ಎಬಿವಿಪಿ ಯಿಂದ ಡಾ| ಬಿ.ಆರ್ ಅಂಬೇಡ್ಕರ್ ರವರ ಪುಣ್ಯ ತಿಥಿ ಸಾಮರಸ್ಯ ಕಾರ್ಯಕ್ರಮ

1:09 PM, Saturday, December 7th, 2019
Share
1 Star2 Stars3 Stars4 Stars5 Stars
(No Ratings Yet)
Loading...

abvp ಮಂಗಳೂರು  :  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ನಗರದ ವತಿಯಿಂದ ಡಾ| ಬಿ.ಆರ್ ಅಂಬೇಡ್ಕರ್ ರವರ ಪುಣ್ಯ ತಿಥಿಯ ದಿನವಾದ ಡಿಸೆಂಬರ್ 6 ರಂದು ಸಾಮಾಜಿಕ ಸಾಮರಸ್ಯ ಕಾರ್ಯಕ್ರಮವನ್ನು ಕೆ.ಪಿ.ಟಿಯ ಡಿ. ದೇವರಾಜ್ ಅರಸು ಹಿಂದುಳಿದ ವರ್ಗಗಳ ವಸತಿ ನಿಲಯ ಟೌನ್ ಹಾಲಿನ ಅಂಬೇಡ್ಕರ್ ಪ್ರತಿಮೆಯ ಬಳಿ ಹಾಗೂ ಅಶೋಕ ನಗರದ ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕೆಪಿಟಿ, ಬಿಸಿಎಂ ವಿದ್ಯಾರ್ಥಿನಿಲಯದಲ್ಲಿ ಮುಂಜಾನೆ ಸಾಮಾಜಿಕ ಸಾಮರಸ್ಯದ ಕುರಿತು ಹಾಗೂ ಅಂಬೇಡ್ಕರ್‌ರವರ ಜೀವನದ ಹಾದಿಯ ಬಗ್ಗೆ ನಗರ ಕಾರ್ಯದರ್ಶಿಯಾದ ಶ್ರೀ ಮಣಿಕಂಠ ಕಳಸ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

abvp ಮಂಗಳೂರು ಮಹಾನಗರದ ಎಬಿವಿಪಿ ಕಾರ್ಯಕರ್ತರು ಟೌನ್‌ಹಾಲ್ ಬಳಿಯ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಷನೆಯನ್ನು ಮಾಡಿ ಸಾಮಾಜಿಕ ಸಾಮರಸ್ಯದ ಕುರಿತು ಗೌರವವನ್ನು ಸಲ್ಲಿಸಲಾಯಿತು.

ಅಶೋಕನಗರ ವಿದ್ಯಾರ್ಥಿ ನಿಲಯದಲ್ಲಿ ನಡೆದ ಸಾಮಜಿಕ ಸಾಮರಸ್ಯ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ನಗರದ ಸಹ ಕಾರ್ಯದರ್ಶಿ ನಿಶಾನ್ ಆಳ್ವ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಸ್ಟೆಲಿನ ವಾರ್ಡನ್ ಹೇಮಂತರವರು ವಹಿಸಿದ್ದರು. ಮುಖ್ಯ ವಕ್ತಾರರಾಗಿ ಆಗಮಿಸಿದ ಶ್ರೀ ಕೇಶವ ಬಂಗೇರ ರವರು ಅಂಬೇಡ್ಕರ್‌ರವರ ಜೀವನದ ಕುರಿತು ಉಪನ್ಯಾಸ ನೀಡುವುದರೊಂದಿಗೆ ಅಂಬೇಡ್ಕರ್ ರವರನ್ನು ಕೇವಲ ದಲಿತ ನಾಯಕನಾಗಿ ಅಥವಾ ಸಂವಿಧಾನ ಶಿಲ್ಪಿಯಾಗಿ ನೋಡುವ ನಿಲುವನ್ನು ಬದಲಾಯಿಸಿ ಅವರ ಜೀವನದ ಕುರಿತು ಹೊಸ ಆಯಾಮದಲ್ಲಿ ನಾವು ಚಿಂತನೆಯನ್ನು ನಡೆಸಬೇಕಾದಂತಹ ವ್ಯಕ್ತಿತ್ವ ಡಾ| ಬಿ.ಆರ್ ಅಂಬೇಡ್ಕರ್‌ರವರು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ವಿಭಾಗ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ, ನಗರ ಸಂಘಟನಾ ಕಾರ್ಯದರ್ಶಿ ವೀರೇಶ್ ಅಜ್ಜಣ್ಣನವರು, ನಗರ ಕಾರ್ಯದರ್ಶಿ ಮಣಿಕಂಠ ಕಳಸ, ಎಸ್.ಡಿ.ಎಂ ಕಾಲೇಜು ಘಟಕದ ಅಧ್ಯಕ್ಷರಾದ ಈರಜ್ ನಾಯಕ್, ಗುರುಪ್ರಸಾದ್, ಆದಿತ್ಯ, ಚರಣ್ ರಾಜ್, ಅಭಿಜ್ಞ, ಶೀತಲ್ ಕುಮಾರ್ ಜೈನ್ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English