ರೌಡಿ ಶೀಟರ್ ಉಮೇಶ್‌ ರೈ ಕೊಲೆ ಆರೋಪಿಗಳ ಬಂಧನ

8:02 PM, Friday, September 24th, 2010
Share
1 Star2 Stars3 Stars4 Stars5 Stars
(No Ratings Yet)
Loading...

ದ ಕ ಎಸ್ ಪಿ ಪತ್ರಿಕಾಗೋಷ್ಠಿಮಂಗಳೂರು : ರೌಡಿ ಶೀಟರ್  ತಿಂಗಳಾಡಿ ಉಮೇಶ್‌ ರೈ (36)  ಕೊಲೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಡಿ. ಅಮ್ಮಣ್ಣ ರೈ, ಅಮ್ಮಣ್ಣ ರೈ ಅವರ ಬಾವ ಈಶ್ವರಮಂಗಲ ನಿವಾಸಿ ಜಯರಾಜ ರೈ ಹಾಗೂ ಅರಿಯಡ್ಕ ನಿವಾಸಿಗಳಾದ ರಾಮಚಂದ್ರ ನಾಯ್ಕ ಮತ್ತು ರಾಮಕೃಷ್ಣ ನಾಯ್ಕ ಬಂದಿತ ಆರೋಪಿಗಳು ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಬ್ರಹ್ಮಣ್ಯೇಶ್ವರ ರಾವ್ ಅವರು ಇಂದು ಸುದ್ದಿಗೋಷ್ಠಿ ಯಲ್ಲಿ ತಿಳಿಸಿದ್ದಾರೆ.

