ಫತೇಬಾದ್ (ಹರಿಯಾಣ) : ಫತೇಬಾದ್‌ನ ರಟ್ಟನ್‌ಗರ್ ಗ್ರಾಮದ ರಸ್ತೆಬದಿಯಲ್ಲಿರುವ ಅಂಗಡಿಗಳ ಸಾಲುಗಳ ಅಂಗಡಿಯೊಂದರಲ್ಲಿ 74 ವರ್ಷದ ದಿವ್ಯಾರಾಮ್ ನೆಲದ ಮೇಲೆ ಕುಳಿತು ಕಡಲೆಕಾಯಿ ಮಾರುತ್ತಿದ್ದಾರೆ. ಅದರಲ್ಲೇನು ವಿಶೇಷ ಎಂದಿರಾ ? ದಿವ್ಯಾರಾಮ್ ಅವರು ಪಾಕಿಸ್ಥಾನದ ಒರ್ವ ಮಾಜಿ ಸಂಸದರಾಗಿದ್ದರು ಎಂದರೆ ನಂಬಲೇಬೇಕು !.
ಅದು 1994 ನೇ ಇಸವಿ . ಪಾಕಿಸ್ಥಾನದ ಪ್ರಧಾನ ಮಂತ್ರಿಯಾಗಿ ಆಯ್ಕೆ ಆಗಿದ್ದ ಬೆನಜೀರ್ ಭುಟ್ಟೋ ಅವರ ಸರ್ಕಾರ ಅಲ್ಪ ಸಂಖ್ಯಾತ ಕೋಟಾದಡಿಯಲ್ಲಿ ಪಂಜಾಬ್ ಪ್ರಾಂತ್ಯದ ಲೋಹಿಯಾ ಜಿಲ್ಲೆಯಲ್ಲಿ ರೈತರಾಗಿದ್ದ ದಿವ್ಯಾರಾಮ್ ಅವರನ್ನು ಸಂಸದರನಾಗಿ ನೇಮಿಸಿತು. ಆದರೆ ಈ ನೇಮಕದಿಂದಾಗಿ ಕುಟುಂಬದ ಕಷ್ಟಗಳೇನೂ ದೂರವಾಗಲಿಲ್ಲ ಅಷ್ಟೇ ಅಲ್ಲ ಗೌರವ ಸ್ಥಾನ ಮಾನಗಳೂ ಹೆಚ್ಚಾಗಲಿಲ್ಲ ,ಬದಲಿಗೆ ಇಡೀ ಕುಟುಂಬವೇ ಪ್ರತಿನಿತ್ಯವೂ ಭಯದಲ್ಲೇ ಬದುಕು ಸವೆಸುವಂತಾಯಿತು.
ಪಾಕಿಸ್ಥಾನದ ಬಹುಸಂಖ್ಯಾತ ಮುಸ್ಲಿಮರಿದ್ದ ಹಳ್ಳಿಯು ಎಂದಿಗೂ ಮುಸ್ಲಿಮೇತರನೊಬ್ಬ ಉನ್ನತ ಸ್ಥಾನಕ್ಕೇರುವುದನ್ನು ಒಪ್ಪಲು ಸಾದ್ಯವೇ ಇರಲಿಲ್ಲ . ಸಂಸದರಾದ ದಿನದಿಂದಲೇ ಅವರಿಗೆ ಸಂಕಷ್ಟ ,ಕಿರುಕುಳಗಳೂ ಪ್ರಾರಂಭವಾದವು. ಮೊದಲ ದಿನದಿಂದಲೇ ದಿವ್ಯಾರಾಮ್ ಅವರನ್ನು ಸಂಸದ ಸ್ಥಾನಕ್ಕೆ ರಾಜಿನಾಮೆ ಕೊಡುವಂತೆ ಅಲ್ಲಿನ ರಾಜಕೀಯ ಆರ್ಥಿಕ ಪ್ರಭಾವೀ ಮುಸ್ಲಿಮರ ಗುಂಪು ಒತ್ತಾಯಿಸತೊಡಗಿತು. ಇದೇ ಕಅರಣಕ್ಕಾಗಿ ಅವರು ಸಂಸದರಾದ 15 ನೇ ದಿನದಲ್ಲಿ ದುಷ್ಕರ್ಮಿಗಳು ದಿವ್ಯಾರಾಮ್ ಅವರ ಸೋದರ ಸೊಸೆಯನ್ನೇ ಅಪಹರಿಸಿದರು. ದಿವ್ಯಾರಾಮ್ ಅವರು ನ್ಯಾಯಾಲಯಗಳ ಮೊರೆ ಹೋದರು, ಸರ್ಕಾರದ ಮೊರೆ ಹೋದರು ಆದರೆ ಯಾವುದೇ ವ್ಯವಸ್ಥೆ ಅವರಿಗೆ ರಕ್ಷಣೆ ನೀಡಲೇ ಇಲ್ಲ. ಅವು ತನ್ನ ಜೀವನದ ಅಗ್ನಿ ಪರೀಕ್ಷೆಯ ದಿನಗಳು ಎಂದು ದಿವ್ಯಾರಾಮ್ ಹೇಳುತ್ತಾರೆ. ನಂತರ ಕೇವಲ ಮೂರೇ ತಿಂಗಳು ಅವರು ಮತಾಂಧರಿಂದ ಕಿರುಕುಳಕ್ಕೆ ಒಳಗಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂತು.
