ಬಂಟ್ವಾಳ : ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಹಿಂದೂ ಧರ್ಮಜಾಗೃತಿ ಸಭೆಯು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ, ಸಜಿಪನಡು ಬಂಟ್ವಾಳ ತಾಲೂಕು ಇಲ್ಲಿ ನೆರವೇರಿತು.
ಸಭೆಯ ಪ್ರಾರಂಭವನ್ನು ಶಂಖನಾದ ಮೂಲಕ ಪ್ರಾರಂಭಿಸಲಾಯಿತು. ಸಭೆಯನ್ನು ಶ್ರೀ.ಯಶವಂತ ದೇರಾಜೆ ಇವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಮಾಜವನ್ನು ಸುಸಂಸ್ಕೃತರಾನ್ನಾಗಿ ಮಾಡುವ ಸತ್ವಗುಣಿ ಜನರ ‘ಹಿಂದೂ ರಾಷ್ಟ್ರ’ ದ ಅವಶ್ಯಕತೆ ಇದೆ
– ಶ್ರೀ .ವಿಜಯಕುಮಾರ್, ಹಿಂದೂ ಜನಜಾಗೃತಿ ಸಮಿತಿ
ಶ್ರೀ ವಿಜಯ ಕುಮಾರ್ ಇವರು ಮಾತನಾಡಿ “ಭಾರತ ಸ್ವಯಂಭೂ ಹಿಂದೂ ರಾಷ್ಟ್ರವಾಗಿದೆ.ಹಿಂದೂ ರಾಷ್ಟ್ರ ಎಂದರೆ ಸತ್ವಗುಣಿ ಜನರ ರಾಷ್ಟ್ರವಾಗಿದೆ.
ಇಂದು ಹಲವಾರು ದೇಶಗಳಲ್ಲಿ ಆಯಾ ಧರ್ಮವಿದೆ.ಭಾರತದಲ್ಲಿ ಅನಾದಿಕಾಲದಿಂದಲೂ ಹಿಂದೂ ಧರ್ಮವಿತ್ತು.ಆದರ್ಶ ರಾಜ್ಯ ಎಂದರೆ ರಾಮರಾಜ್ಯ ಮತ್ತು ಆದರ್ಶ ರಾಜನೆಂದರೆ ಪ್ರಭು ಶ್ರೀರಾಮಚಂದ್ರ.ಇಂದು ದೇಶದಲ್ಲಿ ಅಧರ್ಮಾಚರಣೆ ತಾಂಡವವಾಡುತ್ತಿದೆ.ಜನರನ್ನು ಸಾತ್ತ್ವಿಕರನ್ನಾಗಿ ಮಾಡುವ ಸಮಾಜವನ್ನು ಸುಸಂಸ್ಕೃತರನ್ನಾಗಿ ಮಾಡುವ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು.ಇಂದು ಹಿಂದೂಗಳಿಗೆ ಪೂಜನೀಯವಾದ ಗೋ ಮಾತೆಯ ಹತ್ಯೆಯಾಗುತ್ತಿದೆ , ಮಾತ್ರವಲ್ಲದೆ ದೇವಸ್ಥಾನ ಸರಕಾರೀಕರಣದಿಂದ ದೇವಸ್ಥಾನದ ಹಣವು ಇತರ ಪಂಥೀಯರ ಯಾತ್ರೆಗಾಗಿ, ಬಳಸಲಾಗುತ್ತದೆ. ಒಂದು ಕಣ್ಣಿಗೆ ಬೆಣ್ಣೆ ಮತ್ತು ಒಂದು ಕಣ್ಣಿಗೆ ಸುಣ್ಣ ಎಂಬಂತೆ ದೇವಸ್ಥಾನದ ಜೀರ್ಣೋದ್ಧಾರ ಮಾಡಲು ಸರಕಾರಕ್ಕೆ ಹಣವಿಲ್ಲ.ಇಂದು ಶೈಕ್ಷಣಿಕ ಕ್ಷೇತ್ರದಲ್ಲೂ ಭ್ರಷ್ಟಾಚಾರ ನಡೆಯುತ್ತಿರುವುದರಿಂದ ಭಾವೀ ಪೀಳಿಗೆಯ ಮೇಲೆ ಇದು ಪರಿಣಾಮವಾಗುತ್ತಿದೆ.ಯಾವಾಗ ಜಗತ್ತಿನಲ್ಲಿ ಅಧರ್ಮ ತಾಂಡವಾಡುತ್ತದೆಯೋ ಆಗ ಧರ್ಮದ ಸಂಸ್ಥಾಪನೆಗಾಗಿ ಭಗವಂತ ಪುನಃ ಅವತಾರವನ್ನು ತಾಳುತ್ತಾರೆ” ಎಂದು ವಿಚಾರ ಮಂಡಿಸಿದರು.