ಉಮೇಶ್ ರೈ ಕೊಲೆ ಆರೋಪಿಗಳು
ಉಮೇಶ್‌ ರೈ ಅವರನ್ನು ಮಾರ್ಚ್‌ 29 ರಂದು  ಜಯರಾಜ ರೈ ಅವರ ಮನೆಗೆ ಕರೆಸಿ ಆರೋಪಿಗಳು ಕೊಲೆಗೈದಿದ್ದರು.
ಪುತ್ತೂರು ಕಸಬಾ ಗ್ರಾಮದ ಪಡೀಲು ವಿಜಯನಗರ ಲೇ‌ಓಟ್ ಎಂಬಲ್ಲಿ ವಾಸ್ತವ್ಯವಿರುವ ಶ್ರೀಮತಿ ಸೌಮ್ಯ ರೈ ಯವರ ಗಂಡ ಉಮೇಶ್ ರೈ ಎಂಬವರು ದಿನಾಂಕ 26/03/2010 ರಂದು ಸಂಜೆ 5 ಗಂಟೆಗೆ ಪುತ್ತೂರು ಪಡೀಲ್ ವಿಜಯನಗರ ಲೇ‌ಓಟ್ ನಿಂದ ತನ್ನ ಸ್ನೇಹಿತರ ನೊಂದಣಿ ಯಾಗದಿರುವ  ಅಲ್ಟೋ ಕಾರಿನಲ್ಲಿ ಈಶ್ವರಮಂಗಲದ ಸ್ನೇಹಿತ ಜಯರಾಜ್ ಎಂಬವರ ಮನೆಗೆ ಹೋಗುವುದಾಗಿ ತಿಳಿಸಿ ಹೋಗಿರುತ್ತಾರೆ.
ದಿನಾಂಕ 27/03/10 ರಂದು ಉಮೇಶ್ ರೈ ಸೌಮ್ಯರೊಂದಿಗೆ ಮೊಬೈಲ್ ಕರೆ ಮಾಡಿ ಈಶ್ವರ ಮಂಗಲದ ಜಯರಾಜ್ ಅವರ ಮನೆಯಲ್ಲಿರುವುದಾಗಿ ತಿಳಿಸಿದ್ದು ದಿನಾಂಕ 30/03/10 ರಂದು ಜಯರಾಜ್ ತನ್ನ ಮೊಬೈಲ್ನಿಂದ ಕರೆಮಾಡಿ ಸೌಮ್ಯರ ಗಂಡ ಉಮೇಶ್ ರೈಯವರನ್ನು ಬೆಳಗಾಂ ಪೊಲೀಸರು ಯಾವುದೋ ಕೇಸು ವಿಚಾರಣೆಗೆಂದು ಕರೆದುಕೊಂಡು ಹೋಗಿರುತ್ತಾರೆ ಇನ್ನು 15 ದಿನಗಳಲ್ಲಿ ಬರುತ್ತಾರೆಂದು ಸೌಮ್ಯ ಅವರಲ್ಲಿ  ಮೊಬೈಲ್ ಕರೆಮಾಡಿ ತಿಳಿಸಿದ್ದು ಹೆಚ್ಚಿನ ವಿವರ ಗಳು ನೀಡಿಲ್ಲ.
ಕಾಣೆಯಾದ ತನ್ನ ಗಂಡ ಉಮೇಶ್ ರೈಯನ್ನು ಪತ್ತೆ ಮಾಡಿಕೊಡಬೇಕೆಂದು ದಿನಾಂಕ 31/03/2010 ರಂದು ಸೌಮ್ಯ ಅವರು ನೀಡಿರುವ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಸಿಕೊಳ್ಳಲಾಗಿತ್ತು.
ಪ್ರಕರಣದ ತನಿಖೆಯನ್ನು ಆರಂಭಿಸಿದ ಪುತ್ತೂರು ಗ್ರಾಮಾಂತರ ಠಾಣೆ  ಪೊಲೀಸ್ ಉಪ-ನಿರೀಕ್ಷಕರಾದ  ಆನಂದ ಎಸ್,  ಇವರು ಪತ್ತೆಗೆ ಪ್ರಯತ್ನಿಸುತ್ತಿದ್ದು ಈ ವೇಳೆ ಉಮೇಶ ರೈ ಯ ಆತ್ಮಿಯ ಸ್ನೇಹಿತನಾದ ಜಯರಾಜ ಸುಮಾರು ಒಂದೂವರೆ ತಿಂಗಳಿನಿಂದ ಅವರ ಮನೆಯಲ್ಲಿ ಇಲ್ಲದೇ ಬೆಂಗಳೂರು ಕಡೆಗೆ ಹೋಗಿ ಇರುವ ಬಗ್ಗೆ ತಿಳಿದುಬಂತು. ಅಲ್ಲದೇ ಉಮೇಶ ರೈಯನ್ನು ಜಯರಾಜನೇ ಏನೋ ಉಪಾಯ ಹೂಡಿ ಮುಗಿಸಿರುವ ಬಗ್ಗೆ ಸಂಶಯ ಬಂತು.
