ತುಮಕೂರು : “ಕಾಂಗ್ರೆಸ್ನವರು ತಾಲಿಬಾನಿಗಳಿಗೆ ಸಹಕಾರ ನೀಡುತ್ತಿದ್ದಾರೆ. ಪೌರತ್ವ ಕಾಯ್ದೆ ವಿಚಾರವಾಗಿ ಒಂದು ಪಿತೂರಿ ನಡೆಯುತ್ತಿದೆ. ಆ ಪಿತೂರಿಯಲ್ಲಿ ತಾಲಿಬಾನಿಗಳು, ಕಾಂಗ್ರೆಸ್ಸಿಗರು, ಕಮ್ಯೂನಿಸ್ಟರು ಒಟ್ಟಾಗಿ ಪಿತೂರಿ ಭಾಗ ಆಗಿರೋದು ದುರದೃಷ್ಟಕರ,” ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಗಂಭೀರ ಆರೋಪ ಮಾಡಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪಾಕಿಸ್ತಾನದಿಂದ ಆಫ್ಘಾನಿಸ್ತಾನದಿಂದ ಧಾರ್ಮಿಕ ಕಾರಣಕ್ಕೆ, ಭಯೋತ್ಪಾದಕ ಕಾರಣಕ್ಕೆ ಬಂದವರು ನಿರಾಶ್ರಿತರು. ಅವರಿಗಿದ್ದಿದ್ದು ಮೂರೇ ದಾರಿ ಸಾವು, ಮತಾಂತರ, ಪೂರ್ವಜನರನ್ನ ತೊರೆಯುವುದು. ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಿಂದ ಮತೀಯ ಕಾರಣಕ್ಕೆ ಬಂದವರು ನಿರಾಶ್ರಿತರು. ಅವರಿಗೆ ಭಾರತ ಆಶ್ರಯ ಕೊಡದೇ ಬೇರೆ ಯಾರು ಕೊಡುತ್ತಾರೆ. ಅದು ತಪ್ಪು ಎನ್ನುವುದಾದರೇ ಪಾಕಿಸ್ತಾನ ರಚನೆಗೆ ಯಾಕೆ ಕಾಂಗ್ರೆಸ್ ಅವಕಾಶ ಕೊಟ್ಟಿತು,” ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.
ಮತೀಯ ಆಧಾರದಲ್ಲಿ ದೇಶ ವಿಭಜನೆ ಮಾಡಿದ ಪಾಪದ ಕೂಸಿನ ಪರಿಣಾಮ ಇಂದು ಜನ ಸಂಕಷ್ಟ ಅನುಭವಿಸುತ್ತಿರುವುದು. ಹಿಂದೂ, ಸಿಖ್, ಬೌದ್ದರೂ ಪಾಕಿಸ್ತಾನ, ಬಾಂಗ್ಲದಲ್ಲಿ ಅಲ್ಪಸಂಖ್ಯಾತ ಆ ಕಾರಣಕ್ಕೆ ಅವರಿಗೆ ಪೌರತ್ವ ಕೊಡುವ ತಿರ್ಮಾನ ತೆಗೆದುಕೊಂಡಿರುವುದು. ಅದನ್ನು ವಿರೋಧ ಮಾಡುವಷ್ಟೇ ವಿರೋಧವನ್ನ ಪಾಕಿಸ್ತಾನ ರಚನೆಗೆ ಮಾಡಿದ್ದರೆ ಪಾಕಿಸ್ತಾನ ಹುಟ್ಟುತ್ತಲೇ ಇರಲಿಲ್ಲ ಎಂದರು.
ಪಾಕಿಸ್ತಾನ ಕಾಂಗ್ರೆಸ್ನ ಪಾಪದ ಕೂಸು, ಅದಕ್ಕೆ ಅವರೇ ಹೊಣೆ. ಭಯೋತ್ಪಾದಕರಿಗೆ ಪೌರತ್ವ ಕೊಡಬೇಕು ಎಂದು ಕಾಂಗ್ರೆಸ್ ಭಯಸುತ್ತಾ? ಭಯೋತ್ಪಾದಕರಿಗೆ ಪೌರತ್ವ ಕೊಟ್ಟರೆ ದೇಶ ಏನಾಗಬೇಕು? ದೇಶದ ನಾಗರೀಕರ ರಕ್ಷಣೆ ನಮ್ಮ ಕರ್ತವ್ಯ. ಅದನ್ನು ಮಾಡುತ್ತಿದ್ದೇವೆ. ಕಾಂಗ್ರೆಸ್ನವರು ತಾಲಿಬಾನಿಗಳ ಜೊತೆ ಸೇರಿ ಮೋದಿ ಸರ್ಕಾರ ಉರುಳಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ದೇಶದ ಜನ ಅವಕಾಶ ಕೊಡಲ್ಲ, ಇವರ ಹುನ್ನಾರ ಗೊತ್ತಿದೆ, ನಾವು ಅದನ್ನ ಬಯಲಿಗೆಳೆಯುತ್ತೇವೆ ಎಂದು ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದರು.
ಡಿಸಿಎಂ ಹುದ್ದೆ ಸಿಎಂ ಯಡಿಯೂರಪ್ಪನವರ ವಿವೇಚನೆಗೆ ಬಿಟ್ಟಿದ್ದು. ಅವರು ವರಿಷ್ಠರ ಜೊತೆ ಚರ್ಚಿಸಿ ನಿರ್ಧರಿಸುತ್ತಾರೆ. ಕೊಟ್ಟ ಮಾತು ಈಡೇರಿಸುತ್ತೇನೆ ಎಂದಿದ್ದಾರೆ. ಅದರ ಬಗ್ಗೆ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ನಾನು ಪಕ್ಷದ ನಿರ್ದೇಶನದಂತೆ ನಡೆದುಕೊಳ್ಳುತ್ತೇನೆ. ನಾನು ಸಚಿವ ಸ್ಥಾನ ಕೇಳಿರಲಿಲ್ಲ, ಆದರೂ ಕೊಟ್ಟಿದ್ದಾರೆ. ನಾಳೆ ಪಕ್ಷ ಸಚಿವ ಸ್ಥಾನದಿಂದ ಇಳಿ ಎಂದರೆ ಇಳಿಯುತ್ತೇನೆ. ಪಾರ್ಟಿಗಿಂತ ದೊಡ್ಡ ಸಂಗತಿ ಯಾವುದೂ ಇಲ್ಲ. ಪಾರ್ಟಿಯ ಸುಗ್ರೀವಾಜ್ಞೆಯನ್ನು ಎಲ್ಲರೂ ಪಾಲಿಸಬೇಕು ಎಂದು ಅವರವರ ಅಭಿಮಾನಿಗಳು ಅವರವರ ನಾಯಕರಿಗೆ ಡಿಸಿಎಂ ಸ್ಥಾನ ಕೊಡಬೇಕು ಎಂದು ಬಯಸುವುದರಲ್ಲಿ ತಪ್ಪೇನಿದೆ. ಏನೇ ಆದರೂ ಪಾರ್ಟಿ ನಿರ್ಣಯ ಮಾಡುತ್ತದೆ ಎಂದರು.
Click this button or press Ctrl+G to toggle between Kannada and English