” ಧರ್ಮಾಚರಣೆಯು ಧರ್ಮದ ಅಡಿಪಾಯವಾಗಿದೆ ”
-ಸೌ.ಲಕ್ಷ್ಮೀ ಪೈ, ಸನಾತನ ಸಂಸ್ಥೆ
ಸೌ.ಲಕ್ಷ್ಮೀ ಪೈ ಇವರು ಮಾತನಾಡುತ್ತಾ ” ಧರ್ಮದ ಅಡಿಪಾಯವು ಧರ್ಮಾಚರಣೆಯಲ್ಲಿದೆ.ದೇವಸ್ಥಾನವು ಹಿಂದೂಗಳಿಗೆ ಚೈತನ್ಯವನ್ನು ನೀಡುವ ಕೇಂದ್ರವಾಗಿದೆ. ದೇವಸ್ಥಾನದಲ್ಲಿ ಇಂದು ಸರಕಾರ ಆಡಳಿತ ನಡೆಸುತ್ತಿದೆ ಇದರಲ್ಲಿ ಭ್ರಷ್ಟಾಚಾರ ಆಗುತ್ತಿದೆ.ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡುವಲ್ಲಿ ಭಕ್ತರು ತಮ್ಮ ಕರ್ತವ್ಯವನ್ನು ಪಾಲಿಸಬೇಕು.ದೇವಸ್ಥಾನದ ಆಡಳಿತವನ್ನು ಸರಕಾರ ಭಕ್ತರಿಗೆ ಒಪ್ಪಿಸಬೇಕು.ಈ ಮೂಲಕ ಭಕ್ತರು ದೇವಸ್ಥಾನಕ್ಕೆ ಹಾಕುವ ಅರ್ಪಣೆಯೂ ಧರ್ಮದ ಕಾರ್ಯಕ್ಕೆ, ದೇವಸ್ಥಾನದ ಉದ್ಧಾರಕ್ಕಾಗಿ ಬಳಸಬೇಕು.ಧರ್ಮಾಚರಣೆ ಮಾಡುವುದು ಕರ್ತವ್ಯವಾಗಿದೆ ಹಾಗೂ ಧರ್ಮದ ಮೇಲಾಗುವ ಅನ್ಯಾಯದ ವಿರುಧ್ದ ಹೋರಾಡುವುದು ಪ್ರತಿಯೊಬ್ಬ ಧರ್ಮಪ್ರೇಮಿಗಳ ಜವಾಬ್ದಾರಿಯಾಗಿದೆ.ಧರ್ಮ ಉಳಿದಲ್ಲಿ ದೇಶದ ಉಳಿಯುವುದು ಹಾಗಾಗಿ ಧರ್ಮಾಚರಣೆ ಮಾಡಬೇಕು.ಹಿಂದೂ ಧರ್ಮದಲ್ಲಿ ಹುಟ್ಟುಹಬ್ಬವಿರಲಿ, ಉದ್ಘಾಟನೆ ಇರಲಿ, ಉಡುಪು, ಕೇಶರಚನೆ ಇತ್ಯಾದಿಗಳನ್ನು ಶಾಸ್ತ್ರೀಯವಾಗಿ ಮಾಡಲು ಹೇಳಲಾಗಿದೆ.ಶಾಸ್ತ್ರಾನುಸಾರ ಮಾಡಿದ್ದಲ್ಲಿ ಚೈತನ್ಯವನ್ನು ಗ್ರಹಣ ಮಾಡಿ ಸಮಾಜವನ್ನು ಸುಸಂಸ್ಕೃತ ಮತ್ತು ಸಾತ್ತ್ವಿಕ ಮಾಡಲು ಸಾಧ್ಯ ಹಾಗಾಗಿ ಧರ್ಮಾಚರಣೆ ಮಹತ್ವವು ಗಮನಕ್ಕೆ ಬರುತ್ತದೆ” ಎಂದು ವಿಚಾರ ಮಂಡಿಸಿದರು.
