ನಗರದ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನ ವೈದ್ಯರ ಸಾಧನೆ : ಮಹಿಳೆಯ ಹೊಟ್ಟೆಯಲ್ಲಿದ್ದ 4 ಕೆ.ಜಿ. ಗುಲ್ಮಕ್ಕೆ ಶಸ್ತ್ರಚಿಕಿತ್ಸೆ

6:41 PM, Friday, September 24th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಮಹಿಳೆಯ ಹೊಟ್ಟೆಯಲ್ಲಿದ 4 ಕೆ.ಜಿ. ಗುಲ್ಮಬೆಂಗಳೂರು: ಮಹಿಳೆಯೊಬ್ಬರ ಹೊಟ್ಟೆಯಲ್ಲಿ 4 ಕೆ.ಜಿ. ಗಾತ್ರಕ್ಕೆ ಬೆಳೆದಿದ್ದ ಗುಲ್ಮವನ್ನು (ಸ್ಪ್ಲೀನ್) ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕುವಲ್ಲಿ ನಗರದ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಸಫಲರಾಗಿದ್ದಾರೆ.
40 ವರ್ಷ ಪ್ರಾಯದ ಈ ಮಹಿಳೆ ತೀವ್ರ ಹೊಟ್ಟೆನೋವು ಮತ್ತು ಹಸಿವೆಯೇ ಇಲ್ಲದಿರುವಿಕೆಯ ಸ್ಥಿತಿಯೊಂದಿಗೆ ಆಸ್ಪತ್ರೆಗೆ ಬಂದಿದ್ದರು. ಮೊದಲಿಗೆ ವೈದ್ಯರು ಇದು ತೀವ್ರ ಮಲೇರಿಯಾ ಪ್ರಕರಣ ಎಂದು ಭಾವಿಸಿದ್ದರು. ಆದರೆ ಬಳಿಕ ಇದು ಗುಲ್ಮದ ಹಾನಿಕರ ಗೆಡ್ಡೆ ಎಂಬುದು ಗೊತ್ತಾಯಿತು. ಇದೊಂದು ಅಪರೂಪದ ಪ್ರಕರಣವಾಗಿದ್ದು, ನಾನ್-ಹೊಡ್ಜ್ಕಿಮ್ಸ್ ಲಿಂಫೋಮಾ ವಿಭಾಗದಲ್ಲಿ ಇಂತಹ ಕೇವಲ ಶೇ 1ರಷ್ಟು ಪ್ರಕರಣಗಳು ಮಾತ್ರ ಸಂಭವಿಸುತ್ತವೆ. ಈ ತೊಂದರೆಗೆ ಜನರು ಯಾಕೆ ತುತ್ತಾಗುತ್ತಾರೆ ಎಂಬುದಕ್ಕೆ ನಿಖರ ಕಾರಣ ಇಲ್ಲ. ಎನ್ನುತ್ತಾರೆ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹ ಪ್ರೊಫೆಸರ್ ಡಾ. ವೆಂಕಟೇಶ್.
ಇದು ಒಂದು ರೀತಿಯ ಕ್ಯಾನ್ಸರ್ನಂತೆ. ಆರೋಗ್ಯವಂತರಲ್ಲಿ ಗುಲ್ಮದ ಗಾತ್ರ 150 ಗ್ರಾಂನಷ್ಟು ಗಾತ್ರ ಇರುತ್ತದೆ. ಈ ರೋಗಿಯ ಗುಲ್ಮದ ಗಾತ್ರ 4 ಕೆ.ಜಿ.ಯಷ್ಟು ತೂಕವಿತ್ತು. ಮೂರು ಗಂಟೆಗಳ ಸತತ ಪರಿಶ್ರಮದ ಬಳಿಕ ಗುಲ್ಮ ಗಡ್ಡೆ ತೆಗೆದುಹಾಕಲಾಯಿತು’ ಎನ್ನುತ್ತಾರೆ ವೆಂಕಟೇಶ್.
ಇದೊಂದು ಗುಲ್ಮದ ತೀವ್ರತೆಯ ಲಕ್ಷಣ. ಈ ಮಹಿಳೆಗೆ ಉಚಿತವಾಗಿ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಕೇವಲ ಔಷಧದ ವೆಚ್ಚವನ್ನು ಮಾತ್ರ ಅವರು ನೀಡಿದ್ದಾರೆ. ನಮ್ಮ ದೇಹದಲ್ಲಿರುವ ಹಳೆಯ ಕೆಂಪು ರಕ್ತಕಣಗಳನ್ನು ನಾಶಪಡಿಸಲು ಮತ್ತು ಮರುಸಂಸ್ಕರಣಗೊಳಿಸಲು ಇರುವ ದುಗ್ಘಕೋಶವನ್ನು ತಯಾರು ಮಾಡುವ ಅಂಗವೇ ಗುಲ್ಮ. ಇದನ್ನು ರಕ್ತ ಸರೋವರ ಎಂದೂ ಕರೆಯಬಹುದು. ಅಗತ್ಯ ಬಿದ್ದಾಗ ಅಂದರೆ ತೀವ್ರ ಗಾಯವಾಗಿ ರಕ್ತಸ್ರಾವವಾದಾಗ ದೇಹಕ್ಕೆ ರಕ್ತ ಪೂರೈಸುವುದು ಗುಲ್ಮವೇ. ಬಿಳಿ ರಕ್ತ ಕಣಗಳು ರೋಗಾಣುಗಳನ್ನು ಸೆರೆಹಿಡಿದು ಕೊಲ್ಲುವ ಸ್ಥಳವೂ ಗುಲ್ಮವೇ ಆಗಿದೆ. ಗುಲ್ಮವು ಎಡ ಹೊಟ್ಟೆಯ ಮೇಲ್ಭಾಗದಲ್ಲಿರುತ್ತದೆ. ಪಕ್ಕೆಲುಬಿನ ಹಂದರದ ಒಳಗೆ ಇದು ಸುರಕ್ಷಿತವಾಗಿರುತ್ತದೆ. ಸಡಿಲವಾದ ಮುಷ್ಟಿಯ ರೂಪದಲ್ಲಿರುವ ಗುಲ್ಮವು ಎದೆಯ ಭಾಗಕ್ಕೂ ಹೊಟ್ಟೆಯ ಭಾಗಕ್ಕೂ ನಡುವಿನ ವಿಭಜಕಾಂಗದ (ವಪೆ) ಎಡಭಾಗದಲ್ಲಿರುತ್ತದೆ. ವಯಸ್ಕರ ದೇಹದಲ್ಲಿನ ಗುಲ್ಮದ ಸರಾಸರಿ ತೂಕ 0.44 ಎಲ್ಬಿಗಳು. ಜೀರ್ಣ ಕ್ರಿಯೆ ನಡೆಯುತ್ತಿರುವಾಗ ಮತ್ತು ಜೀರ್ಣಗೊಂಡ ಬಳಿಕ ಗುಲ್ಮದ ಗಾತ್ರ ದೊಡ್ಡದಾಗುತ್ತದೆ. ಮಲೇರಿಯಾ ಅಥವಾ ಇತರ ಏಕಾಣು ಜೀವಿಗಳಿಂದ ಸೋಂಕು ಉಂಟಾದಾಗಲೂ ಗುಲ್ಮದ ಗಾತ್ರ ದೊಡ್ಡದಾಗುತ್ತದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English