ಮಂಗಳೂರು : ಎಂಟು ಕೆರೆಗಳ ಅಭಿವೃದ್ಧಿಗೆ 3.65 ಕೋಟಿ ರೂ. ಬಿಡುಗಡೆ; ಶಾಸಕ ಕಾಮತ್

2:02 PM, Saturday, December 14th, 2019
Share
1 Star2 Stars3 Stars4 Stars5 Stars
(No Ratings Yet)
Loading...

kamath

ಮಂಗಳೂರು : ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಎಂಟು ಕೆರೆಗಳ ಅಭಿವೃದ್ಧಿಗೆ 3.65 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಇಲಾಖೆಯ ಅನುದಾನದಡಿ ಈ ಹಣ ಬಿಡುಗಡೆಯಾಗಿದೆ. ಕೆರೆಗಳ ಅಭಿವೃದ್ಧಿ ಸದ್ಯದ ಅವಶ್ಯಕತೆಯಾಗಿದೆ‌. ಈ ನಿಟ್ಟಿನಲ್ಲಿ ಸದ್ಯ 8 ಕೆರೆಗಳ ಅಭಿವೃದ್ಧಿ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದರು.

kamath

ಕದ್ರಿ ಕೈ ಬಟ್ಟಲು ಕೆರೆ ಅಭಿವೃದ್ಧಿಗೆ 90 ಲಕ್ಷ ರೂ., ಜೋಗಿಮಠ ಕೆರೆ ಅಭಿವೃದ್ಧಿಗೆ 80 ಲಕ್ಷ ರೂ., ಕುಲಶೇಖರ ಕೆರೆ ಅಭಿವೃದ್ಧಿಗೆ 70 ಲಕ್ಷ ರೂ., ಜೆಪ್ಪಿನಮೊಗರು ಕರ್ಬಿಸ್ಥಾನ ಕೆರೆ ಅಭಿವೃದ್ಧಿಗೆ 25 ಲಕ್ಷ ರೂ., ಜಲ್ಲಿಗುಡ್ಡೆ ಕೆರೆ ಅಭಿವೃದ್ಧಿಗೆ 65 ಲಕ್ಷ ರೂ., ಕುದ್ರೋಳಿ ಜುಮ್ಮಾ ಮಸೀದಿ ವಠಾರದ ಕೆರೆ ಅಭಿವೃದ್ಧಿಗೆ 25 ಲಕ್ಷ ರೂ., ಬಜಾಲು ಕುಂದೋಡಿಯ ಕೆರೆ ಅಭಿವೃದ್ಧಿಗೆ 10 ಲಕ್ಷ., ಬೈರಾಡಿ ಕೆರೆಯಲ್ಲಿ 1.20 ಕೋಟಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಹೆಚ್ಚುವರಿಯಾಗಿ 70 ಲಕ್ಷ ರೂ,. ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English