ಪಶುವೈದ್ಯೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ : ಕನ್ನಡಿಗ ವಿಶ್ವನಾಥ್ ಸಜ್ಜನರಿಂದ ಆರೋಪಿಗಳ ಎನ್ ಕೌಂಟರ್

12:03 PM, Friday, December 6th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Vishwanth

ಹೈದರಾಬಾದ್ : ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ದಿಶಾ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಎಲ್ಲಾ ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ.ಈ ಕಾರ್ಯಾಚರಣೆ ಹಿಂದಿರುವ ವ್ಯಕ್ತಿ ಕರ್ನಾಟಕದ ಹುಬ್ಬಳ್ಳಿಯವರಾದ ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ ಎಂದು ತಿಳಿದುಬಂದಿದೆ.

ಅತ್ಯಾಚಾರ, ಕೊಲೆ ಪ್ರಕರಣ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ಮಾತ್ರವಲ್ಲದೆ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವಂತೆ ತೀವ್ರ ಒತ್ತಡ ತರಲಾಗಿತ್ತು.

ಇಂದು ಮುಂಜಾನೆ ಪೊಲೀಸರು ಎಲ್ಲಾ ಆರೋಪಿಗಳನ್ನು ಅತ್ಯಾಚಾರ, ಕೊಲೆ ನಡೆದ ಪ್ರದೇಶಕ್ಕೆ ಸ್ಥಳ ಪರಿಶೀಲನೆಗೆ ಕರೆದೊಯ್ಯುವ ವೇಳೆ ನಾಲ್ವರು ತಪ್ಪಿಸಿಕೊಳ್ಳಲು ಪ್ರಯತ್ನಸಿದ್ದಾರೆ. ಈ ವೇಳೆ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ ನೇತೃತ್ವದ ತಂಡ ಎನ್ ಕೌಂಟರ್ ಮಾಡಿದ್ದಾರೆ.

ಈ ಹಿಂದೆ ತೆಲಂಗಾಣದ ವಾರಂಗಲ್ ನಲ್ಲಿ ನಡೆದ ವಿವಾಹಿತ ಮಹಿಳೆಯ ಮೇಲೆ ಆಟೋ ಚಾಲಕ ಆ್ಯಸಿಡ್ ದಾಳಿ ನಡೆಸಿದ ಪ್ರಕರಣದ ಆರೋಪಿಯನ್ನು ಕೂಡ ವಿಶ್ವನಾಥ್ ಸಜ್ಜನರ ಎನ್ ಕೌಂಟರ್ ಮಾಡಿದ್ದರು.

ದಿಶಾ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಎನ್ ಕೌಂಟರ್ ಮಾಡಿರುವುದಕ್ಕೆ ವಿಶ್ವನಾಥ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಲಾಗುತ್ತಿದೆ.

ಎನ್ ಕೌಂಟರ್ ಸ್ಪೆಷಲಿಸ್ಟ್ ವಿಶ್ವನಾಥ್ ಸಜ್ಜನರ ಮೂಲತಃ ಹುಬ್ಬಳ್ಳಿಯ ಪಗಣಿ ಓಣಿಯವರು. ತಂದೆ ಚನ್ನಬಸಪ್ಪ ಬಿ ಸಜ್ಜನ್ . ಮೂರು ಜನ ಮಕ್ಕಳಲ್ಲಿ ವಿಶ್ವನಾಥ್ ಕಿರಿಯವರು. ಇವರು ಹುಬ್ಬಳ್ಳಿಯ ಲಾಯ್ಸ್ ಸ್ಕೂಲ್ ನಲ್ಲಿ ಪ್ರಾಥಮಿಕ ಹಾಗೂ ಫ್ರೌಢ ಶಿಕ್ಷಣ ಪಡೆದಿದ್ದರು. ಬಳಿಕ ಜೆಜಿ ಕಾಮರ್ಸ್ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಪೂರೈಸಿ , ಕರ್ನಾಟಕದ ವಿಶ್ವವಿದ್ಯಾಲಯ ಕೌಶಾಲಿಯಲ್ಲಿ ಎಂ.ಬಿ.ಎ ವ್ಯಾಸಂಗ ನಡೆಸಿದ್ದಾರೆ.

1989 MBA ಪದವಿ ಗಳಿಸಿದ ಸಜ್ಜನರ್ ,1996 ಯುಪಿಎಸ್ ಇ ಪರೀಕ್ಷೆ ತೇರ್ಗಡೆ ಹೊಂದಿದ್ದರು. ಆ ಬಳಿಕ ಆಂಧ್ರಪ್ರದೇಶದ ಕೇಡರ್ ಅಧಿಕಾರಿಯಾಗಿ ಸೇವೆಗೆ ನಿಯುಕ್ತಿಗೊಂಡಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English