ಮಡಿಕೇರಿ : ಸುಮಾರು 2.50 ಲಕ್ಷ ರೂ. ಮೌಲ್ಯದ ಹಲಸು ಮತ್ತು ಹೆಬ್ಬಲಸು ಮರಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಾಲು ಸಹಿತ ವಶಕ್ಕೆ ಪಡೆಯುವಲ್ಲಿ ಸಂಪಾಜೆ ಅರಣ್ಯ ತನಿಖಾ ಠಾಣೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕೆ.ಎಂ.ಹಂಸ ಎಂಬವರಿಗೆ ಸೇರಿದ ಲಾರಿಯಲ್ಲಿ ಮರವನ್ನು ಸಾಗಾಟ ಮಾಡಲಾಗುತ್ತಿತ್ತು. ಈ ಸಂದರ್ಭ ಕಾರ್ಯಾಚರಣೆ ನಡೆಸಿದ ಅರಣ್ಯ ಅಧಿಕಾರಿಗಳು ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟದ ಪಿ.ಕೆ.ಮಜೀದ್, ಕಲ್ಲುಬಾಣೆಯ ಕೆ.ಕೆ.ಮಜೀದ್ ಹಾಗೂ ನಾಪೋಕ್ಲುವಿನ ಕೆ.ಎಸ್.ಹನೀಫ್ ಅವರನ್ನು ಬಂಧಿಸಿ ಲಾರಿಯಲ್ಲಿದ್ದ ಮರಗಳನ್ನು ವಶಕ್ಕೆ ಪಡೆಯಲಾಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೀಲೇಶ್ ಶಿಂಧೆ ಅವರ ಮಾರ್ಗದರ್ಶನದಲ್ಲಿ ಸಂಪಾಜೆ ವಲಯ ಅರಣ್ಯಾಧಿಕಾರಿ ಎಂ.ಕೆ.ಮಧುಸೂದನ್, ಉಪ ವಲಯ ಅರಣ್ಯಾಧಿಕಾರಿ ಎಂ.ಸಿ.ವಿನಯ ಕೃಷ್ಣ, ಪಿ.ಜೆ.ರಾಘವ, ಎಂ.ವಿಜೇಂದ್ರ ಕುಮಾರ್, ಎಸ್.ಹೆಚ್.ಬಸವರಾಜಪ್ಪ ಅರಣ್ಯ ರಕ್ಷಕರಾದ ಕೆ.ಪಿ.ಜೋಯಪ್ಪ, ಪಿ.ಆರ್.ಜಗನ್ನಾಥ್, ಚಂದ್ರು ಬಣಕಾರ್, ಅರಣ್ಯ ವೀಕ್ಷಕ ಡಿ.ಕಾರ್ತಿಕ್, ವಾಹನ ಚಾಲಕ ಶಿವಪ್ರಸಾದ್ ಹಾಗೂ ಹಂಗಾಮಿ ನೌಕರ ರಂಗಪ್ಪ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English