ಮಡಿಕೇರಿ : ಗರಗಂದೂರು ಗ್ರಾಮದ ಕಾಫಿ ತೋಟವೊಂದರಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಅದೇ ತೋಟದ ರೈಟರ್‌ವೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಶಂಕರಪ್ಪ ಎಂಬುವವರ ತೋಟದಲ್ಲಿ ರೈಟರ್ ಆಗಿದ್ದ ಉಣ್ಣಿಕೃಷ್ಣ ಎಂಬುವವರೇ ಬಂಧಿತ ಆರೋಪಿ. ಖಚಿತ ಮಾಹಿತಿ ದೊರೆತ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪರಿಶೀಲನೆ ನಡೆಸಿದಾಗ ಕಾಫಿ ತೋಟದೊಳಗೆ ಅಕ್ರಮವಾಗಿ ಗಾಂಜಾಗಿಡಗಳನ್ನು ಬೆಳೆಸಿರುವುದು ಕಂಡು ಬಂತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ ಅಧಿಕಾರಿಗಳು ಉಣ್ಣಿಕೃಷ್ಣ ಅವರನ್ನು ಮಾಲು ಸಹಿತ ವಶಕ್ಕೆ ಪಡೆದು ತೋಟದ ಮಾಲೀಕ ಶಂಕರಪ್ಪ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ|| ಸುಮನ್ ಡಿ. ಪೆನ್ನೇಕರ್ ಅವರ ನಿರ್ದೇಶನದಂತೆ ಸೋಮವಾರಪೇಟೆ ಉಪ ವಿಭಾಗದ ಉಪ ಅಧೀಕ್ಷಕರಾದ ಪಿ.ಕೆ.ಮುರುಳೀಧರ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್, ಸುಂಟಿಕೊಪ್ಪ ಠಾಣಾ ಉಪ ನಿರೀಕ್ಷಕ ತಿಮ್ಮಪ್ಪ ಬಿ., ಎಎಸ್‌ಐ ಗಳಾದ ರಮೇಶ್, ಗಣೇಶ್ ಪಿ.ಎಂ ಹಾಗೂ ಸಿಬ್ಬಂದಿಗಳಾದ ಸತೀಶ್ ಯು.ಎ, ಪುನೀತ್‌ಕುಮಾರ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English