ಬೆಳುವಾಯಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗ್ರಾಹಕ ಮಾಹಿತಿಕಾರ‍್ಯಕ್ರಮ

9:58 AM, Monday, December 16th, 2019
Share
1 Star2 Stars3 Stars4 Stars5 Stars
(No Ratings Yet)
Loading...

belvai

ಮೂಡುಬಿದಿರೆ : ಮೂಡುಬಿದಿರೆ ತಾಲ್ಲೂಕಿನ ಬೆಳುವಾಯಿ ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಗ್ರಾಹಕ ಮಾಹಿತಿಕಾರ‍್ಯಕ್ರಮದಶಂಬರ್ 14,2019ರಂದು ನಡೆಯಿತು.ಮೂಡುಬಿದಿರೆಯ ಗ್ರಾಹಕ ಸಂಘಟನೆಯ ಅಧ್ಯಕ್ಷ, ರಾಜ್ಯ ಸಂಪನ್ಮೂಲ ವ್ಯಕ್ತಿ, ದ.ಕ.ಜಿಲ್ಲಾಗ್ರಾಹಕ ಸಂಘಟನೆ ಒಕ್ಕೂಟದಜತೆ ಕಾರ‍್ಯದರ್ಶಿ ರಾಯೀ ರಾಜಕುಮಾರರುತಮ್ಮ 351 ನೇ ಕಾರ‍್ಯಕ್ರಮವನ್ನು ನಡೆಸಿಕೊಟ್ಟರು.ಅವರು ತಮ್ಮ ಮಾಹಿತಿಕಾರ‍್ಯಕ್ರಮದಲ್ಲಿಪ್ರತಿಯೊಂದೂ ವಸ್ತುವಿನ ಗುಣಮಟ್ಟ, ದಾಖಲೆಇತ್ಯಾದಿ ಇಟ್ಟುಕೊಳ್ಳುವ ಅಗತ್ಯವನ್ನು ತಿಳಿಸಿಕೊಟ್ಟರು.ಗ್ರಾಹಕ ಹಕ್ಕು ಹಾಗೂ ಕರ್ತವ್ಯಗಳ ಸಂಪೂರ್ಣ ಮಾಹಿತಿಯನ್ನು ನೀಡಿ ಸಮಗ್ರ ಮಾರ್ಗದರ್ಶನಇತ್ತರು.

ಗ್ರಾಹಕಯಾವ್ಯಾವ ಅಂಶಗಳ ಕುರಿತು ಮಾಹಿತಿ ಹೊಂದಿರಬೇಕೆಂಬುದನ್ನು ಮನವರಿಕೆ ಮಾಡಿಕೊಟ್ಟರು.

belvai

ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕ ಪುರುಷೋತ್ತಮರಾವ್‌ಅಧ್ಯಕ್ಷತೆ ವಹಿಸಿದ್ದರು.ಎಲ್ಲಾಅಧ್ಯಾಪಕರೂ ಹಾಜರಿದ್ದರು.ಶಾಲಾ ಗ್ರಾಹಕಕ್ಲಬ್ ಸಂಯೋಜಕ ಶಿಕ್ಷಕ ರಾಮ್‌ಜಮಗೀಕರ್ ಸ್ವಾಗತಿಸಿದರು.ಶಿಕ್ಷಕ ಸಿ.ಮೊಂತೆರೋ ವಂದಿಸಿದರು. ವಿದ್ಯಾರ್ಥಿಗಳಿಗೆಗ್ರಾಹಕಛಾಯಾ ಪತ್ರಿಕೆಯನ್ನುಉಚಿತವಾಗಿ ವಿತರಿಸಲಾಯಿತು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English