ಈಗಾಗಲೇ ಒಂದುವರೆ ತಿಂಗಳಿನಿಂದ ಕಾಣೆಯಾಗಿದ್ದ ಜಯರಾಜ್ ರೈ ಊರಿಗೆ ದಿನಾಂಕ 23/09/10ರಂದು ಬರುತ್ತಿದ್ದಾರೆಂದು ದೊರೆತ ಮಾಹಿತಿಯಂತೆ ಸಿಬ್ಬಂದಿಯ ಜೊತೆ ಆರಿಯಡ್ಕ ಗ್ರಾಮದ ಪಾಪೆಮಜಲಿನಲ್ಲಿ ಕಾಯುತ್ತಿದ್ದಂತೆ ಜಯರಾಜನು ಆರಿಯಡ್ಕ ಕಡೆಯಿಂದ ತನ್ನ ಮನೆಯ ಕಡೆಗೆ ಬರುತ್ತಿದ್ದವನನ್ನು ವಶಕ್ಕೆ ತೆಗೆದುಕೊಂಡು ಕಾಣೆಯಾದ ಉಮೇಶ ರೈ ಪ್ರಕರಣಕ್ಕೆ ಸಂಬಧಿಸಿದಂತೆ ವಿಚಾರಿಸಿದಾಗ ತನ್ನ ಕೃತ್ಯದ ಬಗ್ಗೆ ಒಪ್ಪಿಕೊಂಡಿದ್ದು,  ಎಲ್ಲಾ ಮಾಹಿತಿಗಳನ್ನು ನೀಡಿರುತ್ತಾನೆ.
ವಿಚಾರಣೆಯ ವೇಳೆ ಈ ಕೃತ್ಯಕ್ಕೆ ಕಾರಣ ಜಯರಾಜ್ ಮತ್ತು ಅಮಣ್ಣ ರೈ ಎಂಬವರು ಮುತ್ತಪ್ಪ ರೈ ಸಂಬಂದಿಕರಾಗಿದ್ದು ಮೃತ ಉಮೇಶ ರೈಯು ಮುತ್ತಪ್ಪ ರೈ ವಿರೋಧಿ ಗುಂಪಿಗೆ ಮಾಹಿತಿ ನೀಡುತ್ತಿದ್ದಾನೆ ಎಂದು ಭಾವಿಸಿ ಅದರಂತೆ ಉಮೇಶ ರೈಯನ್ನು ಜಯರಾಜನು ಅರಿಯಡ್ಕ ಗ್ರಾಮದ ಪಾಪೆಮಜಲಿನ ತನ್ನ ಸ್ನೇಹಿತರಾದ ರಾಮಚಂದ್ರ ನಾಯ್ಕ ಮತ್ತು ರಾಮಕೃಷ್ಣ ನಾಯ್ಕ ರೊಂದಿಗೆ ಸೇರಿ ದಿನಾಂಕ 27/03/2010 ರಂದು ಮದ್ಯಾಹ್ನ ಸುಮಾರು 3.30 ಗಂಟೆಯ ಸುಮಾರಿಗೆ ತನ್ನ ಮನೆಯಾದ ಬಡಗನ್ನೂರು ಗ್ರಾಮದ ಅನಿಲೆ ಎಂಬಲ್ಲಿ ಕೊಲೆ ಮಾಡಿ ಉಮೇಶ ರೈಯ ಮೃತದೇಹವನ್ನು ತೋಟದ ಸಮೀಪ ಹೂತುಹಾಕಿ ಕೊಲೆ ಕೃತ್ಯದ ಸಾಕ್ಷ್ಯಾಧಾರ ಗಳು ಸಿಗದಂತೆ ಮಾಡಿರುವುದಾಗಿ ತಿಳಿಸಿರುತ್ತಾನೆ.
ಕೊಲೆಯಾದ ಉಮೇಶ ರೈಯು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ರೌಡಿ ಶೀಟರ್ ವ್ಯಕ್ತಿಯಾಗಿದ್ದು ಈತನ ಮೇಲೆ ಪುತ್ತೂರು ಗ್ರಾಮಾಂತರ, ಪುತ್ತೂರು ನಗರ, ಸುಳ್ಯ, ಸುಬ್ರಮಣ್ಯ ಪೊಲೀಸು ಠಾಣೆಗಳಲ್ಲಿ ಕಳ್ಳತನ, ಹಲ್ಲೆ ,ಕೊಲೆಗೆ ಪ್ರಯತ್ನ ಮುಂತಾದ ಪ್ರಕರಣಗಳು ದಾಖಲಾಗಿರುತ್ತದೆ.