“ನಮ್ಮ ಕುಟುಂಬಕ್ಕೆ ಪಾಕಿಸ್ತಾನದಲ್ಲಿ 25 ಎಕರೆ ಭೂಮಿ ಇತ್ತು. ಇದು ಈಗ ಹಳ್ಳಿಯ ಸ್ಥಳೀಯರೊಂದಿಗೆ ಇದೆ, ”ಎಂದು ಅವರು ಹೇಳುತ್ತಾರೆ. ಮತಂಧರಿಂದ ಕಿರುಕುಳ ತಾಳಲಾರದೆ ದಿವ್ಯಾರಾಮ್ ಮತ್ತು ಅವರ 12 ಸದಸ್ಯರ ಕುಟುಂಬವು ಜನವರಿ 2000 ರ ಚಳಿಗಾಲದಲ್ಲಿ ಒಂದು ತಿಂಗಳ ವೀಸಾದಲ್ಲಿ ಭಾರತಕ್ಕೆ ಬಂದಿತು. ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಉಲ್ಲೇಖಿಸಿ ಅವರು ಮತ್ತು ಅವರ ಕುಟುಂಬಕ್ಕೆ ಭಾರತದಲ್ಲಿ ಉಳಿಯಲು ಅವಕಾಶ ನೀಡುವಂತೆ ಅವರು ಸ್ಥಳೀಯ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಜಿಲ್ಲಾಡಳಿತ ಉಳಿಯಲು ಅವಕಾಶ ಮಾಡಿಕೊಟ್ಟಿದ್ದು ಈಗ ಚಿಕ್ಕ ಪುಟ್ಟ ವ್ಯಾಪಾರ ಮಾಡಿಕೊಂಡು ಬದುಕು ನೂಕುತಿದ್ದಾರೆ.
“ ಕೇಂದ್ರ ಸರ್ಕಾರ ಜಅರಿಗೆ ತಂದಿರುವ ಪೌರತ್ವ ಕಾಯ್ದೆಯ ತಿದ್ದುಪಡಿಯಿಂದಾಗಿ ನಾನು ಹಾಗೂ ನಮ್ಮ ಕುಟುಂಬ ಇಂದು ಬಹಳ ಸಂತೋಷವಾಗಿದ್ದೇವೆ, 19 ವರ್ಷಗಳಿಂದ ನಿರಾಶ್ರಿತರಾಗಿದ್ದ ನಾವು ಇಂದು ಭಾರತದ ಪೌರತ್ವ ಪಡೆಯಬಹುದಾಗಿದೆ ಇದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ ಎಂದ ದಿವ್ಯಾರಾಮ್ ಅವರು . ಪಂಜಾಬ್‌ನ ಅಮೃತಸರ ಮತ್ತು ಜಲಂಧರ್‌ನಲ್ಲಿ, ನಮ್ಮಂತೆಯೇ ಕಿರುಕುಳ ತಾಳಲಾರದೆ ಪಾಕಿಸ್ತಾನದಿಂದ ಭಾರತಕ್ಕೆ “ಪಲಾಯನ” ಮಾಡಿದ ಹಲವಾರು ಕುಟುಂಬಗಳಿವೆ. ಸಿಏಬಿ ಅವರಿಗೆ ಆಶೀರ್ವಾದವಾಗಿದೆ ಎಂದು ಹೇಳುತ್ತಾರೆ.
ಕೋವರ್ ಕೊಲ್ಲಿ ಇಂದ್ರೇಶ್
Click this button or press Ctrl+G to toggle between Kannada and English