ಹದಿ ಹರೆಯದ ವಿದ್ಯಾರ್ಥಿಗಳ ವಯೋಸಹಜ ಭಾವನೆಗಳಿಗೆ ಉತ್ತಮ ಹವ್ಯಾಸಗಳು ಪೂರಕವಾಗಿರಬೇಕು

2:36 PM, Sunday, December 8th, 2019
Share
1 Star2 Stars3 Stars4 Stars5 Stars
(No Ratings Yet)
Loading...

shakthi ಮಂಗಳೂರು : ಉತ್ತಮ ಹವ್ಯಾಸಗಳು, ಒಳ್ಳೆಯ ಸ್ನೇಹಿತರು ಹಾಗೂ ಪರಿಸರ ಹದಿ ಹರೆಯದ ವಿದ್ಯಾರ್ಥಿಗಳ ವಯೋಸಹಜ ಭಾವನೆ. ಭಾವಾದೇಶಗಳಿಗೆ ಸೂಕ್ತ ಪರಿಹಾರ ಎಂದು ಶಕ್ತಿ ನಗರದ ಶಕ್ತಿ ವಸತಿ ಶಾಲೆಯಲ್ಲಿ ವಯಸ್ಸಿನ ಬದಲಾವಣೆ ಮತ್ತು ಪರಿಣಾಮ ಎಂಬ ಕಾರ್ಯಗಾರದಲ್ಲಿ ಭಾಗವಹಿಸಿದ ಅಕ್ಷತಕಾಮತ್, ಆಪ್ತ ಸಮಾಲೋಚಕಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಹದಿಹರೆಯದ ವಯಸ್ಸಿನ ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಬದಲಾವಣೆಗಳು ಹಾರ್ಮೋನ್‌ಗಳ ಕಾರಣದಿಂದ ಉಂಟಾಗುವವು. ಉತ್ತಮ ಆಹಾರ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೇವನೆಯ ಮೂಲಕ ನಮ್ಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಂಡು ಮಾನಸಿಕ ಆರೋಗ್ಯವನ್ನು ವೃದ್ಧಿಸಬೇಕು ಎಂದರು. ಹದಿಹರೆಯದ ವಯಸ್ಸು ಮಕ್ಕಳನ್ನು ದುರಭ್ಯಾಸಗಳತ್ತ, ಕೆಟ್ಟ ವಿಚಾರಗಳತ್ತ ಬಹುಬೇಗ ಆಕರ್ಷಣೆಗೆ ಒಳಗು ಮಾಡುತ್ತವೆ. ಮೊಬೈಲ್, ಟಿ.ವಿ, ಸಿನಿಮಾಗಳಂತ ಸಾಮಾಜಿಕ, ಮಾಧ್ಯಮಗಳು ಇವುಗಳಿಗೆ ಪ್ರಚೋದನೆ ನೀಡುತ್ತವೆ. ಆದುದರಿಂದ ಮಕ್ಕಳು ವಿದ್ಯಾರ್ಥಿದೆಸೆಯಿಂದಲೇ ಕ್ರೀಡೆ, ಸಂಗೀತ, ಚಿತ್ರಕಲೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸುವುದು ಒಳ್ಳೆಯ ಸ್ನೇಹಿತರನ್ನುಆಯ್ಕೆ ಮಾಡುವುದನ್ನು ಅರಿತುಕೊಳ್ಳಬೇಕು. ದುರಭ್ಯಾಸಗಳಾದ ಸಿಗರೇಟು, ಕುಡಿತ, ಮಾಧಕ ದ್ರವ್ಯಗಳ ಅದರ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವಅಗತ್ಯವಿದೆ. ಹಾಗಾಗಿ ವಿದ್ಯಾರ್ಥಿಗಳು ಯೋಗಾಭ್ಯಾಸಗಳ, ಧ್ಯಾನಗಳ ಮೂಲಕ ತಮ್ಮ ಮನಸ್ಸಿನ ಭಾವಾವೇಶಗಳನ್ನು ಹತೋಟಿಕೆತರಬಹುದುಎಂದು ಹೇಳಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಕೆ.ಸಿ ನಾಕ್, ಆಡಳಿತ ಮೊಕ್ತೇಸರರು ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಸಂಸ್ಥೆಯಅಭಿವೃದ್ಧಿಅಧಿಕಾರಿ ಪ್ರಕ್ಯಾತ್‌ರೈ, ಉಪಸ್ಥಿತರಿದ್ದರು. ಶಿಕ್ಷಕಿ ಸ್ವಾತಿ ಭರತ್ ಸ್ವಾಗತಿಸಿ, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ವಿದ್ಯಾಕಾಮತ್ ಜಿ ವಂದಿಸಿದರು.

shakthi school

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English