ಆಳ್ವಾಸ್ ಚಿಣ್ಣರಲ್ಲಿ ವಾರ್ಷಿಕೋತ್ಸವದ ಸಂಭ್ರಮ

11:37 AM, Saturday, December 14th, 2019
Share
1 Star2 Stars3 Stars4 Stars5 Stars
(No Ratings Yet)
Loading...

alvas

ಮೂಡಬಿದಿರೆ : ಮಕ್ಕಳ ವಿದ್ಯಾಭ್ಯಾಸದ ತಳಹದಿ ಭದ್ರವಾಗಿದ್ದರೆ ಮಾತ್ರ ಅವರ ಉನ್ನತ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಆಳ್ವಾಸ್ ವಿದ್ಯಾಸಂಸ್ಥೆಯ ಮ್ಯಾನೇಜ್‌ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಅಭಿಪ್ರಾಯಪಟ್ಟರು.

ಆಳ್ವಾಸ್ ಕಿಂಡರ್‌ಗಾರ್ಡನ್, ಇಂಗ್ಲಿಷ್ ಮಾಧ್ಯಮದ ಪ್ರಾಥಮಿಕ ಮತ್ತು ಕೇಂದ್ರ ಶಾಲೆಯ ವಾರ್ಷಿಕೋತ್ಸವವನ್ನು ಆಳ್ವಾಸ್ ಕಾಲೇಜಿನ ವಿ.ಎಸ್. ಆಚಾರ್ಯ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಒಬ್ಬ ವ್ಯಕ್ತಿ ಉತ್ತಮವಾಗಿ ಬೆಳೆಯಬೇಕೆಂದರೆ ಆತನಿಗೆ ಒಳ್ಳೆಯ ಪ್ರಾರಂಭ ಸಿಗಬೇಕು ಆಗ ಮಾತ್ರ ಆತ ಉನ್ನತ ಸ್ಥಾನಕ್ಕೆ ಏರಲು ಸಾಧ್ಯ. ಪ್ರಾಥಮಿಕ ವಿದ್ಯಾಭ್ಯಾಸಲ್ಲಿರುವ ಮಕ್ಕಳು ಸೂಕ್ಷ್ಮ ಮನಸ್ಸಿನವರಾಗಿರುತ್ತಾರೆ. ಪಾಲಕರು ಎಂದಿಗೂ ಮಗುವನ್ನು ಬೇರೆ ಮಗುವಿಗೆ ಹೋಲಿಸಬಾರದು, ಪ್ರತಿಯೊಂದು ಮಗು ತನ್ನದೇ ಆದ ಕೌಶಲ್ಯವನ್ನು ಹೊಂದಿರುತ್ತದೆ ಮಾತ್ರವಲ್ಲದೇ ಮಕ್ಕಳಿಗೆ ಸುಂದರವಾದ ಜಗತ್ತನ್ನು ರೂಪಿಸಲು ಅವಕಾಶ ಕೊಡಿ ಎಂದು ಪಾಲಕರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಪ್ರಾಥಮಿಕ ಶಾಲೆ ಆಡಳಿತ ಅಧಿಕಾರಿ ಪ್ರಕಾಶ್ ಶೆಟ್ಟಿ ಮಾತನಾಡಿ ಪಾಲಕರು ಮಕ್ಕಳಿಗೆ ಆದರ್ಶ ವ್ಯಕ್ತಿಯಾಗಿರಬೇಕು ಎಂದರು.

alwas

ಕಾರ‍್ಯಕ್ರಮದಲ್ಲಿ ಗ್ರೀಶ್ಮ ಆಳ್ವಾ, ಆಳ್ವಾಸ್ ಕಿಂಡರ್‌ಗಾರ್ಡನ್‌ನ ಮುಖ್ಯಶಿಕ್ಷಕಿ ವೀಣಾ ನಾಯಕ್, ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಕಮಲಾ ಆನಂದ್, ಸಿಬಿಎಸ್‌ಸಿ ಶಾಲೆಯ ಮುಖ್ಯಶಿಕ್ಷಕ ಮೊಹಮದ್ ಶಫಿ ಶೇಕ್ ಮತ್ತು ಆಡಳಿತ ಅಧಿಕಾರಿ ಚೈತ್ರ ರೈ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಧ್ಯಾಪಕಿ ಜಾನೆಡ್ ಪೈಸ್ ನಿರೂಪಿಸಿ, ಶೋಭಾ ಮೊಂಟೈರೊ ವಂದಿಸಿದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳ ಪಾಲಕರು ವಿದ್ಯಾಸಂಸ್ಥೆಯ ಪಾಲುದಾರರಾಗಿದ್ದು ಶಿಕ್ಷಕರು ಮಾತ್ರವಲ್ಲದೇ ಪಾಲಕರು ಕೂಡ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ತರವಾದ ಪಾತ್ರ ವಹಿಸುತ್ತಾರೆ. ಮಕ್ಕಳ ಬೆಳವಣಿಗೆಗೆ ಉತ್ತಮವಾದ ಪರಿಸರ ಕಲ್ಪಿಸಿಕೊಡಬೇಕಾದದ್ದು ಪಾಲಕರ ಆದ್ಯ ಕರ್ತವ್ಯ ಎಂದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English