ಮಡಿಕೇರಿ : ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸುವ ವಕೀಲ ವೃತ್ತಿ ಅತ್ಯಂತ ಹೆಮ್ಮೆಯ ಮತ್ತು ಪವಿತ್ರವಾದ ವೃತ್ತಿಯಾಗಿದ್ದು, ನ್ಯಾಯಾಂಗ ಕ್ಷೇತ್ರದಲ್ಲಿರುವ ಪ್ರತಿಯೊಬ್ಬರು ಈ ವೃತ್ತಿಯನ್ನು ಗೌರವಿಸಬೇಕು ಎಂದು ಹೈಕೋರ್ಟ್ ಹಿರಿಯ ನ್ಯಾಯವಾದಿ ಅರವಿಂದ್ ಕಾಮತ್ ಕಿವಿಮಾತು ಹೇಳಿದ್ದಾರೆ.
ಮಡಿಕೇರಿ ವಕೀಲರ ಸಂಘದ ವತಿಯಿಂದ ನಗರದ ಕೊಡವ ಸಮಾಜದಲ್ಲಿ ನಡೆದ ವಕೀಲ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ನ್ಯಾಯಾಂಗ ವ್ಯವಸ್ಥೆ ಅತ್ಯಂತ ಜವಬ್ದಾರಿಯುತ ಸ್ಥಾನವನ್ನು ನೀಡಿರುವುದರಿಂದ ವೃತ್ತಿಯಲ್ಲಿ ಆಳವಾದ ಅಧ್ಯಯನದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಕವನ್ ವಹಿಸಿದ್ದರು. ಇದೇ ಸಂದರ್ಭ ಹಿರಿಯ ವಕೀಲ ಕೆ.ಡಬ್ಲ್ಯು ಬೋಪಯ್ಯ ಹಾಸನ ಮತ್ತು ದಕ್ಷಿಣ ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷ ಎ. ಲೋಕೇಶ್‌ಕುಮಾರ್ ಹಾಗೂ ವಕೀಲ ಬಿ.ಸಿ. ಪೂವಯ್ಯ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಜಂಟಿ ಕಾರ್ಯದರ್ಶಿ ಕೇಶವ್, ಖಜಾಂಚಿ ದೇವಿಪ್ರಸಾದ್ ಉಪಸ್ಥಿತರಿದ್ದರು. ವಕೀಲರಾದ ಚೌರೀರ ಅಪ್ಪಣ್ಣ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ದಯಾ ಹೊನ್ನಪ್ಪ ಹಾಗೂ ಲತಾ ಪ್ರಾರ್ಥಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಕಿಶೋರ್ ಸ್ವಾಗತಿಸಿ, ಪವನ್ ಪೆಮ್ಮಯ್ಯ ನಿರೂಪಿಸಿ, ಉಪಾಧ್ಯಕ್ಷ ಪ್ರೀತಂ ವಂದಿಸಿದರು.
Click this button or press Ctrl+G to toggle between Kannada and English