ಉಜಿರೆ: ಕಲಾವಿದರು ಮತ್ತು ಸಹೃದಯ ಕಲಾಭಿಮಾನಿಗಳಿಂದ ಕಲೆ ಉಳಿಯುತ್ತದೆ, ಬೆಳೆಯುತ್ತದೆ. ಕಲೆಗಳು ದೈವತ್ವದ ಕಲ್ಪನೆಯೊಂದಿಗೆ ಧಾರ್ಮಿಕ ಪ್ರಜ್ಞೆ ಜಾಗೃತಗೊಳಿಸಿ ಸುಸಂಸ್ಕೃತ, ಸಭ್ಯ ನಾಗರಿಕರನ್ನು ರೂಪಿಸಿ ಮಾನಸಿಕ ನೆಮ್ಮದಿ ಹಾಗೂ ಸಂತೋಷವನ್ನು ನೀಡುತ್ತವೆ ಎಂದು ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆಯವರು ಹೇಳಿದರು.
ಉಜಿರೆಯಲ್ಲಿ ನಿರ್ಮಿಸಲಾದ ವನರಂಗ ನೂತನ ಬಯಲುರಂಗಮಂದಿರವನ್ನುಅವರು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಸಂಗೀತ, ನೃತ್ಯ, ನಾಟಕ, ಯಕ್ಷಗಾನ ಮೊದಲಾದ ಕಲೆಗಳು ಮನೋರಂಜನೆಯೊಂದಿಗೆ ಸಾರ್ಥಕ ಬದುಕಿಗೆ ಉಪಯುಕ್ತವಾದ ಮೌಲಿಕ ಸಂದೇಶವನ್ನು ನೀಡುತ್ತವೆ. ನೂತನರಂಗಮಂದಿರದಿಂದಾಗಿ ಬಹುದಿನಗಳ ಕನಸು ನನಸಾಗಿದೆಎಂದುಅವರು ಸಂತಸ ವ್ಯಕ್ತಪಡಿಸಿದರು. ಇದು ಸದಾ ಬಿಡುವಿಲ್ಲದರಂಗಮಂದಿರವಾಗಲಿ ಎಂದು ಹಾರೈಸಿದ ಅವರುಇಲ್ಲಿ ಪ್ರಶಾಂತಪ್ರಾಕೃತಿಕ ಪರಿಸರವಿದ್ದು ಬೆಳೆದಿಂಗಳು ಹಾಗೂ ತಂಗಾಳಿಯೊಂದಿಗೆ ಪ್ರಾಕೃತಿಕ ಸೊಗಡನ್ನುಆಸ್ವಾದಿಸಲು ಸೂಕ್ತ ಜಾಗವಾಗಿದೆಎಂದುಅವರು ಹೇಳಿದರು.
ಹಲವು ಪರಕೀಯರ ದಾಳಿಗೆ ತುತ್ತಾದರೂನಮ್ಮದೇಶದಲ್ಲಿ ಸನಾತನಧರ್ಮ, ಸಂಸ್ಕೃತಿ ಹಾಗೂ ಆಚಾರ- ವಿಚಾರಗಳು ಇಂದಿಗೂ ಜೀವಂತಿಕೆಯಿಂದ ಉಳಿಯಲು ಕಲೆಗಳು ಹಾಗೂ ಕಲಾವಿದರೇ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.
ಗಾಢವಾದ ತತ್ವ-ಸಿದ್ಧಾಂತಗಳನ್ನು, ಗಹನವಾದ ವಿಚಾರಗಳನ್ನು, ನೈತಿಕ ಸಂದೇಶವನ್ನು ನೃತ್ಯ, ನಾಟಕ, ಯಕ್ಷಗಾನದ ಮೂಲಕ ಕಲಾವಿದರು ಹೃದಯಸ್ಪರ್ಶಿಯಾಗಿ ಸಾದರಪಡಿಸುತ್ತಾರೆ.ರಾಮಾಯಣ, ಮಹಾಭಾರತದಂತಹ ಪುರಾಣಗಳು ಕಲೆಗಳ ಮೂಲಕ ದೈವತ್ವದಕಲ್ಪನೆಯನ್ನು ಸಾಕಾರಗೊಳಿಸುತ್ತವೆ. ಕಲೆಯ ಮಹತ್ವವನ್ನು ಶಬ್ದಗಳಿಂದ ವಿವರಿಸಲು ಸಾಧ್ಯವಿಲ್ಲ. ಆಸ್ವಾದಿಸಿ ಆನಂದಿಸಬಹುದು.ಆಂಗ್ಲ ಮಾಧ್ಯಮ ಶಿಕ್ಷಣದ ಪ್ರಭಾವದಿಂದ ಹಾಗೂ ಪಾಶ್ಚಾತ್ಯ ಸಂಸ್ಕೃತಿಯಅಂಧಾನುಕರಣೆಯಿಂದಕನ್ನಡಇಂದುಅನ್ನದ ಭಾಷೆಯಾಗಿ, ಜ್ಞಾನದ ಭಾಷೆಯಾಗಿ ಉಳಿದಿಲ್ಲ. ಕಡಲತೀರದ ಭಾರ್ಗವ ಶಿವರಾಮ ಕಾರಂತರು, ಬೇಂದ್ರೆ, ಮಾಸ್ತಿ, ಕುವೆಂಪು, ಗಿರೀಶ್‌ಕಾರ್ನಾಡು ಮೊದಲಾದ ಸಾಹಿತ್ಯ ದಿಗ್ಗಜರು ಇಂದಿನ ಮಕ್ಕಳಿಗೆ ಅಪರಿಚಿತರಾಗಿರುವುದು ದುರಂತವಾಗಿದೆ. ಮಕ್ಕಳು ಕಲೆಗಳಲ್ಲಿ ಆಸಕ್ತಿ, ಅಭಿರುಚಿ ಹೊಂದುವುದರಿಂದ ಮೊಬೈಲ್ ಫೋನ್ ಗೀಳಿನಿಂದ ದೂರವಾಗಬಹುದು ಎಂದುಅವರು ಸಲಹೆ ನೀಡಿದರು.
