ವಿಶ್ವ ಕೊಂಕಣಿ ಕೇಂದ್ರ ’ಕ್ಷಮತಾ ಯು ಗೆಟ್ ಇನ್’ ಸಮಾರೋಪ ಸಮಾರಂಭ

1:42 PM, Tuesday, December 17th, 2019
Share
1 Star2 Stars3 Stars4 Stars5 Stars
(No Ratings Yet)
Loading...

kshamata

ಮಂಗಳೂರು : ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ಕ್ಷಮತಾ ಯೋಜನೆಯಡಿಯಲ್ಲಿ ಕರಾವಳಿ ಜಿಲ್ಲೆಗಳ ಕಾಲೇಜುಗಳ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಹಾಗೂ ಪದವೀಧರರಿಗೆ ಹಲವು ನಿಯೋಜನೆಗಳೊಂದಿಗೆ ಉದ್ಯೋಗ ಸಾಮರ್ಥ್ಯವನ್ನು ವೃದ್ಧಿಸಲು ಸಹಾಯವಾಗುವಂತೆ ಮುಂಬಯಿ ಜ್ಯೋತಿ ಲ್ಯಾಬೊರೆಟರೀಸ ಸಂಸ್ಥೆ (ಉಜಾಲಾ) ಜಂಟಿ ಆಡಳಿತ ನಿರ್ದೇಶಕ ಹಾಗೂ ಸಿ. ಇ. ಒ. ಶ್ರೀ ಉಲ್ಲಾಸ ಕಾಮತ್ ಇವರು ರೂಪಿಸಿರುವ ’ಕ್ಷಮತಾ ಯು ಗೆಟ್ ಇನ್’ ಯೋಜನೆಯ ಶಿಬಿರದ ಸಮಾರೋಪ ಸಮಾರಂಭ ಡಿ.14-12-2019 ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು.

ವಿಶ್ವ ಕೊಂಕಣಿ ಕೇಂದ್ರ ಸ್ಥಾಪಕ ಅಧ್ಯಕ್ಷ ಶ್ರೀ ಬಸ್ತಿ ವಾಮನ ಶೆಣೈ ಕಾರ್ಯಕ್ರಮದ ಅಧ್ಯಕ್ಷ ವಹಿಸಿದ್ದರು. ’ವಿಶನ್ ಟಿ. ವಿ. ಎಮ್ 2030’ (ವಿಶನ್ ಟಿ. ವಿ. ಎಮ್ 2030) ಪೂರಕ ವಾಗಿರುವ ’ಕ್ಷಮತಾ ಯು ಗೆಟ್ ಇನ್’ ಶಿಬಿರಕ್ಕೆ ದ.ಕ ಜಿಲ್ಲೆ ಯ ಬೇರೆ ಬೇರೆ ಕಾಲೇಜಿನಿಂದ 70 ವಿದ್ಯಾರ್ಥಿಗಳು ದಾಖಲಾಗಿದ್ದರು. ವಿಶ್ವ ಕೊಂಕಣಿ ಕೇಂದ್ರ ಕೋಶಾಧಿಕಾರಿ ಶ್ರೀ ಬಿ. ಆರ್. ಭಟ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ 6 ದಿವಸಗಳ ತರಬೇತಿ ಶಿಬಿರದಿಂದ ವಿದ್ಯಾರ್ಥಿಗಳಿಗೆ ಮುಂದಿನ ಜೀವನಕ್ಕೆ ತುಂಬಾ ಉಪಯೋಗವಾಗುವುದು ಎಂದು ತಿಳಿಸಿ ಶುಭ ಹಾರೈಸಿದರು. ವಿಶ್ವ ಕೊಂಕಣಿ ಕೇಂದ್ರ ನಿರ್ದೇಶಕ ಶ್ರೀ ಗುರುದತ್ತ ಬಂಟ್ವಾಳಕಾರ ಉಪಸ್ಥಿತರಿದ್ದರು.

ಡಿ. 09-12-2019ರಿಂದ 14-12-2019 ರವರೆಗೆ 6 ದಿವಸಗಳ ಶಿಬಿರದಲ್ಲಿ ಶಿಬಿರಾರ್ಥಿಗಳು ತಾವು ಪಡೆದ ಅನುಭವಗಳನ್ನು ಹಾಗೂ ವಿವಿಧ ಚಟುವಟಿಕೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಮುಖ್ಯ ಅತಿಥಿಗಳು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಅಭಿನಂದಿಸಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English