“ಅಲ್ಪಾವಧಿ ತರಬೇತಿ ಕೋರ್ಸಗಳ” ಉದ್ಘಾಟನೆ

5:26 PM, Friday, December 6th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Alvas

ಮೂಡುಬಿದಿರೆ : ಮಂತ್ರಕ್ಕೆ ಉಪಯೋಗಿಸದ ಅಕ್ಷರವಿಲ್ಲ, ಔಷಧಿಗೆ ಉಪಯೋಗಿಸದ ಎಲೆಗಳಿಲ್ಲ. ಹಾಗೆಯೇ ಯಾವುದಕ್ಕೂ ಉಪಯೋಗಕ್ಕೆ ಬಾರದ ವ್ಯಕ್ತಿಯಿಲ್ಲ. ಎಲ್ಲರಲ್ಲೂ ಸ್ತುಪ್ಥ ಪ್ರತಿಭೆ ಅಡಗಿರುತ್ತದೆ, ಅದನ್ನು ಹೊರತೆಯುವಲ್ಲಿ ನಾವು ಕಾರ‍್ಯ ಪ್ರವೃತ್ತರಾಗಬೇಕು ಎಂದು ಆಳ್ವಾಸ್ ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ ಎಂದು ಹೇಳಿದರು.

ಆಳ್ವಾಸ್ ಪದವಿ ಕಾಲೇಜಿನಲ್ಲಿ ನಡೆದ ಅಲ್ಪಾವಧಿ ತರಬೇತಿ ಕೋರ್ಸಗಳ ಉದ್ಘಾಟನಾ ಕಾರ‍್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು. ಹವ್ಯಾಸವನ್ನೇ ವೃತ್ತಿಯನ್ನಾಗಿಸಬೇಕು. ಯಾವ ವೃತ್ತಿಯೂ ನಿಕೃಷ್ಟವುವಲ್ಲ ಹಾಗೆಯೆ ಶ್ರೇಷ್ಠವುವಲ್ಲ. ಎಲ್ಲಾ ವೃತ್ತಿಗೂ ತನ್ನದೇ ಆದ ಗೌರವವಿದೆ. ನಮ್ಮ ಯೋಚನೆಗಳು ಏನಿರುತ್ತವೆಯೋ, ಅವೇ ನಮ್ಮ ವ್ಯಕ್ತಿತ್ವವನ್ನು ನಿರ್ಮಿಸುತ್ತವೆ. ಹೃದಯ ಮತ್ತು ಮನಸ್ಸು ಜತೆಯಾಗಿ ಕೆಲಸ ಮಾಡಿದರೆ ಎಲ್ಲಾ ಕೆಲಸದಲ್ಲೂ ಯಶಸ್ಸು ಪಡೆಯಬಹುದು” ಎಂದರು.

ಕಾಮರ್ಸ್ ವೃತ್ತಿಪರ ಕೋರ್ಸುಗಳ ಸಂಯೋಜಕ ಅಶೋಕ್ ಕೆ.ಜಿ ಮಾತನಾಡಿ, ”ಅಲ್ಪಾವಧಿ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳಿಗೆ ಹಲವಾರು ವಿಷಯಗಳನ್ನು ಕಲಿಯಲು ಅವಕಾಶವಿದೆ. ಇಲ್ಲಿ ಸಿಗುವ ನೈಪುಣ್ಯತೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮುಂದೆ ಯಶಸ್ಸನ್ನು ಪಡೆಯಲು ಸಾಧ್ಯ” ಎಂದರು.

Alvas

ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದಿಂದ ಕಾಮರ್ಸ್ ವೃತ್ತಿಪರ ಕೋರ್ಸುಗಳ ವಿದ್ಯಾರ್ಥಿಗಳಿಗೆ ನಾಲ್ಕು ದಿನದ ಅಲ್ಪಾವಧಿ ಕೋರ್ಸ್‌ಗಳನ್ನು ಡಿಜಿಟಲ್ ಗ್ರಾಫಿಕ್ಸ್, ಡಿಜಿಟಲ್ ಮಾರ್ಕೇಟಿಂಗ್, ಆಂಕರಿಂಗ್ ಹಾಗೂ ಪ್ರೋಟೋಗ್ರಾಫಿ ವಿಷಯಗಳ ಮೇಲೆ ನೀಡಲಾಯಿತು. ಈ ಕೋರ್ಸುಗಳಿಗೆ ಸುಮಾರು 82 ವಿದ್ಯಾರ್ಥಿಗಳು ನೊಂದಾಣಿಯನ್ನು ಮಾಡಿಕೊಂಡಿದ್ದರು.

ಪತ್ರಿಕೋದ್ಯಮ ವಿಭಾಗದ ಸಂಯೋಜಕ ಶ್ರೀನಿವಾಸ ಪೆಜತ್ತಾಯ, ವಾಣಿಜ್ಯ ವಿಭಾಗದ ಶಿಲ್ಪಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಮರ್ಸ್ ವೃತ್ತಿಪರ ಕೋರ್ಸುಗಳ ಸಂಯೋಜಕ ಅಶೋಕ್ ಕೆ ಜಿ ಸ್ವಾಗತಿಸಿದರು. ಪತ್ರಿಕೋದ್ಯಮ ಉಪನ್ಯಾಸಕಿ ಶ್ರೀಗೌರಿ ಜೋಷಿ ಕಾರ್ಯಕ್ರಮ ನಿರೂಪಿಸಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English