ಮೈಸೂರು : ಮೈಸೂರಿನ ಬಿಷಪ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಸಂತ್ರಸ್ತೆ ಇದೀಗ ಏಕಾಏಕಿ ಯು ಟರ್ನ್ ಆಗಿದ್ದಾರೆ.
ನನ್ನ ಮೇಲೆ ನಿರಂತರವಾಗಿ ಕಿರುಕುಳವಾಗಿದೆ. ಜೀವ ಬೇದರಿಕೆ ಇದೆ ಎಂದು ಮೈಸೂರಿನ ಬಿಷಪ್ ವಿಲಿಯಂ ವಿರುದ್ಧ ಸಂತ್ರಸ್ತೆ ಆರೋಪಿಸಿ ಕಣ್ಣೀರು ಹಾಕಿದ್ದರು. ಈ ಬಗ್ಗೆ ಸೆಲ್ಫಿ ವಿಡಿಯೋ ದಾಖಲು ಮಾಡಿದ್ದ ಸಂತ್ರಸ್ತೆ ಸ್ವತಃ ತನ್ನದೇ ಹಸ್ತಾಕ್ಷರದಲ್ಲಿ ದೂರು ನೀಡಿದ್ದರು.
ಆದರೇ ಈಗ ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಉಲ್ಟಾ ಹೊಡೆದಿದ್ದಾರೆ. ನನಗೆ ಬಿಷಪ್ ಕಡೆಯಿಂದ ತೊಂದರೆ ಆಗಿಲ್ಲ. ಯಾರೋ ಬಲವಂತವಾಗಿ ವಿಡಿಯೋ ಮಾಡಿಸಿಕೊಂಡು, ದೂರು ಬರೆಸಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಸಂತ್ರಸ್ತೆ ಉಲ್ಟಾ ಹೊಡೆದಿದ್ದಾರೆ.
ಇಂದು ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸಂತ್ರಸ್ತೆ, ನನಗೆ ಬಿಷಪ್ ಕಡೆಯಿಂದ ಕಿರುಕುಳ ಆಗಿಲ್ಲ. ಯಾರೋ ಬಲವಂತವಾಗಿ ವಿಡಿಯೋ ಮಾಡಿಸಿಕೊಂಡು, ದೂರು ಬರೆಸಿಕೊಂಡಿದ್ದಾರೆ. ನನ್ನ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಂದು ಹೇಳಿಕೆ ನೀಡಿದ್ದಾರೆ. ಆದರೆ ಬಲವಂತವಾಗಿ ವಿಡಿಯೋ ಮಾಡಿಸಿಕೊಂಡವರ ಹೆಸರನ್ನು ಸಂತ್ರಸ್ತೆ ಹೇಳಿಲ್ಲ. ಹೀಗಾಗಿ ಸಂತ್ರಸ್ತೆಯ ನಡೆಯಿಂದ ಅನುಮಾನ ಉಂಟಾಗಿದ್ದು ಇದೀಗ ಸಂತ್ರಸ್ತೆ ಸ್ಪಷ್ಟನೆ ನೀಡಲು ಬಂದು ಪೇಚಿಗೆ ಸಿಲುಕಿದ್ದಾರೆ.
Click this button or press Ctrl+G to toggle between Kannada and English