಯದಲ್ಲಿ ಇತ್ಯರ್ಥವಾಗಿ ಅತ್ಯಾಚಾರಿ ಕೊಲೆಗಡುಕರಿಗೆ ಮರಣ ದಂಡನೆಯಾಗಬೇಕು. ಮಾತ್ರವಲ್ಲ ಇಷ್ಟರವರೆಗೆ ನಡೆದ ಎಲ್ಲಾ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಆದಷ್ಟು ಬೇಗ ಮರಣ ದಂಡನೆ ವಿಧಿಸ ಬೇಕೆಂದು ಒತ್ತಾಯಿಸಿ ದಿನಾಂಕ 4-12-2019 ರಂದು ಬೆಳಗ್ಗೆ 11 ಘಂಟೆಗೆ ದ.ಕ ಮಹಿಳಾ ಕಾಂಗ್ರೆಸ್ ವತಿಯಿಂದ ಮಂಗಳೂರು ಜಿಲ್ಲಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು .

ಈ ಸಂಧರ್ಭದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಎಲ್ಲಾ ಸಹೋದರ, ಸಹೋದರಿಯರು ಸರಿಯಾಗಿ 11 ಗಂಟೆಗೆ ದ.ಕ ಜಿಲ್ಲಾಧಿಕಾರಿ ಕಚೇರಿ ಬಳಿ ಹಾಜರಿದ್ದು ಬೆಂಬಲ ಸೂಚಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ದ.ಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಶಾಲೆಟ್ ಪಿಂಟೋರವರು ಅಮಾನುಷವಾಗಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಸಹೋದರಿ ಪ್ರಿಯಾಂಕ ರೆಡ್ಡಿಯವರ ಆತ್ಮಕ್ಕೆ ಶಾಂತಿ ದೊರೆಯಬೇಕಾದರೆ ಆರೋಪಿಗಳಿಗೆ ಕೂಡಲೇ ತ್ವರಿತ ನ್ಯಾಯಾಲಯದ ಮುಖಾಂತರ ಮರಣ ದಂಡನೆ ವಿಧಿಸಬೇಕು. ಇನ್ನು ಮುಂದೆ ಯಾರೂ ಕೂಡ ಇಂತಹ ಕುಕೃತ್ಯವನ್ನು ಮಾಡಬಾರದು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ನ ಹಿಲ್ಡಾ ಆಳ್ವ, ಸುರೇಖಾ ಚಂದ್ರಹಾಸ್, ದ.ಕ. ಮಹಿಳಾ ಕಾಂಗ್ರೆಸ್‌ ನ ಶ್ರೀಮತಿ ಶೋಭಾ ಕೇಶವ್ , ಶಶಿಕಲಾ ಪದ್ಮನಾಭ್, ಅಂಜುಮ್, ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ನಮಿತಾ ಡಿ.ರಾವ್, ಗೀತಾ ಸುವರ್ಣ, ವಿದ್ಯಾ , ಸರಳಾ ಕರ್ಕೇರಾ, ಕವಿತಾ ವಾಸು, ಮೇಬಲ್ ಡಿ ಸೋಜಾ, ಚಂದ್ರಕಲಾ, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷೆ ಶಾಂತಲಾ ಗಟ್ಟಿ, ಸಬೀತಾ ಮಿಸ್ಕಿತ್, ನೇತ್ರಾವತಿ, ಚಂದ್ರಕಲಾ ಡಿ.ರಾವ್, ಮೇಘ್ನಾದಾಸ್, ಮಂಜುಳಾ ನಾಯಕ್, ಆಶಾಲತಾ, ಸರಸ್ವತಿ ಸಾಲಿಯಾನ್ , ಯೂತ್ ಕಾಂಗ್ರೆಸ್ ನ ಕಾರ್ಯದರ್ಶಿ ಸಮರ್ಥ್ ಭಟ್ , ಯಶವಂತ್ ಪ್ರಭು, ವರುಣ್ ನಾಯಕ್ , ಮನ್ಸೂರ್, ಪ್ರದೀಪ್, ಅಹ್ಮದ್ ಮೆಗ್ದಾದ್ ಮುಂತಾದವರು ಉಪಸ್ಥಿತರಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English