ಕೊಣಾಜೆ : ಕದ್ದ ಜಾನುವಾರುಗಳ ಸಾಗಾಟ : ಮೂವರು ಆರೋಪಿಗಳ ಬಂಧನ

4:54 PM, Tuesday, December 17th, 2019
Share
1 Star2 Stars3 Stars4 Stars5 Stars
(No Ratings Yet)
Loading...

Konaje

ಕೊಣಾಜೆ : ದನಗಳ್ಳರು 1 ಲಕ್ಷದ 4 ಸಾವಿರ ಮೌಲ್ಯದ ಜಾನುವಾರುಗಳನ್ನು ಕದ್ದು ಮಾರುತಿ ಓಮ್ನಿ ಕಾರಿನಲ್ಲಿ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಕೊಣಾಜೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ ಕದ್ದ ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳನ್ನು ಮೂಡುಬಿದ್ರೆಯ ಗಂಟಲಕಟ್ಟೆ ನಿವಾಸಿ ಶಾಫಿ ಯಾನೆ ಕಲಂದರ್‌ ಶಾಫಿ (28), ದಬ್ಬೇಲಿ ಲಚ್ಚಿಲ್‌ ಮನೆ ನಿವಾಸಿ ಸಾಧಿಕ್‌ ಯಾನೆ ಮೊಹಮ್ಮದ್ ಸಾಧಿಕ್ (30), ಬಂಟ್ವಾಳ ನರಿಂಗಾನ ಗ್ರಾಮ ನಿವಾಸಿ ಆಸಿಫ್‌ ಯಾನೆ ಮೊಹಮ್ಮದ್‌ ಕಲಂದರ್‌ (24) ಅನ್ನು ಪೊಲೀಸರು ಬಂಧಿಸಿದ್ದಾರೆ.

Konaje

Konaje

ಕಳ್ಳತನ ಆಗಿರುವ ಹಿನ್ನಲೆಯಲ್ಲಿ ನೀಡಿದ ದೂರಿನ ಅನ್ವಯ ಪೊಲೀಸರು ಅಪರಾಧಿಗಳ ಶೋಧ ನಡೆಸುತ್ತಿದ್ದರು. ಕಳ್ಳರ ಆಂಬ್ಲಮೊಗರು ಗ್ರಾಮದ ಎಲ್ಯಾರ್‌ ಪದವಿನಲ್ಲಿ ಮಾರುತಿ ಓಮ್ನಿ ಕಾರಿನಲ್ಲಿ ಹೋಗುತ್ತಿದ್ದಾರೆ ಎಂದು ಖಚಿತ ಮಾಹಿತಿ ದೊರೆತ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Konaje

ಆರೋಪಿಗಳಿಂದ ದನಗಳು ಹಾಗೂ ಓಮಿನಿ ಕಾರು ವಶಕ್ಕೆ ಪಡೆದಿರುವ ಪೊಲೀಸರು ಒಟ್ಟು 2 ಲಕ್ಷ 10 ಸಾವಿರ ಮೌಲ್ವದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಹಾಗೆಯೇ ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳ ಪತ್ತೆ ನಡೆಸಲಾಗುತ್ತಿದೆ.

ಈ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಅವರ ನಿರ್ದೇಶನದಲ್ಲಿ ನಡೆಸಲಾಗಿದ್ದು ಪೊಲೀಸ್‌ ಉಪ ಆಯುಕ್ತರು ಅರುಣಾಂಗ್ಶ್ಯು ಗಿರಿ ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಪೊಲೀಸ್‌ ಉಪ ಆಯುಕ್ತರು ಲಕ್ಷ್ಮೀ ಗಣೇಶ್‌ ಅವರ ಮಾರ್ಗದರ್ಶನದಲ್ಲಿ ದಕ್ಷಿಣ ಉಪ ವಿಭಾಗದ ಎಸಿಪಿಯವರಾದ ಟಿ ಕೋದಂಡರಾಮ್‌ರವರ ನಿರ್ದೇಶನದಲ್ಲಿ, ಕೊಣಾಜೆ ಪೊಲೀಸ್‌ ನಿರೀಕ್ಷಕರಾದ ಯೋಗೀಶ್ವರನ್‌, ಪ್ರೊ.ಪಿ.ಎಸ್‌.ಐ. ಶರಣಪ್ಪ ಭಂಡಾರಿ, ಪ್ರೊ. ಪಿ.ಎಸ್‌.ಐ ಶಿವಕುಮಾರ, ಜಗನ್ನಾಥ್, ಅಶೋಕ್ ಕುಮಾರ್, ನಾಗರಾಜ್, ವಿಜಯ್ ಕುಮಾರ್, ಚಂದ್ರಕಾಂತ್, ರಾಜು ಹರನಾಲ್‌, ಮಂಜುನಾಥ್ ಹಾಗೂ ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳದ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

Konaje
konaje5
konaje6

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English