ಮಂಗಳೂರು : ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಅವರ ಸ್ಮಂಸ್ಮರಣಾರ್ಥ ನೀಡಲಾಗುವ ’ಅಸ್ರಣ್ಣ ಪ್ರಶಸ್ತಿ-2019’ ಹಿರಿಯ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟರಿಗೆ ಪ್ರದಾನ ಮಾಡಲಾಗುವುದು.
ಆಸ್ರಣ್ಣ ಶಿಷ್ಯವೃಂದ, ಕದ್ರಿ ಮಂಗಳೂರು ಇವರು ಕೊಡ ಮಾಡುವ ಈ ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 21. ಶನಿವಾರ ಸಂಜೆ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸ್ಮಾರಕ ಸಭಾಭವನದಲ್ಲಿ ಜರಗಲಿದೆ.
ಪ್ರಸ್ತುತ ವಿಶ್ರಾಂತಜೀವನ ನಡೆಸುತ್ತಿರುವ ಪೆರುವಾಯಿಯವರು ಸುಮಾರು 50ವರ್ಷಗಳ ಕಾಲ ಯಕ್ಷಕಲಾ ಸೇವೆಯನ್ನು ವಿವಿಧ ಮೇಳಗಳಲ್ಲಿ ನಡೆಸಿರುತ್ತಾರೆ.
ಕುಂಡಾವು, ಧರ್ಮಸ್ಥಳ, ಪೊಳಲಿ, ಕಲಾವಿಹಾರ, ಪುತ್ತೂರು, ಕದ್ರಿ, ಬಪ್ಪನಾಡು, ಕುಂಬಳೆ ಸಹಿತ ಕಟೀಲು ಮೇಳಗಳಲ್ಲಿ ತನ್ನ ವೃತ್ತಿಜೀವನ ನಡೆಸಿರುವ ಶ್ರೀಯುತರು ಕಟೀಲು ಮೇಳವೊಂದರಲ್ಲೇ 35 ವರ್ಷತಿರುಗಾಟ ನಡೆಸಿದ ಅನುಭವಿ.
ಪೈವಳಿಕೆ ಐತಪ್ಪ ಶೆಟ್ಟಿ ಹಾಗೂ ಕುಡಾಣ ಗೋಪಾಲ ಕೃಷ್ಣ ಭಟ್ಟರ ಶಿಷ್ಯತ್ವ ಪಡೆದ ಇವರು ಅನೇಕ ಹಿರಿಯ ಕಲಾವಿದರ ಮಾರ್ಗದರ್ಶನ ಪಡೆದು ಪೌರಾಣಿಕ ಪ್ರಸಂಗಗಳ ವೈವಿಧ್ಯಮಯ ಪಾತ್ರಗಳಿಗೆ ಜೀವತುಂಬುವ ಮೂಲಕ ಕಲಾರಸಿಕರನ್ನು ರಂಜಿಸಿದ್ದಾರೆ ಎಂದು ಕಾರ್ಯಕ್ರಮದ ಸಂಘಟಕರಾದ ಎಸ್. ಪ್ರದೀಪ ಕುಮಾರ ಕಲ್ಕೂರ ಹಾಗೂ ಕದ್ರಿ ನವನೀತ ಶೆಟ್ಟಿ ಪ್ರಕಟಣೆಯ ಮೂಲಕ ತಿಳಿಸಿದರು.
Click this button or press Ctrl+G to toggle between Kannada and English