ಈ ಪ್ರಕರಣದ ಆರೋಪಿಯಾದ ಜಯರಾಜನು ಪುತ್ತೂರು ಗ್ರಾಮಾಂತರ ಠಾಣೆಯ ರೌಡಿ ಹಾಳೆ ಯನ್ನು ಹೊಂದಿದ್ದು ಮೃತ ಉಮೇಶ ರೈಯ ಸಹಚರನಾಗಿದ್ದನು. ಜಯರಾಜ ತನ್ನ ಕೃತ್ಯ ನಡೆಸಿದ ಬಗ್ಗೆ ವಿವರವಾಗಿ ತಿಳಿಸಿದ್ದುದ್ದಲ್ಲೇ ಈ ಕೊಲೆ ಕೃತ್ಯದಲ್ಲಿ  ಜಯರಾಜ ಶೆಟ್ಟಿ ಬಿನ್ ರಮಾನಾಥ ರೈ ವಾಸ: ಅನಿಲೆ ಮನೆ, ಬಡಗನ್ನೂರು ಗ್ರಾಮ  ಅಮ್ಮಣ್ಣ ರೈ ಬಿನ್ ದಿ. ತಿಮ್ಮಣ್ಣ ರೈ ಪಾಪೆಮಜಲು ಅರಿಯಡ್ಕ ಗ್ರಾಮ,  ರಾಮಚಂದ್ರ ನಾಯ್ಕ ಬಿನ್ ಕೃಷ್ಣ ನಾಯ್ಕ ಮೂಡಿಕೆ ಮನೆ, ಬಡಗನ್ನೂರು ಗ್ರಾಮ, ಮತ್ತು  ರಾಮಕೃಷ್ಣ ನಾಯ್ಕ ಬಿನ್ ಕೃಷ್ಣ ನಾಯ್ಕ ಮೂಡಿಕೆ ಮನೆ ಬಡಗನ್ನೂರು ಗ್ರಾಮ  ಎಂಬವರುಗಳು ತನ್ನ ಜೊತೆ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂದು ತಿಳಿಸಿದ್ದಾನೆ. ಎಂದು ವಿವರ ನೀಡಿದ ಎಸ್ಪಿಯವರು  ಪ್ರಕರಣ ಎಲ್ಲಾ ಆರೋಪಿಗಳನ್ನು ಸೆ.23 ರಂದು  ಬಂಧಿಸಲಾಗಿದೆ. ಎಂದು ತಿಳಿಸಿದ್ದಾರೆ.
ಸದ್ರಿ ಪ್ರಕರಣದ ತನಿಖೆಯನ್ನು ಸಹಾಯಕ ಪೊಲೀಸು ಅಧೀಕ್ಷಕರು ಪುತ್ತೂರು ಮಾರ್ಗದರ್ಶನ ದಂತೆ ಪೊಲೀಸು ವೃತ್ತ ನಿರೀಕ್ಷಕರು ಪುತ್ತೂರು ಗ್ರಾಮಾಂತರ ವೃತ್ತ ಇವರು ತನಿಖೆಯನ್ನು ನಡೆಸುತ್ತಿದ್ದಾರೆ.
ಈ ಪ್ರಕರಣದ ಪತ್ತೆ ಕಾರ್ಯದಲ್ಲಿ  ಬಿ.ಕೆ.ಮಂಜಯ್ಯ ಪೊಲೀಸು ವೃತ್ತ ನಿರೀಕ್ಷಕರು ಪುತ್ತೂರು ಗ್ರಾಮಾಂತರ ವೃತ್ತ,   ಎಸ್.ಆನಂದ ಪೊಲೀಸು ಉಪ ನಿರೀಕ್ಷಕರು ಪುತ್ತೂರು ಗ್ರಾಮಾಂತರ ಠಾಣೆ,  ಹೆಚ್.ಸಿ  ರಮೇಶ ಗೌಡ, ಹೆಚ್.ಸಿ  ವೆಂಕಟೇಶ ಭಟ್, ಪೊಲೀಸ್ ಕಾನ್‌‌ಸ್ಟೇಬಲ್‌ಗಳಾದ  ಸತೀಶ, ‍ ನಾರಾಯಣ,   ಉದಯ ಗೌಡ, ಪ್ರಮೋದ್, ಸುರೇಂದ್ರ, ಹರಿಪ್ರಸಾದ್, ಧನೇಶ, ರಮೇಶ,  ನರೇಶ. ಪಾಲ್ಗೊಂಡಿದ್ದರು.

image description

1 ಪ್ರತಿಕ್ರಿಯೆ - ಶೀರ್ಷಿಕೆ - ರೌಡಿ ಶೀಟರ್ ಉಮೇಶ್‌ ರೈ ಕೊಲೆ ಆರೋಪಿಗಳ ಬಂಧನ

  1. wclkuwn, etlbarvxxlru.com/

    ttao0G aliilkkdevpb, [url=http://eebiyfthyect.com/]eebiyfthyect[/url], [link=http://vkdasqovesou.com/]vkdasqovesou[/link], http://tltszxdqzcyu.com/

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English