ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ 14 ವರ್ಷಗಳ ಬಳಿಕ ಬಂಧನ

5:49 PM, Saturday, December 14th, 2019
Share
1 Star2 Stars3 Stars4 Stars5 Stars
(No Ratings Yet)
Loading...

ballary

ಬಳ್ಳಾರಿ : ಕೊಲೆಗೈದು ತಪ್ಪಿಸಿಕೊಂಡಿದ್ದ ಆರೋಪಿಯನ್ನು 14 ವರ್ಷಗಳ ಬಳಿಕ ಬಳ್ಳಾರಿಯ ಮೋಕಾ ಪೊಲೀಸರು ಬಂಧಿಸಿದ್ದಾರೆ.

ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮಾರಪ್ಪ ಎರಕುಲ್ (62) ಬಂಧಿತ ಆರೋಪಿ. ಮಾರಪ್ಪ ಸೇರಿದಂತೆ ಒಟ್ಟು ನಾಲ್ವರು ಸೇರಿ ಕರ್ನೂಲ್ ಜಿಲ್ಲೆಯ ಕಡ್ಮೂರ್ ಗ್ರಾಮದ ದತ್ತಗೌಡ ಎಂಬವರನ್ನು 3005ರಲ್ಲಿ ಕೊಲೆ ಮಾಡಿದ್ದರು. ಕಳೆದ 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮಾರಪ್ಪನನ್ನು ಪೊಲೀಸರು ಈಗ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಏನಿದು ಪ್ರಕರಣ?:
ಹಳೆಯ ದ್ವೇಷದ ಹಿನ್ನೆಲೆಯಲ್ಲಿ ದತ್ತಗೌಡ ಎಂಬವರನ್ನು ಬಳ್ಳಾರಿ ಸಮೀಪದ ಮೋಕಾ ಗ್ರಾಮಕ್ಕೆ ಕರೆದುಕೊಂಡು ಬಂದು ಕೊಲೆ ಮಾಡಿದ್ದರು. ಅಷ್ಟೇ ಅಲ್ಲದೆ ದತ್ತಗೌಡ ಅವರ ಮೃತದೇಹವನ್ನು ಸುಟ್ಟು ಹಾಕಿದ್ದರು. ಈ ಸಂಬಂಧ ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದ ಪೊಲೀಸರು 2011ರಲ್ಲಿ ಪಿಂಜಾರ ದಸ್ತಗಿರಿ ಮತ್ತು ಹರಿಜನ್ ಜಾನ್‍ನನ್ನು ಪೊಲೀಸರು ಬಂಧಿಸಿದ್ದರು. ಆದರೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮಾರಪ್ಪ ಎರಕುಲ್ ಮತ್ತು ನಾಗರಾಜ್ ಎರಕುಲ್ ತಲೆ ಮರೆಸಿಕೊಂಡಿದ್ದರು. ಕಳೆದ ಒಂದು ವಾರದ ಹಿಂದೆ ಕರ್ನೂಲ್‍ನಲ್ಲಿ ಮಾರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನೊಬ್ಬ ಆರೋಪಿ ನಾಗರಾಜ್ 2011ರಲ್ಲಿ ಕೊಲೆಯಾಗಿದ್ದಾನೆ. 14 ವರ್ಷಗಳಿಂದ ಪೊಲೀಸರಿಗೆ ಚಾಲೆಂಜ್ ಆಗಿದ್ದ ಪ್ರಕರಣದ ಎಲ್ಲಾ ಆರೋಪಿಗಳಿಗೆ ಶಿಕ್ಷ ಕೊಡಿಸುವಲ್ಲಿ ಮೋಕಾ ಪಿಎಸ್‍ಐ ಶ್ರೀನಿವಾಸ್ ಮತ್ತು ಸಿಪಿಐ ಭರತ್ ಅವರ ನೇತೃತ್ವದ ತಂಡವು ಯಶಸ್ವಿಯಾಗಿದೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English