ಬೆಂಗಳೂರು : ಮಹಿಳೆಯರು ಮತ್ತು ವೃದ್ಧೆಯರ ಗಮನವನ್ನು ಬೇರೆಡೆ ಸೆಳೆದು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಕಳ್ಳ ದಂಪತಿಗಳನ್ನು ಬಂಧಿಸುವಲ್ಲಿ ಕೋಣನಕುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೆ, ದಂಪತಿಗಳಿಂದ ಸುಮಾರು 7 ಲಕ್ಷ ಮೌಲ್ಯದ ಚಿನ್ನಾಭರಣವನ್ನೂ ವಶಕ್ಕೆ ಪಡೆಯಲಾಗಿದೆ.
ಬಂಧಿತ ದಂಪತಿಗಳನ್ನು ಮಂಜುಳ ಅಲಿಯಾಸ್ ಕಳ್ಳಿ ಮಂಜಿ ಮತ್ತು ಚೆಲುವರಾಯ ಅಲಿಯಾಸ್ ಚೆಲುವ ಎಂದು ಗುರುತಿಸಲಾಗಿದೆ.
ಈ ಕಳ್ಳ ದಂಪತಿಗಳು ಕಳೆದ ಹಲವು ವರ್ಷಗಳಿಂದ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಸುಮಾರು 100ಕ್ಕೂ ಅಧಿಕ ಕಳ್ಳತನ ಪ್ರಕರಣಗಳು ಇವರ ಮೇಲಿದೆ ಎನ್ನಲಾಗುತ್ತಿದೆ.
ಜ್ಯುವೆಲ್ಲರಿ ಶಾಪ್ಗಳಿಂದ ಹೊರ ಬರುತ್ತಿದ್ದ ವಯೋವೃದ್ಧೆಯರೆ ಇವರ ಟಾರ್ಗೆಟ್. ವಯೋವೃದ್ಧರು ಹಾಗೂ ಚಿನ್ನಾಭರಣ ಹಾಕಿಕೊಂಡು ಓಡಾಡುವ ಮಹಿಳೆಯರ ಪರಿಚಯ ಮಾಡಿಕೊಳ್ಳುತ್ತಿದ್ದ ಮಂಜುಳ ಅವರ ಬಳಿ ಸಲೀಸಾಗಿ ಮಾತು ಬೆಳೆಸಿ ನಂಬಿಕಸ್ಥ ಮನೋಭಾವವನ್ನು ಮೂಡಿಸುತ್ತಿದ್ದಳು.
ಹೀಗೆ ಮಾತನಾಡಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ಯುತ್ತಿದ್ದ ಮಂಜುಳ ನಂತರ ತನ್ನ ಪತಿಯ ಮೂಲಕ ದರೋಡೆ ಮಾಡಿಸುತ್ತಿದ್ದಳು. ಹೀಗಾಗಿ ಸುಬ್ರಮಣ್ಯಪುರ ಎಸಿಪಿ ಮಹಾದೇವ್ ಹಾಗೂ ಇನ್ಸ್ಪೆಕ್ಟರ್ ಧರ್ಮೇಂದ್ರ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚನೆ ಮಾಡಿದ್ದರು. ಕೊನೆಗೂ ಈ ಕಳ್ಳ ದಂಪತಿಗಳನ್ನು ಪತ್ತೆಹಚ್ಚುವಲ್ಲಿ ಕೋಣನಕುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
Click this button or press Ctrl+G to toggle between Kannada and English