ಶಾಸಕ ಹರೀಶ್ ಪೂಂಜ ಶುಭಾಶಂಸನೆ ಮಾಡಿ, ನೂತನ ರಂಗಮಂದಿರ ರಾಜ್ಯದಲ್ಲೇ ಶ್ರೇಷ್ಠ ವಿನ್ಯಾಸದಿಂದ ರೂಪುಗೊಂಡಿದೆ. ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗಕ್ಕೆ ಧರ್ಮಸ್ಥಳದ ಕೊಡುಗೆಯನ್ನು ಅವರು ಕೃತಜ್ಞತೆಯಿಂದ ಸ್ಮರಿಸಿ ಅಭಿನಂದಿಸಿದರು.
ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ತಾನು ಬಾಲ್ಯದಲ್ಲಿಅಜ್ಜಿ ಕಮಲಮ್ಮನವರ ಪ್ರೇರಣೆಯಿಂದ ಕೃಷ್ಣ ಹಾಗೂ ಪ್ರಹ್ಲಾದನ ಪಾತ್ರವನ್ನು ನಾಟಕದಲ್ಲಿ ಅಭಿನಯಿಸಿರುವುದನ್ನು ಸ್ಮರಿಸಿದರು.
ಹೇಮಾವತಿ ಹೆಗ್ಗಡೆಯವರಕಲ್ಪನೆ ಹಾಗೂ ಪ್ರೇರಣೆಯಂತೆ ನೂತನರಂಗಮಂದಿರ ನಿರ್ಮಿಸಲಾಗಿದೆ. ಶಾಲಾ – ಕಾಲೇಜುಗಳ ವಿದ್ಯಾರ್ಥಿಗಳು ಬಯಲು ರಂಗಮಂದಿರದ ಸದುಪಯೋಗ ಪಡೆದು ತಮ್ಮಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದುಅವರು ಹೇಳಿದರು.
ಎಸ್.ಡಿ.ಎಮ್.ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಜೊತೆಗೆ ಕ್ರೀಡೆಗಳು, ಸಾಂಸ್ಕೃತಿಕ ಚಟುವಟಿಕೆಗಳು, ಜೀವನ ಮೌಲ್ಯಗಳು, ಯೋಗ ಮತ್ತು ನೈತಿಕ ಶಿಕ್ಷಣದ ಮೂಲಕ ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರನ್ನು ರೂಪಿಸಲಾಗುತ್ತದೆ ಎಂದು ಅವರು ಹೇಳಿದರು.
ಎಸ್.ಡಿ.ಎಮ್.ಶಿಕ್ಷಣ ಸಂಸ್ಥೆಗಳಉಪಾಧ್ಯಕ್ಷ ಪ್ರೊ.ಎಸ್. ಪ್ರಭಾಕರ್ ಮತ್ತು ಕಾರ್ಯದರ್ಶಿ ಡಿ. ಹರ್ಷೇಂದ್ರಕುಮಾರ್ ಹಾಗೂ ಉಜಿರೆಗ್ರಾಮ ಪಂಚಾಯಿತಿಅಧ್ಯಕ್ಷ ಕೆ.ಶ್ರೀಧರ ಪೂಜಾರಿ ಉಪಸ್ಥಿತರಿದ್ದರು.
ಎಸ್.ಡಿ.ಎಮ್.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಡಾ. ಬಿ. ಯಶೋವರ್ಮ ಸ್ವಾಗತಿಸಿದರು.
ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ. ಬಿ. ಸೋಮಶೇಖರ ಶೆಟ್ಟಿಧನ್ಯವಾದ ವಿತ್ತರು. ಡಾ.ಬಿ.ಎ. ಕುಮಾರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.
Click this button or press Ctrl+G to toggle between Kannada and English