ಪೌರತ್ವ ತಿದ್ದುಪಡಿ ವಿರೋಧಿ ಹೋರಾಟ : ಪೊಲೀಸರ ಗುಂಡಿಗೆ ಬಲಿಯಾದ 17 ವರ್ಷದ ಬಾಲಕ

12:56 PM, Saturday, December 14th, 2019
Share
1 Star2 Stars3 Stars4 Stars5 Stars
(No Ratings Yet)
Loading...

assam

ಗುವಾಹಟಿ : ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಈಶಾನ್ಯ ಭಾರತದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಗುರುವಾರ ನಡೆದ ಗೋಲಿಬಾರ್ನಲ್ಲಿ 17 ವರ್ಷದ ಯುವಕ ಮೃತಪಟ್ಟಿದ್ದ. ಈತನ ಸಾವು ಇಡೀ ಅಸ್ಸಾಂ ಜನ ಸಮೂಹದ ಭಾವನೆಯನ್ನು ಕೆರಳಿಸಿದ್ದು ಶುಕ್ರವಾರ ಈತನ ಅಂತ್ಯಕ್ರಿಯೆಯಲ್ಲಿ ಬಹುತೇಕ ಹೋರಾಟಗಾರರು ಪಾಲ್ಗೊಂಡಿದ್ದು “ಹುತಾತ್ಮ” ಎಂದು ಘೋಷಣೆ ಕೂಗಿ ಪ್ರಶಂಸಿಸಿದ್ದಾರೆ.

ಕೇಂದ್ರ ಸರ್ಕಾರದ ನೂತನ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಅಸ್ಸಾಂ ರಾಜ್ಯದ ಪ್ರಸಿದ್ಧ ಗಾಯಕ ಜುಬೀನ್ ಗರ್ಗ್ ಇಲ್ಲಿನ ಲತಾಸಿಲ್ ಆಟದ ಮೈದಾನದಲ್ಲಿ ಪ್ರತಿಭಟನೆಗೆ ಮುಂದಾಗಿದ್ದರು. ಇದರಲ್ಲಿ ಭಾಗವಹಿಸುವ ಸಲುವಾಗಿ ಯುವಕ ಪಕ್ಕದ ಹ್ಯಾಟಿಗಾಂವ್ನಲ್ಲಿರುವ ತನ್ನ ಮನೆಯಿಂದ ತೆರಳಿದ್ದ. ಆದರೆ, ಮನೆಗೆ ಹಿಂದಿರುಗುವಾಗ ಪೊಲೀಸರ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ.

ಕತ್ತಲೆಯಾದ ನಂತರ ನಾಮ್ಗರ್ ಬಳಿ ಕೆಲವು ವ್ಯಕ್ತಿಗಳು ನಾಲ್ಕುಚಕ್ರ ವಾಹನದಲ್ಲಿ ಆಗಮಿಸಿ ಜನರ ಗುಂಪಿನ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಆತ ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಕೊನೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಂಜೆಯೇ ಆತ ಮೃತಪಟ್ಟಿದ್ದಾನೆ ಎಂಬುದು ಕುಟುಂಬಸ್ಥರ ಆರೋಪ.

ಕುಟುಂಬಸ್ಥರ ಆರೋಪದ ಬಗ್ಗೆ ಪರಿಶೀಲಿಸಲಾಗಿದ್ದು, ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಮೃತ ತಂದೆ 45 ವರ್ಷದ ಬಿಜು ಸ್ಟಾಫರ್ಡ್, “ನನ್ನ ಮಗ ಪ್ರತಿಭಾವಂತ ಡ್ರಮ್ಮರ್. ಅಲ್ಲದೆ, ಜುಬೀನ್ ಅವರ ದೊಡ್ಡ ಅಭಿಮಾನಿ. ಇದೇ ಕಾರಣಕ್ಕೆ ಆತನ ಮಾತು ಕೇಳಲು ಲತಾಸಿಲ್ ಆಟದ ಮೈದಾನಕ್ಕೆ ತೆರಳಿದ್ದ. ಆದರೆ, ಮನೆಗೆ ಹಿಂದಿರುಗುತ್ತಿದ್ದ ವೇಳೆ ಪೌರತ್ವ ತಿದ್ದುಪಡಿ ಮಸೂದೆ ಹೋರಾಟಗಾರರ ಪಕ್ಕದಲ್ಲಿ ನಡೆದುಕೊಂಡು ಹೋಗಿದ್ದ. ಈ ವೇಳೆ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆದಿದ್ದು ಗುಂಡು ನನ್ನ ಮಗನ ಮೇಲೂ ಬಡಿದಿದೆ” ಎಂದು ಅವರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ 17 ವರ್ಷದ ಬಾಲಕನನ್ನು ಬಲಿ ಪಡೆದಿರುವ ವಿಚಾರ ಇದೀಗ ಇಡೀ ಅಸ್ಸಾಂ ಅನ್ನು ಮತ್ತಷ್ಟು ಉದ್ವಿಗ್ನತೆಗೆ ದೂಡಿದೆ. ಅಲ್ಲದೆ, ಯುವಕನ ಸಾವು ಹೋರಾಟಗಾರರ ಭಾವನೆಗಳನ್ನು ಕೆರಳಿಸಿದೆ ಎನ್ನಲಾಗುತ್ತಿದೆ. ಶುಕ್ರವಾರ ಸಂಜೆ ನಡೆದ ಅಂತ್ಯಕ್ರಿಯೆಯಲ್ಲಿ ಅಸ್ಸಾಂ ತ್ರಿಪುರದ ಸಾವಿರಾರು ಜನ ಭಾಗವಹಿಸಿ ಕುಟುಂಬಸ್ಥರಿಗೆ ಸಾಂತ್ವ ನೀಡಿದರು. ಅಲ್ಲದೆ, ಮೃತ ಯುವಕನನ್ನು ಅಸ್ಸಾಂ ಹೋರಾಟದ ಹುತಾತ್ಮ ಎಂದು ಘೋಷಿಸಲಾಗಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English