ಮೈಸೂರಿನಲ್ಲಿ ನಕಲಿ ಗೈಡ್‌ ಗಳ ಹಾವಳಿ

9:43 PM, Wednesday, December 11th, 2019
Share
1 Star2 Stars3 Stars4 Stars5 Stars
(No Ratings Yet)
Loading...

mysore-palaceಮೈಸೂರು ; ನಗರದಲ್ಲಿ ಇದೀಗ ನಕಲಿ ಪ್ರವಾಸೀ ಮಾರ್ಗದರ್ಶಿಗಳ ಹಾವಳಿ ಹೆಚ್ಚಾಗಿದೆ. ಪ್ರತಿನಿತ್ಯವೂ ಮೈಸೂರಿಗೆ ಸಹಸ್ರಾರು ಜನ ಪ್ರವಾಸಿಗರು ಹೊರ ರಾಜ್ಯಗಳಿಂದ ಆಗಮಿಸುತ್ತಾರೆ. ಇಲ್ಲಿ ಬರುವ ಪ್ರವಾಸಿಗರು ಮೊದಲೇ ಇಂಟರ್‌ ನೆಟ್‌ ನಲ್ಲಿ ನೋಡಬೇಕಾದ ಸ್ಥಳಗಳ ಮಾಹಿತಿಯನ್ನೂ ಪಡೆದೇ ಬಂದಿರುತ್ತಾರೆ.

ಆದರೆ ಪ್ರವಾಸಿಗರು ನೋಡಬಯಸುವ ಸ್ಥಳಗಳಿಗೆ ಭೇಟಿ ನೀಡುವುದಕ್ಕೂ ಮುನ್ನವೇ ಅವರನ್ನು ರೈಲ್ವೇ ನಿಲ್ದಾಣ, ಬಸ್‌ ನಿಲ್ದಾಣ , ಅಥವಾ ಖಾಸಗೀ ವಾಹನ ಟೆಂಪೋ , ಪಾರ್ಕ್‌ ಮಾಡಿರುವ ಸ್ಥಳಗಳಿಗೆ ತೆರಳುವ ಈ ನಕಲಿ ಪ್ರವಾಸೀ ಗೈಡ್‌ ಗಳು ಅವರನ್ನು ಬೇರೊಂದು ಶಾಪಿಂಗ್‌ ಕಾಂಪ್ಲೆಕ್ಸ್‌ ಗೆ ಹೋಗಲು ಪ್ರೇರೇಪಿಸುತಿದ್ದಾರೆ.

ನಗರದ ಪ್ರಮುಖ ಆಕರ್ಷಣೆ ಅರಮನೆ ಆಗಿದ್ದು ಇಲ್ಲಿಗೆ ತರಳುವ ಪ್ರವಾಸಿಗರ ವಾಹನವನ್ನು ತಮ್ಮ ಸ್ಕೂಟರ್‌ , ಆಟೋರಿಕ್ಷಾಗಳಲ್ಲಿ ಅಡ್ಡಗಟ್ಟುವ ನಕಲೀ ಪ್ರವಾಸೀ ಗೈಡ್‌ ಗಳು ಮೊದಲು ತಾವು ಗೈಡ್‌ ಗಳೆಂದು ಪರಿಚಯಿಸಿಕೊಳ್ಳುತ್ತಾರೆ. ನಂತರ ಯಾವ ಕಡೆ ಹೊರಟಿದ್ದೀರ ಎಂದು ಕೇಳುತ್ತಾರೆ. ಅವರು ಮೈಸೂರು ಅರಮನೆ ಎಂದರೆ ಇವತ್ತು ರಾಜ ಕುಟುಂಬದವರ ವಿವಾಹ ವಾರ್ಷಿಕೋತ್ಸವ ಪ್ರಯುಕ್ತ ಅರಮನೆಯ ರಾತ್ರಿವರೆಗೂ ಮುಚ್ಚಲಾಗಿದೆ , ಸಾರ್ವಜನಿಕರಿಗೆ ಪ್ರವೇಶ ಇಲ್ಲ , ನೀವು ನಾಳೆ ನೋಡಬಹುದು ಇಂದು ಇಂತಹ ಕಾಂಪ್ಲೆಕ್ಸ್‌ ನಲ್ಲಿ ಶಾಪಿಂಗ್‌ ಮಾಡಿಕೊಂಡು ಬನ್ನಿ , ಎಂದು ಬೆಣ್ಣೆ ಮಾತುಗಳಿಂದ ಮರುಳು ಮಾಡುತಿದ್ದಾರೆ. ಪ್ರವಾಸಿಗರೂ ಕೂಡ ಹೆಚ್ಚಿನ ಮಾಹಿತಿ ಇಲ್ಲದಿರುವುದರಿಂದ ಮತ್ತು ಗೈಡ್‌ ಗಳು ಮೊದಲೇ ಒನ್‌ ವೇ ಇದೆ ಪುನಃ ಸುತ್ತಿಕೊಂಡು ಬರಬೇಕು ಎಂದು ಹೆದರಿಸುವುದರಿಂದ ಈ ನಕಲಿ ಗೈಡ್‌ ಗಳು ಹೇಳಿದಂತೆ ಕೇಳುತಿದ್ದಾರೆ.