ಶ್ರೀ.ಸುಬ್ರಹ್ಮಣ್ಯ ಭಟ್ ಇವರು ಮಾತನಾಡಿ ” ಪ್ರತಿಯೊಬ್ಬ ಜೀವಿಗಳಲ್ಲಿ ಈಶ್ವರನನ್ನು ಕಾಣುವ ಏಕೈಕ ಧರ್ಮವೇ ಸನಾತನ ಹಿಂದೂ ಧರ್ಮವಾಗಿದೆ.ಇಂದು ಹಿಂದೂ ಧರ್ಮವು ಅಪಾಯದಲ್ಲಿ ಇದೆ. ಮುಕ್ಕೋಟಿ ದೇವತೆಗಳು ವಾಸಿಸುವ ಗೋಮಾತೆಯ ಹತ್ಯೆಯಾಗುತ್ತಿದೆ ಇದನ್ನು ನಿಲ್ಲಿಸಲು ಪ್ರತಿಯೊಬ್ಬ ಹಿಂದೂ ಬಾಂಧವರು ಗೋಮಾತೆಯ ರಕ್ಷಣೆ ಮಾಡಬೇಕು” ಎಂದು ವಿಚಾರವನ್ನು ಮಂಡಿಸಿದರು.
ಶ್ರೀ.ಯಶವಂತ ದೇರಾಜೆ ಇವರು ಮಾತನಾಡಿ ” ಧರ್ಮದ ಅಧಿಷ್ಟಾನದೊಂದಿಗೆ ಧರ್ಮದ ರಕ್ಷಣೆಯ ಕಾರ್ಯ ವನ್ನು ಮಾಡಬೇಕು.ಧರ್ಮವೇ ಸಕಲ ಜೀವಿಗಳ ಒಳಿತನ್ನು ಬಯಸುತ್ತದೆ.ಧರ್ಮದ ಸಂಸ್ಥಾಪನೆಗಾಗಿ ಭಗವಂತ ಅವತಾರ ತಾಳುತ್ತಾನೆ.” ಎಂದು ವಿಚಾರ ಮಂಡಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಕು.ಸುಶ್ಮಿತಾ ಮತ್ತು ಕು.ಭವ್ಯಾ ಇವರು ಮಾಡಿದರು.ಕಾರ್ಯಕ್ರಮದಲ್ಲಿ ವೇದಮೂರ್ತಿಗಳಾದ ಶ್ರೀ.ಶಂಕರ್ ಗಣಪತಿ ಭಟ್ ಇವರು ವೇದಮಂತ್ರಪಠಣ ಮಾಡಿದರು.
ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸಾತ್ತ್ವಿಕ ಉತ್ಪಾದನೆಗಳ ಮತ್ತು ಆಧ್ಯಾತ್ಮಿಕ ಗ್ರಂಥಗಳ ಪ್ರದರ್ಶನ ಮತ್ತು ವಿತರಣೆ ಮಳಿಗೆಯನ್ನು ಹಮ್ಮಿಕೊಳ್ಳಲಾಯಿತು.ರಾಷ್ಟ್ರ ಮತ್ತು ಧರ್ಮ ರಕ್ಷಣೆಯ ಫ್ಲೆಕ್ಸ್ ಪ್ರದರ್ಶನವು ಜನರ ಗಮನಸೆಳೆದವು.
Click this button or press Ctrl+G to toggle between Kannada and English