ವಿಶ್ವ ಕೊಂಕಣಿ ಕೇಂದ್ರ ’ದಿ ಕೊಂಕಣಿ ವರ್ಲ್ಡ್’ ಪುಸ್ತಕ ಲೋಕಾರ್ಪಣಾ ಸಮಾರಂಭ

5:30 PM, Thursday, December 5th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Konkani

ಮಂಗಳೂರು : ಕೊಂಕಣಿ ಭಾಸ ಆನಿ ಸಂಸ್ಕೃತಿ ಪ್ರತಿಷ್ಠಾನ, ವಿಶ್ವ ಕೊಂಕಣಿ ಕೇಂದ್ರ ಆಶ್ರಯದಲ್ಲಿ ಡಿ. 05-10-2019ರಂದು ನವ ದೆಹಲಿಯ ನಿವೃತ್ತ ಐ. ಎ. ಎಸ್ ಅಧಿಕಾರಿ ದಿವಂಗತ ಶ್ರೀ ಎನ್ ಜೆ. ಕಾಮತ್ ರವರು ಬರೆದ ದಿ ಕೊಂಕಣಿ ವರ್ಲ್ಡ್ ’ದಿ ಕೊಂಕಣಿ ವರ್ಲ್ಡ್’ ಇಂಗ್ಲಿಷ್ ಪುಸ್ತಕ ಲೋಕಾರ್ಪಣಾ ಸಮಾರಂಭವು ಶ್ರೀ ಪ್ರೇಮ್ ಕಾಮತ್ ಹಾಗೂ ರೀನಾ ಕಾಮತ್‌ರವರ ಉಪಸ್ಥಿತಿಯಲ್ಲಿ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು.

ವಿಶ್ವ ಕೊಂಕಣಿ ಕೇಂದ್ರ ಉಪಾಧ್ಯಕ್ಷ ಶ್ರೀ ಕುಡ್ಪಿ ಜಗದೀಶ ಶೆಣೈ ಹಾಗೂ ಶ್ರೀ ಗಿಲ್ಬರ್ಟ್ ಡಿಸೋಜಾ ರವರು ದಿ ಕೊಂಕಣಿ ವರ್ಲ್ಡ್ ಪುಸ್ತಕ ಲೋಕಾರ್ಪಣೆ ಮಾಡಿದರು. ವಿಶ್ವ ಕೊಂಕಣಿ ಕೇಂದ್ರ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ ಸ್ವಾಗತಿಸಿದರು. ಶ್ರೀ ಪ್ರೇಮ್ ಕಾಮತ್ ಹಾಗೂ ಶ್ರೀಮತಿ ರೀನಾ ಕಾಮತ್‌ರವರು ಪುಸ್ತಕದ ಬಗ್ಗೆ ಪ್ರಾಸ್ತಾವಿಕ ವಿವರಣೆ ನೀಡಿದರು.

ವಿಶ್ವ ಕೊಂಕಣಿ ಕೇಂದ್ರ ಆಡಳಿತ ಮಂಡಳಿ ಟ್ರಸ್ಟಿ ಶ್ರೀಮತಿ ಜಿಸೆಲ್ ಡಿ. ಮೆಹ್ತಾ, ವಿಶ್ವ ಕೊಂಕಣಿ ಕೇಂದ್ರ ಸದಸ್ಯ ಹಾಗೂ ದಾನಿಗಳಾದ ಶ್ರೀ ಕುಡ್ಗಿ ಸುಧಾಕರ ಶೆಣೈ, ಶ್ರೀ ಸಿ.ಡಿ ಕಾಮತ ಹಾಗೂ ಚಪ್ಟೇಕಾರ ಸಾರಸ್ವತ ಸಮಾಜದ ಅಧ್ಯಕ್ಷ ಶ್ರೀ ಪ್ರವೀಣ ಕುಮಾರ ನಾಯಕ, ವಿಶ್ವ ಕೊಂಕಣಿ ಸಂಗೀತ ನಾಟಕ ಅಕಾಡೆಮಿ ಸದಸ್ಯ ಉಳ್ಳಾಲ ರಾಘವೇಂದ್ರ ಕಿಣಿ, ಶ್ರೀಮತಿ ಶಕುಂತಲಾ ಆರ್ ಕಿಣಿ, ವಿಶ್ವ ಕೊಂಕಣಿ ಸ್ತ್ರೀ ಶಕ್ತಿ ಮಿಶನ್ ಸಂಚಾಲಕಿ ಶ್ರೀಮತಿ ಗೀತಾ ಸಿ. ಕಿಣಿ, ಗೌಡ ಸಾರಸ್ವತ ಬ್ರಾಹ್ಮಣ ಮಹಿಳಾ ವೃಂದ ಅಧ್ಯಕ್ಷೆ ಶ್ರೀಮತಿ ವಿಮಲಾ ಕಾಮತ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಶ್ರೀಮತಿ ಲಕ್ಮ್ಷಿ ವಿ. ಕಿಣಿ ಪ್ರಾರ್ಥಿಸಿದರು, ವಿಶ್ವ ಕೊಂಕಣಿ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀ ಎಮ್ ಆರ್. ಕಾಮತ ಕಾರ್ಯಕ್ರಮ ನಿರೂಪಣೆ ಮಾಡಿದರು. ವಿಶ್ವ ಕೊಂಕಣಿ ಕೇಂದ್ರ ಕಾರ್ಯದರ್ಶಿ ಶ್ರೀ ಬಿ. ಪ್ರಭಾಕರ ಪ್ರಭು ಧನ್ಯವಾದ ಸಮರ್ಪಣೆ ಮಾಡಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English