ಈ ನಕಲಿ ಗೈಡ್‌ ಗಳು ವಾಸ್ತವವಾಗಿ ಗೈಡ್‌ ಗಳೇ ಅಲ್ಲ. ಇವರು ಹೋಟೆಲ್‌ ಮಾಲೀಕರು , ಬಟ್ಟೆ ಅಂಗಡಿಗಳು ಮತ್ತು ಶಾಪಿಂಗ್‌ ಕಾಂಪ್ಲೆಕ್ಸ್‌ ಮಾಲೀಕರ ದಲ್ಲಾಳಿಗಳಾಗಿರುತ್ತಾರೆ. ಪ್ರವಾಸಿಗರನ್ನು ದಾರಿ ತಪ್ಪಿಸಿ ಇಲ್ಲಿಗೆ ಕರೆತಂದರೆ ಇವರಿಗೆ ಕೈ ತುಂಬಾ ಕಮೀಷನ್‌ ಸಿಗುತ್ತಿದೆ.

ಕಳೆದ ವಾರ ಇಬ್ಬರು ಪ್ರವಾಸಿಗರಿಗೆ ಈ ರೀತಿಯ ಅನುಭವವಾಗಿದ್ದು ಆಂಧ್ರ ಪ್ರದೇಶದ ಸಬ್‌ ಇನ್ಸ್‌ಪೆಕ್ಟರ್‌ ಒಬ್ಬರನ್ನೇ ಅರಮನೆಗೆ ಇಂದು ಪ್ರವೇಶವಿಲ್ಲ ವಿವಾಹವಿದೆ ಎಂದು ಯಾಮಾರಿಸಿ ಬೇರೆ ಶಾಪಿಂಗ್‌ ಕಾಂಪ್ಲೆಕ್ಸ್‌ ಗೆ ಕರೆದೊಯ್ದಿದ್ದಾರೆ.

ನಕಲಿ ಪ್ರವಾಸೀ ಗೈಡ್‌ ಗಳ ವಿರುದ್ದ ಅರಮನೆಯ ಅಧಿಕಾರಿಗಳು ಈಗಾಗಲೇ ಪೋಲೀಸ್‌ ಅಯುಕ್ತರಿಗೆ ದೂರು ನೀಡಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜನಾ ರ್ಧನ್‌ ಅವರನ್ನು ಮಾತಾಡಿಸಿದಾಗ ಜಿಲ್ಲೆಯಲ್ಲಿ ಒಟ್ಟು 55 ಮಂದಿಗೆ ಪ್ರವಾಸೀ ಗೈಡ್‌ ಲೈಸೆನ್ಸ್‌ ನೀಡಲಾಗಿದೆ. ಇವರೆಲ್ಲರೂ ಬಿಳಿ ಸಮವಸ್ತ್ರ ಧರಿಸಿರುತ್ತಾರೆ ಮತ್ತು ಗುರುತು ಚೀಟಿ ಹೊಂದಿರುತ್ತಾರೆ. ಈ ಗೈಡ್‌ ಗಳು ಪ್ರವಾಸೀ ಕೇಂದ್ರಗಳ ಆವರಣದಲ್ಲಿ ಇರುತ್ತಾರೆಯೇ ಹೊರತು ರಸ್ತೆಗಳಲ್ಲಿ , ರೈಲು , ಬಸ್‌ ನಿಲ್ದಾಣಗಳಲ್ಲಿ ಇರುವುದಿಲ್ಲ. ಪ್ರವಾಸಿಗರು ಇಂತಹವರ ವಿರುದ್ದ ಪೋಲೀಸರಲ್ಲಿ ದೂರು ದಾಖಲಿಸುವಂತೆ ಕೋರಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English