ವಿಜಯಕುಮಾರ್ ಶೆಟ್ಟಿ ಪಕ್ಷದಲ್ಲಿ ಮೂಲೆಗುಂಪಾಗಿದ್ದಾರೆ : ಭಂಡಾರಿ

7:42 PM, Tuesday, October 30th, 2012
Share
1 Star2 Stars3 Stars4 Stars5 Stars
(4 rating, 5 votes)
Loading...

Monappa Bhandaryಮಂಗಳೂರು : ಕಾಂಗ್ರೆಸ್ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿಯವರ ಇತ್ತೀಚಿನ ಹೇಳಿಕೆಗೆ ಉತ್ತರವಾಗಿ ನಗರದ ಬಿ.ಜೆ.ಪಿ. ಕಚೇರಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಬಿ.ಜೆ.ಪಿ. ಜಿಲ್ಲಾ ವಕ್ತಾರ ಹಾಗೂ ವಿದಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಅವರು, ವಿಜಯಕುಮಾರ್ ಶೆಟ್ಟಿ ಪಕ್ಷದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದ್ದು ಮೂಲೆಗುಂಪಾಗಿದ್ದಾರೆ. ಹಾಗಾಗಿ ಅವರಿಗೆ ಕಳೆದ ಚುನಾವಣೆಯಲ್ಲಿ ಟಿಕೆಟ್ ಸಿಕ್ಕಿರಲಿಲ್ಲ ಆದರೆ ಮುಂದಿನ ಚುನಾವಣೆಯಲ್ಲಿ ಸೀಟು ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಕಾಂಗ್ರೆಸ್ ನಾಯಕರ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಕಾಂಗ್ರೆಸ್ ನಿಂದ ತಿರಸ್ಕೃತಗೊಂಡ ನಾಯಕ ಎಂದು ಭಂಡಾರಿ ಲೇವಡಿ ಮಾಡಿದರು. ಸಿ.ಟಿ ರವಿ ಪ್ರಾಮಾಣಿಕವಾಗಿ ಕಳೆದ ವಿದಾನಸಭೆ ಚುನಾವಣೆಯಲ್ಲಿ ತಮ್ಮ ಸಂಪತ್ತನ್ನು ಘೋಷಿಸಿದ್ದು ವಿಜಯ ಕುಮಾರ್ ಶೆಟ್ಟಿ, ಸಿ.ಟಿ ರವಿ ಸಂಪತ್ತಿನ ಬಗ್ಗೆ ಪ್ರಶ್ನಿಸಿದ್ದಾರೆ ರವಿಯವರನ್ನು ಪ್ರಶ್ನಿಸುವ ಇವರು ಮೊದಲ ಬಾರಿಗೆ ಚುನಾವನೆಗೆ ನಿಂತಾಗ ತಮ್ಮಲ್ಲಿ ಎಷ್ಟು ಸಂಪತ್ತು ಇತ್ತು ಹಾಗೂ ಇವತ್ತು ಎಷ್ಟಿದೆ ಅದು ಯಾವ ರೀತಿಯಾಗಿ ಸಂಪಾದಿಸಿದ್ದು ಎಂಬುದನ್ನು ಬಹಿರಂಗ ಪಡಿಸಲಿ. ಎಸ್.ಇ.ಝೆಡ್ ಮುಖಾಂತರ ಇವರು ಹಣ ಮಾಡಿಕೊಂಡಿದ್ದಾರೆ ಎಂದು ಜನಸಾಮಾನ್ಯರೂ ಮಾತನಾಡಿಕೊಳ್ಳುತ್ತಿದ್ದಾರೆ ಆ ಬಗ್ಗೆ ಸ್ಪಷ್ಟನೆ ನೀಡಲಿ ಎಂದರು.

ಕೇಂದ್ರವು ರಾಜ್ಯದ ಪಾಲಿನ ಸಂವಿದಾನ ಬದ್ದವಾದ ಹಣವನ್ನು ಕೊಟ್ಟಿದೆ. ವಿಶೇಷವಾಗಿ ಏನೂ ಅನುದಾನ ಬಿಡುಗಡೆ ಮಾಡಿಲ್ಲ. ಬರ ಪರಿಹಾರಕ್ಕಾಗಿ ರಾಜ್ಯವು 3 ಬಾರಿ ನಿಯೋಗ ಕೊಂಡು ಹೋದರೂ ಕೂಡ ಆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ರಾಜ್ಯ ನಾಯಕರು ಈ ಬಗ್ಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು. ರಾಜ್ಯ ಸರಕಾರದಿಂದ ಲೆಕ್ಕ ಕೇಳುವ ಸೋನಿಯಾರವರು ಇವರ ಸರಕಾರವು 2ಜಿ ಸ್ಪೆಕ್ಟ್ರಂ, ಆದರ್ಶ ಸೊಸೈಟಿ ಹಗರಣ, ಕಾಮನ್ ವೆಲ್ತ್ ಹಗರಣ ಹಾಗೂ ಇನ್ನೂ ಅನೇಕ ಹಗರಣಗಳಲ್ಲಿ ಸಾವಿರಾರು ಕೋಟಿ ಅವ್ಯವಹಾರಗಳನ್ನು ಮಾಡಿದ್ದಾರೆ. ಈ ಬಗ್ಗೆ ದೇಶದ ಜನರಿಗೆ ಲೆಕ್ಕ ಕೊಡಲಿ ಎಂದರು.

ಯು.ಪಿ.ಎ. ಅಧ್ಯಕ್ಷೆ ರಾಜ್ಯಕ್ಕೆ ಬರುವ ಸಂದರ್ಭದಲ್ಲಿ ರಾಜ್ಯದ ಬರದ ಬಗ್ಗೆ ಯಾವುದಾದರೂ ಪ್ಯಾಕೇಜ್ಗಳನ್ನು ಎಂದು ಇಲ್ಲಿನ ಜನರು ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು ಆದ್ರೆ ಅವರು ಎಲ್ಲರಿಗೂ ನಿರಾಶೆ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು. ಬಿಜೆಪಿಯು ನವಂಬರ್ 3 ರಂದು ನಗರದ ಸಂಘನಿಕೇತನದಲ್ಲಿ ಜಿಲ್ಲಾ ಮಟ್ಟದ ಸಾಮಾನ್ಯ ಸಭೆಯನ್ನು ಹಮ್ಮಿಕೊಂಡಿದ್ದು ಇದಕ್ಕೆ ರಾಜ್ಯ ಬಿಜೆಪಿ ಉಪಾದ್ಯಕ್ಷ ವಿಧಾನ ಪರಿಷತ್ ಸದಸ್ಯ ಬಾನುಪ್ರಕಾಶ್,ರಾಜ್ಯ ಎಸ್.ಸಿ.ಮೋರ್ಚಾ ಅಧ್ಯಕ್ಷ ಕೃಷ್ಣ ಮೂರ್ತಿ ಹಾಗೂ ಎಲ್ಲಾ ಜಿಲ್ಲಾ ಮಟ್ಟದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳುವರು ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಶ್ರೀಕರ ಪ್ರಭು, ಜಿಲ್ಲಾ ಉಪದ್ಯಕ್ಷೆ ಪುಷ್ಪಲತ ಶೆಟ್ಟಿ, ದಕ್ಷಿಣ ಯುವ ಮೋರ್ಚಾ ಅಧ್ಯಕ್ಷ ರಾಘವೇಂದ್ರ, ರಾಜ ಗೋಪಾಲ್, ಸುಮನಾ ಶರಣ್ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English